Thursday, 21st November 2024

ಉದ್ಯಮಿ ಎಸ್.ಎಸ್.ಪಾಟೀಲ್ ಕಡಗಂಚಿ ನಿಧನ

ಲಬುರಗಿ: ನಾಡಿನ ಹಿರಿಯ ಉದ್ಯಮಿ, ಸಮಾಜ ಸೇವಕ ಎಸ್.ಎಸ್.ಪಾಟೀಲ್  ಕಡಗಂಚಿ (84) ನಿಧನ ಹೊಂದಿದರು.

ಪತ್ನಿ ಸರೋಜನಿ ಎಸ್.ಪಾಟೀಲ್, ಪುತ್ರರಾದ ಲಿಂಗರಾಜ ಎಸ್.ಪಾಟೀಲ್, ಸಿದ್ದಲಿಂಗ ಎಸ್.ಪಾಟೀಲ್ ಹಾಗೂ ಪುತ್ರಿಯರಾದ ಶೋಭಾ ಎಸ್.ಬೆಂಬಳಗಿ, ಶೈಲಜಾ ವಿ.ಜಿ, ನಂದಾ ಪಿ.ಪಾಟೀಲ್ ಅಗಲಿದ್ದಾರೆ.

ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಎಸ್.ಎಸ್.ಪಾಟೀಲ್ ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ಉದ್ಯಮ ಸ್ಥಾಪಿಸಿ, ಕಲ್ಯಾಣ ಕರ್ನಾಟಕದ ಪ್ರಗತಿಗೆ ಕೊಡುಗೆ ನೀಡಿದ್ದರು. ಕಲಬುರಗಿಯ ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್​ ಕಾಮರ್ಸ್​ ಅಧ್ಯಕ್ಷರಾಗಿ 25 ವರ್ಷ ಸೇವೆ ಸಲ್ಲಿಸಿದ್ದರು.

ಎಫ್​ಕೆಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಉತ್ತರ ಕರ್ನಾಟಕ ಭಾಗದ ಏಕೈಕ ಉದ್ಯಮಿ ಎನಿಸಿಕೊಂಡಿದ್ದರು. ಪಾಟೀಲರ ಕೈಗಾರಿಕೆ ಗಳು ಕರ್ನಾಟಕ ಅಲ್ಲದೆ ಮಹಾರಾಷ್ಟ್ರ, ಛತ್ತಿಸ್​ಗಢ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ರಾಜ್ಯ ಗಳಲ್ಲಿ ಸ್ಥಾಪಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು.

ಸ್ಟೀಲ್ ವೈಯರ್, ರೈಲ್ವೆ ಸ್ಲೀಪರ್ ಘಟಕಗಳನ್ನು ಸ್ಥಾಪಿಸಿದ್ದರು. ಹೈದರಾಬಾದ್​ನಲ್ಲಿ ಸಂಗಮ್ ಹೆಲ್ತ್ ಕೇರ್ ಕೈಗಾರಿಕೆ ಮೂಲಕ ಹಲವು ಔಷಧ ಮತ್ತು ಸಲಕರಣೆಗಳನ್ನು ಉತ್ಪಾದಿಸಿ ಆರೋಗ್ಯ ಕ್ಷೇತ್ರಕ್ಕೆ ನೆರವಾಗಿದ್ದರು.

ಪಾಟೀಲರು ಕಲಬುರಗಿಯಲ್ಲಿ ಸಂಗಮ ತ್ರಿವೇಣಿ ಚಿತ್ರ ಮಂದಿರ ಸ್ಥಾಪಿಸುವ ಮೂಲಕ ಸಿನಿಮಾರ ರಂಗಕ್ಕೆ ಕಾಲಿರಿಸಿದ್ದರು. ಹೈದರಾಬಾದ್ ಕರ್ನಾಟಕ ಭಾಗದ ವಿತರಕರಾಗಿಯೂ ಕೆಲಸ ಮಾಡಿದ್ದಾರೆ.

ಅಂತ್ಯಕ್ರಿಯೆ ಬುಧವಾರ ಹುಮನಾಬಾದ್ ರಸ್ತೆಯ ಕೆಎಂಎಫ್ ಡೇರಿ ಎದುರಿನ ಪಾಟೀಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಆವರಣ ದಲ್ಲಿ ನೆರವೇರಲಿದೆ.