ಸಂಗಳ ಪುರ ಗ್ರಾಮದಲ್ಲಿ 10 ಕೋಟಿ ರೂಗಳ ವೆಚ್ಚದಲ್ಲಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಗೆ ಶಂಕುಸ್ಥಾಪನೆ.
ಸಂಗಾಳ ಪುರ ಗ್ರಾಮದಲ್ಲಿ 22 ಲಕ್ಷ ರೂಗಳ ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ನೆಲ್ಲಿ ಹಾಕುವ ಕಾಮಗಾರಿ ಶಂಕುಸ್ಥಾಪನೆ.
ತುಮಕೂರು: ಗ್ರಾಮಾಂತರ ಹೆಬ್ಬೂರು ಹೋಬಳಿ ಹೆಬ್ಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕ ಡಿ ಸಿ ಗೌರಿಶಂಕರ್ ಗ್ರಾಮಸ್ಥರ ಸಮೂಹದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಗಾಳಪುರ ಗ್ರಾಮದಲ್ಲಿ 10 ಲಕ್ಷ ರೂಗಳ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ.
ಸಿದ್ದಣ್ಣನ ಪಾಳ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮಾಡಿ ಅಲ್ಲಿ ನೆರೆದಿದ್ದ ಅಂತಹ ಒಂದು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಅಣ್ಣ ತಮ್ಮ ಮಗನ ಸ್ಥಾನದಲ್ಲಿ ನಿಂತು ಹೆಣ್ಣುಮಕ್ಕಳಿಗೆ ಹಿಂದೂ ಸಂಪ್ರದಾಯದಂತೆ ಹರಿಶಿಣ ಕುಂಕುಮ ಬಳೆ ಸೀರೆ ಬಾಗಿನವನ್ನು ನೀಡುವ ಮೂಲಕ ಗಂಗಾ ಪೂಜೆ ನೆರವೇರಿಸಿ,ಎರಡು ಗ್ರಾಮಗಳಿಗೆ ಶುಭ ಹಾರೈಸಿದರು.
ಹಾಗೂ ಗ್ರಾಮದ ಪ್ರತಿಯೊಂದು ಮನೆಗೆ 20 ಲೀಟರಿನ ಕ್ಯಾನ್ ಗಳನ್ನು ಉಚಿತವಾಗಿ ಸ್ಥಳದಲ್ಲಿ ವಿತರಿಸಲಾಗಿತ್ತು ಹಾಗೂ ಇದೇ ಸಂದರ್ಭದಲ್ಲಿ ಎಲ್ಲಾ ಗ್ರಾಮಗಳಲ್ಲಿ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಬಡ ಕುಟುಂಬದ ಆರೋಗ್ಯ ಸಮಸ್ಯೆಗಳಿಗೆ ವೈಯಕ್ತಿಕ ಸಮಸ್ಯೆಗಳ ಸಹಾಯಕ್ಕಾಗಿ ಮಾನ್ಯ ಶಾಸಕರು ವೈಯಕ್ತಿಕವಾಗಿ ಸ್ಥಳದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಧನಸಹಾಯ ಮೂಲಕ ಮಾನವೀಯತೆ ಮೆರೆಯುವಂತಹ ಕೆಲಸಮಾಡಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಗ್ರಾಮ ಪಂಚಾಯತ್ ಸದಸ್ಯರಾದ ಸೋಮಣ್ಣ, ಸಾವಿತ್ರಮ್ಮ. ಚಿರತೆ ಚಿಕ್ಕಣ್ಣ. ಡೈರಿ ವೆಂಕಟೇಶ್ . ಕೆಬಿ ರಾಜಣ್ಣ. ಪಾಲನೇತ್ರ ಯ್ಯ.ರಾಜೇಶ್. ರಾಘವೇಂದ್ರ. ಶ್ರೀರಂಗ. ತಮ್ಮಯ್ಯ, ದಾದಾಪೀರ್, ಇನ್ನು ಮುಂತಾ ದವರು ಇದ್ದರು.