ಹರಿದ್ವಾರ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ರೀಲ್ಸ್ ಮಾಡುವುದಕ್ಕಾಗಿ ಯುವಕ ಯುವತಿಯರು ಯಾವುದೇ ಕಸರತ್ತುಗಳನ್ನು ಮಾಡುವುದಕ್ಕೆ ಕೂಡ ಹಿಂದೆ ಮುಂದೆ ಯೋಚಿಸುತ್ತಿಲ್ಲ. ಇನ್ನು ಅಪಾಯಕಾರಿ ಸ್ಥಳಗಳಲ್ಲಿ ಹೋಗಿ ರೀಲ್ ಮಾಡಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಹರಿದ್ವಾರದಲ್ಲಿ ಇಂತಹದೊಂದು ರೀಲ್ಸ್ ಪ್ರಕರಣ ನಡೆದಿದೆ.
ಹರಿದ್ವಾರದಲ್ಲಿ ನಡೆದ ಈ ಘಟನೆಯು ಕೆಲವು ಯುವಕರು ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಲು ಎಷ್ಟರ ಮಟ್ಟಿಗೆ ಹೋಗುತ್ತಾರೆ ಎಂಬುದನ್ನು ತಿಳಿಸುತ್ತದೆ. ಅಲ್ಲದೇ ಧಾರ್ಮಿಕ ಪ್ರಾಮುಖ್ಯತೆ ಹೊಂದಿದ್ದ ಪ್ರಶಾಂತ ಸೌಂದರ್ಯವನ್ನು ಹೊಂದಿರುವ ಈ ಪವಿತ್ರ ನಗರವು ಈ ಘಟನೆಯಿಂದ ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಯುವತಿಯೊಬ್ಬಳು ಸೋಶಿಯಲ್ ಮೀಡಿಯಾಗಾಗಿ ರೀಲ್ ಮಾಡುವಾಗ ವಿಷ್ಣು ಘಾಟ್ ಬಳಿ ಉಕ್ಕಿ ಹರಿಯುವ ಗಂಗಾ ನದಿಗೆ ಜಾರಿ ಬಿದ್ದಿದ್ದಾಳೆ. ಈ ವಿಡಿಯೊ ವೈರಲ್ (Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ ಆಕೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ಸ್‌ಗಳನ್ನು ಹೆಚ್ಚಿಸಲು ಉಕ್ಕಿ ಹರಿಯುತ್ತಿರುವ ಗಂಗಾ ನದಿಯ ದಡದಲ್ಲಿ ರೀಲ್ಸ್ ಮಾಡಿದ್ದಾಳೆ. ಆ ವೇಳೆ ಅವಳು ಕಾಲು ಜಾರಿ ನದಿಗೆ ಬಿದ್ದಿದ್ದಾಳೆ. ಅದೃಷ್ಟವಶಾತ್, ಅವಳು ಉತ್ತಮ ಈಜುಗಾರ್ತಿಯಾದ ಕಾರಣ ನೀರಿನಲ್ಲಿ ಈಜಿ ಪಾರಾಗಿದ್ದಾಳೆ. ಈ ಘಟನೆಯ ವಿಡಿಯೊ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ನಲ್ಲಿ ವೈರಲ್ ಆಗಿದೆ.
रील की शौक़ीन इस लड़की को थोड़ी सजा देकर बहुत साफ भगवान महादेव ने बचा लिया। नहीं तो ये तो …..
— Shubham Shukla (@ShubhamShuklaMP) September 11, 2024
वीडियो हरिद्वार के विष्णु घाट का। भगवान महादेव को भी इनका रील बनाना पसंद नहीं आया। pic.twitter.com/O3kATu4mhP
ನದಿ ತೀರದಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸುವವರಿಗೆ ಇಲ್ಲಿನ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಶ್ರೀ ಗಂಗಾ ಸಭಾ, ಇಂತಹ ಅಪಾಯಕಾರಿ ಚಟುವಟಿಕೆ ಮಾಡದಂತೆ ಎಚ್ಚರಿಕೆಗಳನ್ನು ನೀಡಿದೆ. ಹಾಗೇ ವಿಡಿಯೊಗ್ರಫಿ ಮತ್ತು ಛಾಯಾಗ್ರಹಣವನ್ನು ಸುರಕ್ಷಿತ ಪ್ರದೇಶಗಳಿಗೆ ಮತ್ತು ವಿಶೇಷವಾಗಿ ಹರ್ ಕಿ ಪೌರಿ ಮತ್ತು ಹತ್ತಿರದ ಇತರ ಘಾಟ್‌ಗಳಿಗೆ ಸೀಮಿತಗೊಳಿಸುವಂತೆ ಸಂಸ್ಥೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ:ಸಹೋದರಿಯ ಮದುವೆಯಲ್ಲಿ ʼಜಿಂಗಾತ್ʼ, ʼಲಂಡನ್ ತುಮಕ್ಡಾʼ ಹಾಡಿಗೆ ಡಾನ್ಸ್ ಮಾಡಿದ ಸಾಯಿ ಪಲ್ಲವಿ
ಆದರೆ ಶ್ರೀ ಗಂಗಾ ಸಭಾ ದೂರುಗಳ ಮೇರೆಗೆ ಕಾರ್ಯನಿರತರಾದ ಪೊಲೀಸರು, ತಡವಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದಾರೆ ಮತ್ತು ಸೋಶಿಯಲ್ ಮೀಡಿಯಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟವರಿಗೆ ದಂಡ ವಿಧಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ನಡೆಯುತ್ತಿರುವ ಈ ಘಟನೆಗಳಲ್ಲಿ ಜನರ ಅಜಾಗರೂಕ ನಡವಳಿಕೆಯನ್ನು ನೋಡಿದರೆ ಇನ್ನೂ ಹೆಚ್ಚು ಕಠಿಣ ಕ್ರಮಗಳನ್ನು ಜಾರಿಗೆ ತರುವುದು ಒಳಿತು ಎನ್ನಲಾಗಿದೆ.