ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂಬುದು ಮುಸ್ಲಿಂ ಧರ್ಮದ ಪುರಾತನ ಸಂಪ್ರದಾಯವಾಗಿದೆ. ಹಿಜಾಬ್ ಧರಿಸದೆ ಮಹಿಳೆಯರು ಹೊರಗಡೆ ಹೋಗುವಂತಿಲ್ಲ, ಬೇರೆಯವರಿಗೆ ತಮ್ಮ ಮುಖ ತೋರಿಸುವಂತಿಲ್ಲ ಎಂಬ ನಿಯಮ ಕೂಡ ಇದೆ. ಆದರೆ ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಈ ಕಟ್ಟಳೆಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿ ಹಿಜಾಬ್ ಧರಿಸದೆ ಹೊರಗಡೆ ಓಡಾಡುತ್ತಿದ್ದ ಮಹಿಳೆಯನ್ನು ಅಪರಿಚಿತ ಮುಸ್ಲಿಂ ವ್ಯಕ್ತಿಯೊಬ್ಬ ಬೆನ್ನಟ್ಟಿ ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಘಟನೆಯನ್ನು ಸ್ವತಃ ಆ ಮಹಿಳೆಯೇ ವಿಡಿಯೊ ಮಾಡಿ , ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ಈಗ ವೈರಲ್ (Viral Video)ಆಗಿದ್ದು, ಈ ಕೃತ್ಯದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇರಾನಿನ ಪತ್ರಕರ್ತ ಮತ್ತು ಕಾರ್ಯಕರ್ತ ಮಾಸಿಹ್ ಅಲಿನೆಜಾದ್ ಈ ವಿಡಿಯೊವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ, “ನಂಬಲಾಗದು ಆದರೆ ನಿಜ – ಜರ್ಮನಿ ಈಗ ತನ್ನದೇ ಆದ ನೈತಿಕ ಪೊಲೀಸರನ್ನು ಹೊಂದಿದೆ. ಬರ್ಲಿನ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಜಾಬ್ ಧರಿಸದ ಕಾರಣ ಇಬ್ಬರ ಮಹಿಳೆಯರನ್ನು ಬೆನ್ನಟ್ಟಿ ಬಂದಿದ್ದಾನೆ ಮತ್ತು ಸರಿಯಾಗಿ ಉಡುಪು ಧರಿಸುವುದು ಹೇಗೆ ಎಂದು ಸಲಹೆ ನೀಡಿದ್ದಾನೆ ಇದು ಕೇವಲ ಕಿರುಕುಳವಲ್ಲ; ಇದು ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿ ನಾವು ಹೋರಾಡಿದ ಹಿಜಾಬ್ ಪೊಲೀಸರ ಭಯಾನಕ ಪ್ರತಿಧ್ವನಿಯಾಗಿದೆ – ಈಗ ಯುರೋಪಿನ ಹೃದಯಭಾಗದಲ್ಲಿ ಬೇರೂರುತ್ತಿದೆ” ಎಂದು ಅಲಿನೆಜಾದ್ ಬರೆದಿದ್ದಾರೆ.
ಇಂತಹ ಕ್ರಮಗಳನ್ನು ಟೀಕಿಸುವುದರ ಮೂಲಕ ಧೈರ್ಯ ಮಾಡಿ ಧ್ವನಿ ಎತ್ತಿದವರನ್ನು ಇಸ್ಲಾಮೋಫೋಬಿಯಾ ಆರೋಪಗಳ ಅಡಿಯಲ್ಲಿ ಅನೇಕ ವರ್ಷಗಳಿಂದ ಮೌನವಾಗಿರಿಸಿದ್ದಾರೆ. ಇದು ದಬ್ಬಾಳಿಕೆಯ ಸಮಸ್ಯೆಗಳನ್ನು ಪರಿಹರಿಸುವ ಬದಲು ಭಿನ್ನಾಭಿಪ್ರಾಯವನ್ನು ತಡೆಯಲು ನಿರ್ಮಿಸಲಾದ ತಂತ್ರವಾಗಿದೆ ಎಂದು ಅಲಿನೆಜಾದ್ ಹೇಳಿದ್ದಾರೆ. ಜರ್ಮನಿಯಲ್ಲಿ ಇಂತಹ ಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಪ್ರತ್ಯೇಕ ವಿದ್ಯಮಾನವಲ್ಲ, ಉದ್ದೇಶಪೂರ್ವಕವಾಗಿ ಅಥವಾ ಬೇರೆ ರೀತಿಯಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಘನತೆಯೊಂದಿಗೆ ರಾಜಿ ಮಾಡಿಕೊಂಡ ರಾಜತಾಂತ್ರಿಕ ನೀತಿಗಳ ನೇರ ಪರಿಣಾಮವಾಗಿದೆ.
ಧರ್ಮದ ಹೆಸರಿನಲ್ಲಿ ನಮ್ಮ ದೇಹವನ್ನು ಸರಿಯಾಗಿ ಮುಚ್ಚಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ನಾವು ಅನುಭವಿಸುವ ಕ್ರೌರ್ಯದ ವಿರುದ್ಧ ಮಾತನಾಡಲು ಧೈರ್ಯ ಮಾಡಿದರೂ ಕೂಡ ನಾವು ಮೌನವಾಗಿರುವಂತೆ ಮಾಡಿದ್ದಾರೆ. ಇದನ್ನು ‘ಇಸ್ಲಾಮೋಫೋಬಿಯಾ’ ಎಂದು ಆರೋಪಿಸಲಾಗಿದೆ. ಆದರೆ ನಾವು ಮೌನವಾಗಿದ್ದೇವೆ ಅಷ್ಟೇ. ಆದರೆ ಇದಕ್ಕೆ ನಮ್ಮ ಸಮ್ಮತಿ ಇದೆ ಎಂದಲ್ಲಾ. ಮಹಿಳೆಯರ ಮೇಲಿನ ಈ ದಬ್ಬಾಳಿಕೆಯ ವಿರುದ್ಧ ನಾವು ಹೋರಾಡುತ್ತೇವೆ. ಅಲ್ಲಿ ರಾಜತಾಂತ್ರಿಕತೆಯ ಹೆಸರಿನಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಘನತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ: ನಮ್ಮ ಹಕ್ಕುಗಳು ಮಾತುಕತೆಗೆ ಯೋಗ್ಯವಾಗಿಲ್ಲ. ಟೆಹ್ರಾನ್ ನಿಂದ ಬರ್ಲಿನ್ ವರೆಗೆ, ಕಾಬೂಲ್ ವರೆಗೆ, ಮಹಿಳೆಯರನ್ನು ಒಂಟಿಯಾಗಿ ಬಿಡಿ ಮತ್ತು ನಿಮ್ಮ ಸ್ವಂತ ವ್ಯವಹಾರದ ಬಗ್ಗೆ ಯೋಚಿಸಲು ಪ್ರಯತ್ನಿಸಿ” ಎಂದು ಅವರು ಬರೆದಿದ್ದಾರೆ.
ಇರಾನ್‌ನಿಂದ ಇದೇ ರೀತಿಯ ಮತ್ತೊಂದು ವಿಡಿಯೊವನ್ನು ಹಂಚಿಕೊಂಡ ಅಲಿನೆಜಾದ್, “ಸರಿಯಾಗಿ ಬಟ್ಟೆಗಳನ್ನು ಧರಿಸದ ಕಾರಣ ಮುಸ್ಲಿಂ ಪುರುಷನೊಬ್ಬ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡುವ ವಿಡಿಯೊವನ್ನು ಪೋಸ್ಟ್ ಮಾಡಿದಾಗಿನಿಂದ, ಇದೇ ರೀತಿಯ ಘಟನೆಗಳಿಗೆ ಸಂಬಂಧಿಸಿದ ವರದಿಗಳು ಮತ್ತು ಅನೇಕ ಇರಾನಿನ ಮಹಿಳೆಯರಿಂದ, ವಿಶೇಷವಾಗಿ ಶಿಕ್ಷಣ ತಜ್ಞರಿಂದ ಅನೇಕ ಸಂದೇಶಗಳನ್ನು ಸ್ವೀಕರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಎರಡೂ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಆನ್ ಲೈನ್ ಬಳಕೆದಾರರಿಂದ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಮತ್ತು ಅನೇಕರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಡಿಯೊಗಾಗಿ ಇಲ್ಲಿ ಲಿಂಕ್ ಕ್ಲಿಕ್ ಮಾಡಿ
https://x.com/PicturesFoIder/status/1830749804642632047