Saturday, 23rd November 2024

Viral Video: ಹೊಲದಲ್ಲಿ ಭತ್ತ ನಾಟಿ ಮಾಡುತ್ತಿರುವ ರೊಬೊಟ್‌; ವೈರಲ್ ಆದ ವಿಡಿಯೊದಲ್ಲೇನಿದೆ?

Viral Video

ಬೆಂಗಳೂರು : ತಂತ್ರಜ್ಞಾನ ತುಂಬಾ ಮುಂದುವರಿದಿದೆ. ದಿನೇ ದಿನೇ ಹೊಸ ಹೊಸ ಅವಿಷ್ಕಾರಗಳನ್ನು ಮಾಡಿ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಇದರಿಂದ ಜನರ ಕೆಲಸ ಕೂಡ ಸುಲಭವಾಗುತ್ತಿದೆ. ಮೊದಲು ಮನೆಗೆಲಸಕ್ಕೆ ನೆರವಾಗುವಂತಹ ಮೆಷಿನ್ ಗಳನ್ನು ಕಂಡುಹಿಡಿದಿದ್ದಾರೆ. ಅದರಂತೆ ಜನರಿಗೆ ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್, ಅಡುಗೆ ಬೇಯಿಸಲು ಓವನ್, ನೆಲ ಗುಡಿಸಲು, ಒರೆಸಲು ಈಗ ಹೊಸ ಹೊಸ ಮೆಷಿನ್‍ಗಳು ಬಂದಿವೆ.ಅದೂ ಸಾಲದಂತೆ ಈಗ ಹೊಲದಲ್ಲಿ ರೈತನಂತೆ ಕೆಲಸ ಮಾಡಲು ರೋಬೋಟ್‌ಗಳು ಬಂದಿವೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ (Viral Video) ಆಗಿದೆ.

ಹೊಲ ಗದ್ದೆಯಲ್ಲಿ ಕೃಷಿ ಮಾಡಲು, ಕಚೇರಿಗಳಲ್ಲಿ ಕೆಲಸಕ್ಕಾಗಿ ಹಲವಾರು ಮೆಷಿನ್‍ಗಳು ಇವೆ. ಆದರೆ ಇವುಗಳನ್ನು ಬಳಸಲು ಮನುಷ್ಯರ ಸಹಾಯ ಬೇಕಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮತ್ತಷ್ಟು ಮುಂದುವರಿದು ಮನುಷ್ಯನ ಸ್ಥಾನದಲ್ಲಿ ರೋಬೋಟ್‍ಗಳನ್ನು ತರಲಾಗಿದೆ. ಅಂದರೆ ಮನುಷ್ಯರು ಮಾಡುವ ಕೆಲಸಗಳನ್ನು ರೋಬೋಟ್‌ಗಳೇ ಮಾಡುತ್ತಿವೆ. ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ರೋಬೋಟ್‍ಗಳು ಸಪ್ಲೈಯರ್ ಆಗಿ, ಕುಕ್ ಆಗಿ ಕೆಲಸ ಮಾಡುತ್ತಿವೆ. ಆದರೆ ಈಗ ಹೊಲಗದ್ದೆಗಳಲ್ಲಿ ದುಡಿಯಲು ಕೂಡ ರೋಬೋಟ್‍ಗಳೇ ಬಂದಿವೆ. ಹೊಲವೊಂದರಲ್ಲಿ ರೋಬೋಟ್ ಕೆಲಸ ಮಾಡುತ್ತಿರುವ ವಿಡಿಯೊವೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ವೈರಲ್ ವಿಡಿಯೊದಲ್ಲಿ ರೋಬೋಟ್ ಒಬ್ಬ ರೈತನ ಹಾಗೇ ಹೊಲದಲ್ಲಿ ಕೆಲಸ ಮಾಡುತ್ತಿದೆ. ನಾಟಿ ಮಾಡುವುದು, ಬೆಳೆಗಳಿಗೆ ನೀರುಣಿಸುವುದು, ಬೆಳೆ ಕೊಯ್ಲು, ತರಕಾರಿಗಳನ್ನು ನೆಡುವುದು, ಅದನ್ನು ಕೀಳುವುದು, ಬೆಳೆಯನ್ನು ಹೊತ್ತುಕೊಂಡು ಹೋಗುವುದು ಹೀಗೆ ಒಬ್ಬ ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡುತ್ತಾನೋ ಆ ಎಲ್ಲಾ ಕೆಲಸವನ್ನೂ ಈ ರೋಬೋಟ್ ಮಾಡುತ್ತಿದೆ.

ಇದನ್ನೂ ಓದಿ: ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ!

@InterestingSTEM ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಹಂಚಿಕೊಂಡ ಕೆಲವು ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ರೋಬೋಟ್ ಹೊಲದಲ್ಲಿ ಕೆಲಸ ಮಾಡುವುದನ್ನು ಕಂಡು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗೇ ಇನ್ನೂ ಕೆಲವರು ವಿಜ್ಞಾನದ ಅದ್ಭುತ ಆವಿಷ್ಕಾರಗಳನ್ನು ಹೊಗಳಿದ್ದಾರೆ. ಈ ವಿಡಿಯೊದಲ್ಲಿ ಕಂಡಬಂದ ರೋಬೋಟ್ಅ ನ್ನು ಚೀನಾದ ಹಳ್ಳಿಯೊಂದರಲ್ಲಿ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಇದು AI ಜನರೇಟೆಡ್ ರೋಬೋಟ್ ಆಗಿದೆ. ಇದು ರೈತನಂತೆಯೇ ಕೆಲಸ ಮಾಡುತ್ತಿದೆ.