Saturday, 14th December 2024

ಟಿ-10ಗೂ ತಟ್ಟಿದ ಮ್ಯಾಚ್ ಫಿಕ್ಸಿಂಗ್ ಬಿಸಿ

ಅಬುಧಾಬಿ:
ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ನಡೆದಿರುವ ಮ್ಯಾಾಚ್ ಫಿಕ್ಸಿಿಂಗ್‌ಸ್‌ ಬಿಸಿ ದೂರದ ಅಬುಧಾಬಿಯಲ್ಲಿ ನಡೆಯುತ್ತಿಿರುವ ಟಿ10 ಕ್ರಿಿಕೆಟ್ ಲೀಗ್‌ಗೂ ತಟ್ಟಿಿದೆ. ಎರಡನೇ ಆವೃತ್ತಿಿಯ ಟಿ-10 ಕ್ರಿಿಕೆಟ್ ಲೀಗ್ ಟೂರ್ನಿಯಲ್ಲಿ ಪಾಲ್ಗೊೊಂಡಿದ್ದ ಹೊಸ ಫ್ರಾಾಂಚೈಸಿ ಕರ್ನಾಟಕ ಟಸ್ಕರ್ಸ್ ತಂಡದ ಮಾಲೀಕತ್ವವನ್ನು ಟೂರ್ನಿಯ ಮಧ್ಯದಲ್ಲೇ ಬದಲಾವಣೆ ಮಾಡಲಾಗಿದೆ.
ಕೆಪಿಎಲ್ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಬಳ್ಳಾಾರಿ ಟಸ್ಕರ್ಸ್ ತಂಡದ ಮಾಲೀಕತ್ವ ಹೊಂದಿದ್ದ ಅರವಿಂದ್ ವೆಂಕಟೇಶ್ ರೆಡ್ಡಿಿ ಅವರೇ ಅಬುಧಾಬಿ ಟಿ-10 ಲೀಗ್ನ ಫ್ರಾಾಂಚೈಸಿ ಖರೀದಿಸಿದ್ದರು. ಇದೀಗ ಕೆಪಿಎಲ್ ಮ್ಯಾಾಚ್ ಫಿಕ್ಸಿಿಂಗ್ ಹಗರಣದಲ್ಲಿ ಬಳ್ಳಾಾರಿ ಟಸ್ಕರ್ಸ್ ತಂಡ ಕೂಡ ಶಾಮೀಲಾಗಿರುವ ಸಾಧ್ಯತೆ ಇದ್ದು, ಈ ವಿಚಾರವಾಗಿ ಬೆಂಗಳೂರಿನ ಸಿಸಿಬಿ ಪೊಲೀಸರು ವಿದೇಶದಲ್ಲಿರುವ ಅರವಿಂದ್ ರೆಡ್ಡಿಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್‌ಸ್‌ ಜಾರಿಗೊಳಿಸಿತ್ತು.
ಈ ನಿಟ್ಟಿಿನಲ್ಲಿ ಟಿ-10 ಲೀಗ್‌ನಲ್ಲಿ ಕರ್ನಾಟಕ ಟಸ್ಕರ್ಸ್ ತಂಡದ ಮಾಲೀಕತ್ವವನ್ನು ಟೂರ್ನಿ ಸಂಘಟಕರು ಬದಲಾವಣೆ ಮಾಡಿದ್ದು, ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಾಲಿವುಡ್ ಸಿನೆಮಾ ನಿರ್ಮಾಪಕ ಹಾಗೂ ಉದ್ಯಮಿ ಕೃಷ್ಣ ಕುಮಾರ್ ಚೌಧರಿ ಅವರನ್ನು ಕರ್ನಾಟಕ ಟಸ್ಕರ್ಸ್ ತಂಡದ ನೂತನ ಮಾಲೀಕರಾಗಿ ಘೋಷಿಸಲಾಗಿದೆ. ಕರ್ನಾಟಕ ಟಸ್ಕರ್ಸ್ ತಂಡವನ್ನು ದಕ್ಷಿಣ ಆಫ್ರಿಿಕಾದ ಮಾಜಿ ದಿಗ್ಗಜ ಆಟಗಾರ ಹಶೀಮ್ ಆಮ್ಲಾಾ ಮುನ್ನಡೆಸುತ್ತಿಿದ್ದಾರೆ.
===