ಮಾನವಿ: ರುಚಿರುಚಿಯಾದ ತಾಜಾ ಲಿಂಬುಸೋಡಾದಿಂದ ಪರಿಚಿತನಾದ ಗೌಡ ..ಸೋಡಾ ಸೇವಿಸಲು ಗೌಡನ ಅಂಗಡಿ ಮುಂದೆ ಯಾವಾಗಲೂ ಜನ ಗುಂಪು ಗುಂಪಾಗಿ ಮುಗಿಬೀಳ್ತಾರೆ ಅದರಲ್ಲೂ ಬೇಸಿಗೆ ಕಾಲದಲ್ಲಂತೂ ತಂಪು ಪಾನೀಯಗಳಿಗೆ ಮೋರೆ ಹೋಗಿವವವರು, ಗೌಡ ಮಾಡುವಂತಹ ಲಿಂಬುಸೋಡ ಸೇವಿಸಲು ಮುಗಿಬಿಳ್ತಾರೆ.. ಮೂಲೆಮೂಲೆಯಿಂದ ಸೋಡಾ ಸವಿಯಲು ಜನ ಬರ್ತಾರೆ.. ಅಷ್ಟೊಂದು ಫೇಮಸ್ ಆಗಿದೆ ಈ ಲಿಂಬು ಸೋಡಾ .ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಬಸ್ ನಿಲ್ದಾಣದ ಮುಂಭಾಗ ಶ್ರೀ ಸ್ವಾಮಿ ವಿವೇಕಾನಂದ ನಗರದಲ್ಲಿ ಆದಪ್ಪ ಗೌಡ ಎಂಬು ವವರು ಸುಮಾರು ವರ್ಷಗಳಿಂದ ಸೋಡಾ ಮಾಡುತ್ತಲೇ ಬರುತ್ತಿದ್ದಾರೆ…ಇನ್ನು ಈ ಆದಪ್ಪ ಗೌಡ ಸ್ಪೆಷಾಲಿಟಿ ಏನ್ ಅಂದ್ರೆ ಪ್ರಸ್ತುತ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೂ ಈ ಗೌಡನಿಗೂ ನಂಟಿದೆ. ಹೇಗೆ ಅಂತಿರಾ..!
ಅಮರೇಗೌಡ ಪಾಟೀಲ್ ಬಯ್ಯಾಪೂರ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕ ರಾಗಿ ಮೊದಲ ಬಾರಿಗೆ ಆಯ್ಕೆಯಾಗಿ ಗೆಲುವಿನ ನಗೆ ಬೀರಿದ ದಿನವೇ ಗೌಡ ತನ್ನ ಸೋಡಾ ವ್ಯಾಪಾರ ಮಾಡುವುದಕ್ಕೆ ಪ್ರಾರಂಭ ಮಾಡಿದ.ಚುನಾವಣೆ ಫಲಿತಾಂಶದ ದಿನವೇ ತೆಗೆದ ಸೋಡಾ ಅಂಗಡಿ ಅಂದಿನಿಂದ ಇಂದಿನವರೆಗೂ ಉತ್ತಮ ಫಲಿತಾಂಶದಲ್ಲಿದೆ..
ಅಂದು ಗೆಲುವಿನ ನಗೆಯಲ್ಲಿ ಸೋಡಾ ಸೇವಿಸಿದ ಜನಪ್ರತಿನಿಧಿಗಳು ಇಂದಿಗೂ ಸಹ ಮರೆತಿಲ್ಲ.. ಅಂದಿನಿಂದ ಇಂದಿನವರೆಗೆ ಆದಪ್ಪ ಗೌಡನ ಸೋಡಾ ಅಂದ್ರೆ ಬಾಯಲ್ಲಿ ನೀರು ತರಿಸುತ್ತದೆ.. ಅದೇ ಸ್ವಾದ !..ಅದೇ ರುಚಿ ..!ಯಾವುದೇ ರಾಸಾಯನಿಕಗಳನ್ನು ಬಳಸದೆ ತಯಾರುಮಾಡಿ ನೀಡುವಂತಹ ಲಿಂಬುಸೋಡ ಸವಿಯಲು ಜನ ಮುಗಿಬೀಳುತ್ತಾರೆ.. ಅದರಲ್ಲೂ ಕರ್ನಾಟಕದಲ್ಲಿ ಇಂತಹ ರುಚಿಕರ ಸೋಡಾ ನೀವು ಸೇವಿಸಲು ಸಾಧ್ಯವೇ ಇಲ್ಲ ಬಿಡಿ.
ಕಲ್ಯಾಣ ಕರ್ನಾಟಕದಲ್ಲಿ ಆದಪ್ಪಗೌಡ ಸಿಕ್ಕಾಪಟ್ಟೆ ಫೇಮಸ್ …ಅಷ್ಟೇ ಅಲ್ಲದೆ ಒಂದು ಬಾರಿಗೆ ಸುಮಾರು 150 200 ಜನರಿಗೆ ಒಂದೇ ಬಾರಿಗೆ ಲಿಂಬು ಸೋಡಾ ನೀಡುವಂತಹ ಕ್ಯಪಾಸಿಟಿ ಹೊಂದಿದ್ದಾನೆ..ಹಲವಾರು ವರ್ಷಗಳಿಂದ ಆದಪ್ಪಗೌಡ ಮಾಡುವ ಸೋಡ ಸವಿಯಲು ಮಿಸ್ ಮಾಡ್ದೆ ಬರ್ತಾರೆ …ಇಷ್ಟೊಂದು ಡಿಮ್ಯಾಂಡನಲ್ಲಿ ಜನ ಜಂಗುಳಿಯಲ್ಲಿ ಸೋಡಾ ವ್ಯಾಪಾರ ಮಾಡುವಂತಹ ಆದಪ್ಪ ಗೌಡನ ಸೂಡ ಬೆಲೆ ಎಷ್ಟಿರಬೇಕು ಅನ್ಕೊಂಡ್ರಿ..ಜಾಸ್ತಿ ಎನ್ ಇಲ್ಲ ಕೇವಲ 5ರೂ ಕಣ್ರೀ.. ಜನಸೇವೆ ಜೊತೆಗೆ ವ್ಯಾಪಾರ ಮಾಡುವಂತಹ ಆಪ್ಪಗೌಡನ ಲಿಂಬುಸೋಡ ಎಲ್ರಿಗೂ ಪಂಚಪ್ರಾಣ..ದುಡ್ಡು ಮಾಡುವಂತಹ ಆಸೆ ನನಗಿಲ್ಲ ..ಜನ ನೆನೆಸಿದ್ರೆ ಸಾಕು ಅಂತಾನೆ ಗೌಡ..ಅದರಲ್ಲೂ ಸೋಡಾ ಸವಿಯಬೇಕು ಅಂದ್ರೆ ಒಬ್ಬೊಬ್ಬರಾಗಿ ಸರದಿ ಸಾಲಿನಲ್ಲಿ ಬರಬೇಕು.. ಗುಂಪು ಗುಂಪಾಗಿ ನಿಂತು ಟ್ರಾಫಿಕ್ ಜಾಮ್ ಮಾಡಬಾರದು ಎಂದು ಕಂಡಿಷನ್ ಸಹ ಮಾಡ್ತಾರೆ.
ಸೋಡಾವನ್ನು ಸವಿಯಬೇಕು ಮತ್ತೊಬ್ಬರಿಗೆ ಸಹ ಅವಕಾಶವನ್ನು ಮಾಡಿಕೊಡಬೇಕು ಅಂತ ಆದಪ್ಪಗೌಡ ಹೊಸ ರೂಲ್ಸ್ ಮಾಡಿದ್ದಾನೆ.. ಯಾರಿಗೂ ಸಹ 2 ಸೋಡಾ ಕೊಡುವುದಿಲ್ಲ ಏಕೆಂದರೆ ಎಲ್ಲರಿಗೂ ಸೋಡಾ ಸಿಗಬೇಕು.. ನಂತರದಲ್ಲಿ ಬೇಕಾದರೆ ಸೋಡಾ ನೀಡ್ತೇನೆ ಅದನ್ನ ಬಿಟ್ಟು ಜನ ಇದ್ದಾಗ 2ಸೋಡ ಒಬ್ಬರಿಗೆ ಕೊಟ್ರೆ ಮತ್ತೊಬ್ಬರಿಗೆ ಅವಕಾಶ ಇಲ್ಲದಂತಾಗುತ್ತದೆ.. ಹೀಗಾಗಿ ಯಾರಿಗೂ 2ಸೋಡಾ ಕೊಡುವುದಿಲ್ಲ ಒಬ್ಬರಿಗೆ ಒಂದೇ ಸೋಡಾ ಅಂತ ಕಂಡೀಶನ್ ಬೇರೆ ಮಾಡಿದ್ದಾರೆ.. ಒಟ್ಟಿನಲ್ಲಿ ತನ್ನ ಲಿಂಬುಸೋಡ ವ್ಯಾಪಾರದಿಂದಲೇ ಮೂಲೆಮೂಲೆಯಲ್ಲಿ ಪರಿಚಿತನಾದ ವ್ಯಕ್ತಿ ಯಾರಾದ್ರೂ ಇದ್ರೆ ಅದು ಆದಪ್ಪ ಗೌಡ.. ನೀವೂ ಒಮ್ಮೆ ಬನ್ನಿ.. ಗೌಡ ನನಗೂ 1 ಸೋಡಾ.. ಅಂತ ಆರ್ಡರ್ ಮಾಡಿ ಈ ರುಚಿಯಾದ ಸೋಡಾ ಸವಿಯಿರಿ..