ಇಂದೋರ್: ಇತ್ತೀಚಿನ ದಿನಗಳಲ್ಲಿ ಯುವತಿಯರು ಫ್ಯಾಶನ್ ಹೆಸರಿನಲ್ಲಿ ಅರ್ಧಬಂರ್ಧ ಬಟ್ಟೆ ಧರಿಸಿ ಬೀದಿಗಳಲ್ಲಿ ಸುತ್ತುತ್ತಿರುತ್ತಾರೆ. ಅದೇರೀತಿ ಇತ್ತೀಚೆಗೆ ಇಂದೋರ್ನ ಬೀದಿಯಲ್ಲಿ ಯುವತಿಯೊಬ್ಬಳು ಬ್ರಾ ಮತ್ತು ಶಾರ್ಟ್ಸ್ ಧರಿಸಿ ತಿರುಗಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ. ಕೆಲವು ಸಮುದಾಯದವರ ಕೆಂಗಣ್ಣಗೆ ಗುರಿಯಾಗಿದೆ. ದೀಪಿಕಾ ನಾರಾಯಣ್ ಭಾರದ್ವಾಜ್ ಈ ವಿಡಿಯೊವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಯುವತಿಯ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಧೈರ್ಯ, ಎದೆಗಾರಿಕೆ ಅಂದರೆ ಇದು ಎಂದು ಶ್ಲಾಘಿಸಿದ್ದಾರೆ. ಆದರೆ ಇತರರು ನಮ್ಮ ಸಮಾಜದಲ್ಲಿ ಈ ಕೃತ್ಯವು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ.
ಈ ವೈರಲ್ ವಿಡಿಯೊದಲ್ಲಿ ಯುವತಿಯೊಬ್ಬಳು ಬ್ರಾ ಮತ್ತು ಶಾರ್ಟ್ಸ್ ಧರಿಸಿ ಕಿಕ್ಕಿರಿದ ಬೀದಿಯಲ್ಲಿ ಬಿಂದಾಸ್ ಆಗಿ ತಿರುಗಾಡಿದ್ದಾಳೆ. ಅಲ್ಲಿದ್ದ ಜನರು ನೋಡುತ್ತಿದ್ದರೂ ಅವಳು ಅದನ್ನು ನಿರ್ಲಕ್ಷಿಸಿ ತನ್ನ ಪಾಡಿಗೆ ತಾನು ತಿರುಗಾಡಿದ್ದಾಳೆ. ಆ ಯುವತಿ ತನ್ನ ದೇಹ ಸೌಂದರ್ಯವನ್ನು ಪ್ರದರ್ಶಿಸುತ್ತಾ ಜನರ ಗಮನ ತನ್ನತ್ತ ಸೆಳೆಯಲು ಅಥವಾ ಜನರ ಪ್ರತಿಕ್ರಿಯೆಯನ್ನು ಗಮನಿಸುವ ಸಲುವಾಗಿ ಈ ಕೆಲಸ ಮಾಡಿದ್ದಾಳೆಯೇ ಎಂಬುದು ತಿಳಿದಿಲ್ಲ. ಆದರೆ ಎಲ್ಲರೂ ಅವಳನ್ನು ಬಾಯಿ ಬಿಟ್ಟುಕೊಂಡು ಕಣ್ಣು ಮಿಟುಕಿಸದೆ ನೋಡಿದಂತೂ ಖಂಡಿತ.
Her Body Her Choice ke maayne social media se nikalkar real life mein dikhte hue pic.twitter.com/klNmPaRVse
— Deepika Narayan Bhardwaj (@DeepikaBhardwaj) September 25, 2024
ದೀಪಿಕಾ ನಾರಾಯಣ್ ಭಾರದ್ವಾಜ್ ಅವರ ವಿಡಿಯೊ ಕ್ಲಿಪ್ ಕೆಲವೇ ಸಮಯದಲ್ಲಿ ವೈರಲ್ ಆಗಿದ್ದು, ಈ ವಿಡಿಯೊ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಒಂದು ಕಡೆ ಬಳಕೆದಾರರು ಯುವತಿಯ ಧೈರ್ಯ ಮತ್ತು ಆಕೆಯ ದೇಹ ಸೌಂದರ್ಯವನ್ನು ಹೊಗಳಿದರೆ ಮತ್ತೊಂದೆಡೆ ಅವಳ ವರ್ತನೆಯನ್ನು ಅನೇಕರು ಪ್ರಶ್ನಿಸಿದ್ದಾರೆ. ಇದು ಸರಿಯಾದ ವರ್ತನೆ ಅಲ್ಲ ಎಂದು ಅನೇಕರು ಹೇಳಿದ್ದಾರೆ. ಆ ಮೂಲಕ ಈ ವಿಡಿಯೊಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿವೆ.
ಇದನ್ನೂ ಓದಿ:ಕೋತಿಯನ್ನು ಅಪ್ಪಿ ಮುದ್ದಾಡಿದ ಅಜ್ಜಿಗೆ ಕೊನೆಗೆ ಆಗಿದ್ದೇನು? ವಿಡಿಯೊ ವೈರಲ್
ಈ ವಿಡಿಯೊ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮಿತಿಗಳ ಬಗ್ಗೆ ಈಗಾಗಲೇ ಚರ್ಚೆ ಹುಟ್ಟುಹಾಕಿದೆ. ಅಂತಹ ಕೆಲಸಗಳು ತನ್ನನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ ಎಂದು ಕೆಲವರು ಹೇಳಿದರೆ, ಇತರರು ಅಭಿವ್ಯಕ್ತಿ ಮತ್ತು ಸಾರ್ವಜನಿಕ ಸಂವೇದನೆಗಳ ನಡುವೆ ಗಡಿ ಇದೆ ಎಂದು ಹೇಳುತ್ತಾರೆ.