ಬೆಂಗಳೂರು: ‘ಸುಮ್ಮನೆ ಇರಲಾರದವರು ಮೈಮೇಲೆ ಇರುವೆ ಬಿಟ್ಟುಕೊಂಡರು’ ಎಂಬ ನೀತಿ ಮಾತು ಎಲ್ಲರಿಗೂ ತಿಳಿದಿದೆ. ಈ ನೀತಿ ಮಾತಿಗೆ ಸರಿಯಾದ ಉದಾಹರಣೆ ಎಂಬಂತೆ ಇತ್ತೀಚೆಗೆ ಘಟನೆಯೊಂದು ನಡೆದಿದೆ. ವೃದ್ಧೆಯೊಬ್ಬರು ಸುಮ್ಮನೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಗೂಳಿಗೆ ಸರಿಯಾದ ದಾರಿಯಲ್ಲಿ ಹೋಗುವಂತೆ ಬುದ್ಧಿ ಕಲಿಸಲು ಹೋಗಿ ಆ ಗೂಳಿಯ ದಾಳಿಗೆ ಒಳಗಾದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದನ್ನು ಕಂಡು ಅನೇಕರು ಆಶ್ಚರ್ಯದ ಜೊತೆಗೆ ವೃದ್ಧೆಯ ಮೇಲೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.
ಸೆಕೆಂಡ್ ಬಿಫೋರ್ ಡಿಸಾಸ್ಟರ್ ಎಂಬ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೊ ವೃದ್ಧೆಗಾದ ದುರ್ಗರ್ತಿಯನ್ನು ತಿಳಿಸುತ್ತದೆ. ಈ ವೈರಲ್ ವಿಡಿಯೊದಲ್ಲಿ ವೃದ್ಧೆಯೊಬ್ಬರು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಎದುರುಬದಿಯಿಂದ ನಡೆದುಕೊಂಡು ಬರುತ್ತಿರುವ ಒಂದು ದೊಡ್ಡ ಕಪ್ಪು ಬಣ್ಣದ ಗೂಳಿಗೆ ತನ್ನ ಕೈಯಲ್ಲಿದ್ದ ಕೋಲಿನಿಂದ ಬಡಿದು ಸರಿಯಾದ ಕಡೆಗೆ ಹೋಗುವಂತೆ ತಿಳಿಸಿದ್ದಾರೆ. ಆಗ ಕೋಪಗೊಂಡ ಗೂಳಿ ವೃದ್ಧೆಯನ್ನು ತನ್ನ ಕೊಂಬಿನಿಂದ ಎತ್ತಿ ಮೇಲೆ ಹಾರಿಸಿ ಕೆಳಗೆ ಬೀಳಿಸಿ ಅಲ್ಲಿಂದ ಪರಾರಿಯಾಗಿದೆ. ಈ ಇಡೀ ಭಯಾನಕ ದಾಳಿ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೆಪ್ಟೆಂಬರ್ 2ರಂದು ಪೋಸ್ಟ್ ಮಾಡಲಾದ ಈ ವಿಡಿಯೊಗೆ ಮತ್ತು 800,000ಕ್ಕೂ ಹೆಚ್ಚು ವೀವ್ಸ್ ಬಂದಿದೆ. ಇದರಿಂದಾಗಿ ಇದು ಹೆಚ್ಚು ವೈರಲ್ ಆಗಿರುವುದಾಗಿ ತಿಳಿಯುತ್ತದೆ. ವೃದ್ಧ ಮಹಿಳೆಯ ಬಗ್ಗೆ ಅನೇಕರು ಕಾಳಜಿ ತೋರಿಸಿದ್ದಾರೆ, ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಅನೇಕರು ಹಾರೈಸಿದ್ದಾರೆ. ಇತರರು ಈ ಘಟನೆಯನ್ನು ಅಸಹ್ಯಕರವೆಂದು ಚಿತ್ರಿಸಿದ್ದಾರೆ.
ಈ ವಿಡಿಯೊವು ದಾರಿತಪ್ಪಿದ ಪ್ರಾಣಿಗಳೊಂದಿಗೆ ಮುಖಾಮುಖಿ ಭೇಟಿಯಾದಾಗ ಎಷ್ಟು ಭಯಂಕರವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಅಂತಹ ಪ್ರಾಣಿಗಳಿಂದ ಉಂಟಾಗುವ ಅಪಾಯಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅವುಗಳನ್ನು ಎದುರಿಸುವಾಗ ಎಚ್ಚರಿಕೆ ಅಗತ್ಯ ಎಂಬುದನ್ನು ಈ ವಿಡಿಯೊ ನೋಡಿ ಕಲಿಯಬಹುದು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಬೀದಿ ಪ್ರಾಣಿಗಳ ಬಗ್ಗೆ ಉತ್ತಮ ನಿರ್ವಹಣೆಯ ಅಗತ್ಯ ಎಂಬುದನ್ನು ಈ ವಿಡಿಯೊ ಸೂಚಿಸುತ್ತದೆ.
ವಿಡಿಯೊಗಾಗಿ ಇಲ್ಲಿ ಲಿಂಕ್ ಕ್ಲಿಕ್ ಮಾಡಿ
https://x.com/NeverteIImeodd/status/1830479256633409643