ಚಮೋಲಿ (ಉತ್ತರಾಖಂಡ) : ಚಮೋಲಿಯಲ್ಲಿ ಹಿಮ ನದಿ ಪ್ರವಾಹದಿಂದ ಉಂಟಾದ ವಿನಾಶದ ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದು, ಭಾನುವಾರ 12 ಮೃತದೇಹಗಳನ್ನ ಸುರಂಗದಿಂದ ಹೊರ ತೆಗೆಯಲಾಗಿದೆ. ಈ ಮೂಲಕ ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಫೆಬ್ರವರಿ 14 ರಿಂದ 16 ರವರೆಗೆ ಇಡೀ ಪ್ರದೇಶದಲ್ಲಿ ಹವಾಮಾನ ಹದಗೆಡಲಿದ್ದು, ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.
ಫೆ.ಬ್ರವರಿ 7ರಿಂದ ತಪೋವನ್ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಭಾನುವಾರ ಸುರಂಗದಿಂದ ಮೃತ ದೇಹ ಗಳನ್ನ ಹೊರ ತೆಗೆಯಲಾಗಿದೆ. ಉತ್ತರಾಖಂಡ ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾ ಚರಣೆಯಲ್ಲಿ ನಿರತರಾಗಿದ್ದಾರೆ.