Thursday, 12th December 2024

ಪಂಜಾಬ್ ಚುನಾವಣೆ: ಸೋನು ಸೂದ್‌ ಸಹೋದರಿ ಕಣಕ್ಕೆ

ಚಂಡಿಗಢ್: ಸಹೋದರಿ ಪಂಜಾಬ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆಂದು ಬಾಲಿವುಡ್ ನಟ ಸೋನು ಸೂದ್ ಅವರು ಘೋಷಿಸಿದ್ದು ಪಕ್ಷ ಯಾವುದು ಎನ್ನುವ ಬಗ್ಗೆ ಇನ್ನೂ ಬಹಿರಂಗಪಡಿಸದ ನಟ ಪಕ್ಷದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ತಮ್ಮ ಸಹೋದರಿ ಸ್ಪರ್ಧಿಸಲಿದ್ದಾರೆ ಎಂದು ನಟ ಸೂದ್ ಭಾನುವಾರ ಘೋಷಿಸಿದರು.

ಕರೋನಾ ಪೂರ್ವದಲ್ಲಿ ಸೋನು ಸೂದ್ ಬಾಲಿವುಡ್ ನಟ ಎನ್ನುವುದು ಮಾತ್ರ ಜನರಿಗೆ ತಿಳಿದಿತ್ತು. ಬಳಿಕ ಅವರು ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಅದಕ್ಕೆ ಉತ್ತರ ಹಲವು.

2021 ರಲ್ಲಿ ಸೋನು ಸೂದ್ ಬಗ್ಗೆ ಯಾರನ್ನಾದರೂ ಕೇಳಿದರೆ, ‘ಬಾಲಿವುಡ್ ನಟ’ ಎಂಬು ದು ಮಾತ್ರ ಉತ್ತರವಲ್ಲ ‘ಗುಡ್ ಸಮರಿಟನ್’, ‘ಹೀರೋ ಆಫ್ ದಿ ಪ್ಯಾಂಡೆಮಿಕ್’, ‘ದಿ ಸೇವಿ ಯರ್’ ಎಂದು ಈ ದಿನಗಳಲ್ಲಿ ಅವರನ್ನು ಪರಿಚಯಿಸಲು ಬಳಸ ಲಾಗುತ್ತದೆ. ಅವರು ಮಾಡಿದ ಮಹತ್ಕಾರ್ಯಗಳಿಗೆ ಜನ ಅವರನ್ನು ನೆನೆದುಕೊಳ್ಳುವುದು ಮಾತ್ರವಲ್ಲದೆ ಕೆಲವರು ಅವರ ಪಾದಗಳನ್ನು ಸ್ಪರ್ಶಿಸಲು ಬಯಸುತ್ತಾರೆ.