Wednesday, 11th December 2024

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ವಂಡರ್‌ಲಾ ವತಿಯಿಂದ ವಿಶೇಷ ಆಫರ್‌

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್‌ ಪಾರ್ಕ್‌ ವಂಡರ್‌ಲಾ ಹಾಲ್‌ಟಿಕೆಟ್‌ ಆಫರ್‌ ಘೋಷಣೆ ಮಾಡಿದೆ.

2022-2023 ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ, ಪಿಯುಸಿ ೧ನೇ ಮತ್ತು ಪಿಯುಸಿ ೨ನೇ ವರ್ಷದ ಪರೀಕ್ಷೆ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡುತ್ತಿದೆ.

ತಮ್ಮ ಹಾಲ್‌ಟಿಕೆಟ್‌ನನ್ನು ವಂಡರ್‌ಲಾ ಪಾರ್ಕ್‌ನಲ್ಲಿ ತೋರಿಸುವ ವಿದ್ಯಾರ್ಥಿಗಳಿಗೆ ವಂಡರ್‌ಲಾ ಪ್ರವೇಶ ಶುಲ್ಕದಲ್ಲಿ ಶೇ.೩೫ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಕೊಡುಗೆಯನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕವೂ ಪಡೆದುಕೊಳ್ಳಬಹುದು. ಆದರೆ, ವಿದ್ಯಾರ್ಥಿಗಳು ಪಾರ್ಕ್‌ ಪ್ರವೇಶಿ ಸುವ ಮೊದಲು ತಮ್ಮ ಪ್ರಸ್ತುತ ವರ್ಷದ ಹಾಲ್‌ಟಿಕೆಟ್‌ ತೋರಿಸುವುದು ಕಡ್ಡಾಯ. ಈ ಕೊಡುಗೆಯು ಬೆಂಗಳೂರು, ಹೈದರಾಬಾದ್‌ ಹಾಗೂ ಕೊಚ್ಚಿ ಪಾರ್ಕ್‌ಗಳಲ್ಲಿ ಪಡೆಯಬಹುದು.

ಟಿಕೆಟ್‌ನನ್ನು ವಂಡರ್‌ಲಾ ಪೋರ್ಟಲ್ https://bookings.wonderla.com/ ಮೂಲಕ ಮುಂಚಿತವಾಗಿ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಕಾಯ್ದಿರಿಸ ಬಹುದು. ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ www.wonderla.com ಗೆ ಭೇಟಿ ನೀಡಿ ಅಥವಾ ಕರೆ ಮಾಡಿ: ಬೆಂಗಳೂರು: +91 80372 30333, +91 80350 73966