ಕಂಪನಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಆದಾಯ ಕುಸಿತವು ಉದ್ಯೋಗ ಕಡಿತಕ್ಕೆ ಕಾರಣ ವಾಗಿದೆ. ಪುನರ್ ರಚನೆ ಪ್ರಕ್ರಿಯೆ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ವಿಗ್ಗಿ ಸಂಸ್ಥಾಪಕ ಸಿಇಒ ಶ್ರೀ ಹರ್ಷ ಮೆಜೆಟಿ ತಿಳಿಸಿದ್ದಾರೆ.
ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಿದ ನಂತರ ಇದು ಅತ್ಯಂತ ಕಷ್ಟಕರವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ನಾವು ವಿಷಾಧಿಸುತ್ತೇವೆ ಎಂದು ಶ್ರೀ ಹರ್ಷ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಇದಕ್ಕೂ ಮುನ್ನಾ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಹರ್ಷ ಮೆಜೆಟಿ, ಉದ್ಯೋಗಿ ನೆರವು ಯೋಜನೆ ಭಾಗವಾಗಿ ಉದ್ಯೋಗಿಗಳ ಅವಧಿ ಹಾಗೂ ಭತ್ಯೆ ಆಧಾರದ ಮೇಲೆ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳು ಮೂರು ತಿಂಗಳ ಕನಿಷ್ಠ ವೇತನ ಹಾಗೂ 15 ದಿನಗಳ ನೋಟಿಸ್ ಅವಧಿಯ ವಿಶೇಷ ಭತ್ಯೆ ನೀಡುವ ಭರವಸೆ ನೀಡಿದ್ದರು.
ಇತ್ತೀಚಿಗೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ, ಭಾರತದಲ್ಲಿ 1 ಸಾವಿರ ಸೇರಿದಂತೆ ಜಾಗತಿಕವಾಗಿ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸವುದಾಗಿ ಹೇಳಿತ್ತು.