ಪ್ರವಾಸಕ್ಕೆ (Travel Tips) ಹೋಗಲು ಯಾರಿಗೆ ಇಷ್ಟವಿಲ್ಲ ಹೇಳಿ. ಹೊಸ ಹೊಸ ಸ್ಥಳಗಳನ್ನು ನೋಡುವುದು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಎಲ್ಲರೂ ಹಾತೊರೆಯುತ್ತಿರುತ್ತಾರೆ. ಆದರೆ ಕೆಲವರಿಗೆ ತಮ್ಮ ಸಾಕು ಪ್ರಾಣಿಗಳ ಜೊತೆ ಪ್ರವಾಸಕ್ಕೆ ಹೋಗಬೇಕೆಂಬ ಆಸೆ ಇರುತ್ತದೆ. ಆದರೆ ಕೆಲವೊಂದು ಪ್ರವಾಸದ ಸ್ಥಳಗಳಲ್ಲಿ ಪ್ರಾಣಿಗಳನ್ನು ಕರೆದುಕೊಂಡು ಬರಲು ಅವಕಾಶವಿರುವುದಿಲ್ಲ. ಆದರೆ ಭಾರತದ ಕೆಲವೊಂದು ಸ್ಥಳಗಳಲ್ಲಿ ಪ್ರಾಣಿಗಳಿಗೂ ಪ್ರವೇಶವಿದೆ. ಹಾಗಾಗಿ ನೀವು ನಿಮ್ಮ ಮುದ್ದಿನ ಪ್ರಾಣಿಗಳ ಜೊತೆಗೆ ಈ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಿ.
ಒನ್‌ನೆಸ್ ಋಷಿಕೇಶ್, ಉತ್ತರಾಖಂಡ್:
ಹಿಮಾಲಯದ ಪ್ರಶಾಂತವಾದ ತಪ್ಪಲಿನ ನಡುವೆ ನೆಲೆಸಿರುವ ಒನ್ನೆಸ್ ಋಷಿಕೇಶ್ ನಿಮಗೆ ಮತ್ತು ನಿಮ್ಮ ಸಾಕುಪ್ರಾಣಿಗಳಿಗಾಗಿರುವ ಪ್ರಶಾಂತವಾದ ಸ್ಥಳವಾಗಿದೆ. ಇಲ್ಲಿ ಸಾಕು ಪ್ರಾಣಿಗಳಿಗಾಗಿ ಆರಾಮದಾಯಕ ವಸತಿಗಳು, ಅವುಗಳಿಗೆ ತಿರುಗಾಡಲು ಸಾಕಷ್ಟು ಸ್ಥಳಾವಕಾಶ ಮತ್ತು ವಿಶ್ರಾಂತಿ ಪಡೆಯಲು ಸೂಕ್ತವಾದ ಶಾಂತಿಯುತ ವಾತಾವರಣವನ್ನು ನೀಡುತ್ತದೆ.
ನೀಮ್ರಾನಾ ಕೋಟೆ ಅರಮನೆ, ನೀಮ್ರಾನಾ, ರಾಜಸ್ಥಾನ:
ದೆಹಲಿಯಿಂದ ಸ್ವಲ್ಪ ದೂರದಲ್ಲಿರುವ ಐತಿಹಾಸಿಕ ನೀಮ್ರಾನಾ ಕೋಟೆ ಅರಮನೆಯಲ್ಲಿ ರಾಜಮನೆತನದ ಚಿತ್ರಣವನ್ನು ನೋಡಬಹುದು. ಈ ಭವ್ಯವಾದ ಕೋಟೆಯಿ ಬಳಿ ಇರುವ ಹೋಟೆಲ್‌ಗಳಲ್ಲಿ ಸಾಕುಪ್ರಾಣಿಗಳಿಗೂ ಪ್ರವೇಶವಿದೆ. ಇಲ್ಲಿ ನಿಮ್ಮ ಸಾಕುಪ್ರಾಣಿಗಳ ಜೊತೆ ವಿಶಾಲವಾದ ಉದ್ಯಾನಗಳು ಮತ್ತು ಪ್ರಾಚೀನ ವಾಸ್ತುಶಿಲ್ಪವನ್ನು ಅನ್ವೇಷಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಗೇಟ್ ವೇ ರೆಸಾರ್ಟ್ ದಮ್ಡಾಮಾ ಸರೋವರ, ಗುರ್ಗಾಂವ್, ಹರಿಯಾಣ:
ಸುಂದರವಾದ ದಮ್ಡಾಮಾ ಸರೋವರದ ಬಳಿ ಇರುವ ಗೇಟ್ ವೇ ರೆಸಾರ್ಟ್ ನಗರದ ಜಂಜಾಟದಿಂದ ದೂರವಿರುವ ಪ್ರಶಾಂತವಾದ, ಮನಸ್ಸಿಗೆ ವಿಶ್ರಾಂತಿ ನೀಡುವಂತಹ ಸ್ಥಳವಾಗಿದೆ. ಈ ರೆಸಾರ್ಟ್ ಸಾಕುಪ್ರಾಣಿಗಳ ಪ್ರವೇಶಕ್ಕೆ ಅವಕಾಶ ನೀಡುತ್ತದೆ. ಇಲ್ಲಿ ಸೊಂಪಾದ ಹಸಿರಿನಿಂದ ಆವೃತವಾದ ವಿಶಾಲವಾದ ಕೋಣೆಗಳು ಮತ್ತು ಕುಟೀರಗಳನ್ನು ಹೊಂದಿದೆ. ಇದು ನಿಮಗೆ ಮತ್ತು ನಿಮ್ಮ ಸಾಕುಪ್ರಾಣಿಗಳಿಗೆ ವಿಶ್ರಾಂತಿ ಪಡೆಯಲು ಶಾಂತಿಯುತ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ಪ್ರಕೃತಿಯ ಮಡಿಲಿನಲ್ಲಿ ವಾಕ್ ಮಾಡುತ್ತಾ, ಪಕ್ಷಿ ವೀಕ್ಷಣೆ ಮತ್ತು ಸರೋವರದಲ್ಲಿ ದೋಣಿ ವಿಹಾರದಂತಹ ಹೊರಾಂಗಣ ಚಟುವಟಿಕೆಗಳನ್ನು ಆನಂದಿಸಿ.
ವೆಸ್ಟಿನ್ ಸೊಹ್ನಾ ರೆಸಾರ್ಟ್ & ಸ್ಪಾ, ಸೊಹ್ನಾ, ಹರಿಯಾಣ:
ನಿಮ್ಮ ಸಾಕುಪ್ರಾಣಿಯೊಂದಿಗೆ ಐಷಾರಾಮಿ ಸ್ಥಳಕ್ಕೆ ಹೋಗಲು ಬಯಸಿದ್ದರೆ ವೆಸ್ಟಿನ್ ಸೊಹ್ನಾ ರೆಸಾರ್ಟ್ ಮತ್ತು ಸ್ಪಾದ ಪ್ರಶಾಂತ ಪರಿಸರಕ್ಕೆ ಬನ್ನಿ. ವಿಸ್ತಾರವಾದ ಉದ್ಯಾನಗಳು ಮತ್ತು ಪ್ರಶಾಂತ ಸರೋವರಗಳ ನಡುವೆ ನೆಲೆಗೊಂಡಿರುವ ಈ ಸಾಕುಪ್ರಾಣಿ ಸ್ನೇಹಿ ರೆಸಾರ್ಟ್ ನಿಮಗೆ ಮತ್ತು ನಿಮ್ಮ ಮುದ್ದಿನ ಪ್ರಾಣಿಗಳಿಗೆ ಒಟ್ಟಿಗೆ ಇರಲು ಐಷಾರಾಮಿ ವಸತಿ ಮತ್ತು ಮನರಂಜನಾ ಚಟುವಟಿಕೆಗಳನ್ನು ಒದಗಿಸುತ್ತದೆ. ಇಲ್ಲಿ ಸ್ಪಾ ಚಿಕಿತ್ಸೆಗಳನ್ನು ಪಡೆಯಬಹುದು. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಿ ಮತ್ತು ಪ್ರಕೃತಿಯ ಸೌಂದರ್ಯದ ನಡುವೆ ಆನಂದವಾಗಿರಬಹುದು.
ನೈನಿ ರಿಟ್ರೀಟ್, ನೈನಿತಾಲ್, ಉತ್ತರಾಖಂಡ್:
ನೈನಿತಾಲ್‌ನ ಆಕರ್ಷಕ ಗಿರಿಧಾಮದಲ್ಲಿ ಒಂದಾದ ನೈನಿ ರಿಟ್ರೀಟ್‌ನಲ್ಲಿ ಸುಂದರವಾದ ನೈನಿ ಸರೋವರವನ್ನು ನೋಡಬಹುದು. ಇಲ್ಲಿ ಸಾಕು ಪ್ರಾಣಿಗಳಿಗೆ ಪ್ರವೇಶವನ್ನು ನೀಡುವಂತಹ ಹೋಟೆಲ್‌ಗಳಿವೆ. ಇಲ್ಲಿನ ಹೋಟೆಲ್ ರೂಂನಲ್ಲಿಯೇ ಇದ್ದು ಸುತ್ತಮುತ್ತಲಿನ ಪರ್ವತಗಳ ಅದ್ಭುತ ನೋಟಗಳನ್ನು ನೋಡಬಹುದು. ಇದು ನಿಮಗೆ ಮತ್ತು ನಿಮ್ಮ ಸಾಕು ಪ್ರಾಣಿಗಳಿಗೆ ಸ್ವರ್ಗದ ಸುಖವನ್ನು ಒದಗಿಸುತ್ತದೆ.
ಇದನ್ನೂ ಓದಿ:ಹುಟ್ಟುಹಬ್ಬದ ಸರ್ಪ್ರೈಸ್ ಎಂದು ಯುವಕನ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ ಸ್ನೇಹಿತರು!
ಈ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಮುದ್ದಿನ ಪ್ರಾಣಿಗಳ ಜೊತೆಗೂ ಸಮಯ ಕಳೆಯಬಹುದು. ಹಾಗಾಗಿ ಈ ಸ್ಥಳಗಳಿಗೆ ಭೇಟಿ ನೀಡಲು ಇಂದೇ ಪ್ಲ್ಯಾನ್ ಮಾಡಿ.