Thursday, 12th December 2024

32ನೇ ಹುಟ್ಟುಹಬ್ಬ ಆಚರಿಸಿದ ಕೊಹ್ಲಿ

ಅಬುಧಾಬಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುವಾರ 32ನೇ ವರ್ಷಕ್ಕೆ ಕಾಲಿಟ್ಟರು. ಈ ಹಿನ್ನೆಲೆಯಲ್ಲಿ ಬುಧ ವಾರ ರಾತ್ರಿ ಆರ್‌ಸಿಬಿ ತಂಡದ ಆಟಗಾರರೊಂದಿಗೆ ಅಬುಧಾಬಿಯ ಹೋಟೆಲ್‌ನಲ್ಲಿ ಜನ್ಮದಿನದ ಸಂಭ್ರಮ ಆಚರಿಸಿದರು. ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕೂಡ ಜತೆಯಲ್ಲಿದ್ದರು.

ಬಳಿಕ ಆರ್‌ಸಿಬಿ ತಂಡದ ಆಟಗಾರರೆಲ್ಲರೂ ಅವರ ಮುಖ, ತಲೆಯ ತುಂಬೆಲ್ಲೆ ಕೇಕ್ ಮೆತ್ತಿಸಿ ಸಂಭ್ರಮಿಸಿದರು. ಬಳಿಕ ತಂಡದ ಆಟಗಾರರೆಲ್ಲರೂ ನರ್ತಿಸಿದರು.

ವಿರಾಟ್ ಕೊಹ್ಲಿ ಜನ್ಮದಿನದ ಸಂಭ್ರಮಾಚರಣೆಯ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ವೈರಲ್ ಆಗಿವೆ. ಹಾಲಿ-ಮಾಜಿ ಸಹ ಮತ್ತು ಎದುರಾಳಿ ಆಟಗಾರರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗುರು ವಾರ ಜನ್ಮದಿನದ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.