Sunday, 15th December 2024

ಗಮನ ಸೆಳೆದ ಪದ್ಮಶ್ರೀ ಪುರಸ್ಕೃತ ಯೋಗ ಗುರು ಸ್ವಾಮಿ ಶಿವಾನಂದರ ವಿವಿಧ ಯೋಗದ ಭಂಗಿ

ಹಾರಾಷ್ಟ್ರ :ಯೋಗ ಗುರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸ್ವಾಮಿ ಶಿವಾನಂದರು ( 127)ವಿವಿಧ ಯೋಗದ ಭಂಗಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಮುಂಬರುವ ಜೂ.21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಭಾನುವಾರ ಮುಂಬೈನಲ್ಲಿ ಆಯೋಜಿಸಿದ್ದ ಸಮಾರಂಭ ದಲ್ಲಿ ಸ್ವಾಮಿ ಶಿವಾನಂದರು ಪಾಲ್ಗೊಂಡಿದ್ದರು.

ಈ ಇಳಿವಯಸ್ಸಿನಲ್ಲಿಯೂ ವಿವಿಧ ಯೋಗ ಭಂಗಿಗಳನ್ನು ಶಕ್ತಿಯುತವಾಗಿ ಪ್ರದರ್ಶಿಸಿದರು. ಅವರ ಈ ಯೋಗದ ಸಾಮರ್ಥ್ಯ ಎಲ್ಲರನ್ನು ಅಚ್ಚರಿ ಗೊಳಿಸಿತು.

ಆಗಸ್ಟ್ 1896ರಲ್ಲಿ ಜನಿಸಿದ 127 ವರ್ಷ ವಯಸ್ಸಿನ ಇವರು ಯೋಗ ಲೆಜೆಂಡ್. 127 ವರ್ಷಗಳ ಜೀವನದಲ್ಲಿ ಯಾವತ್ತೂ ಅನಾರೋಗ್ಯಕ್ಕೆ ತುತ್ತಾದ ದಾಖಲೆ ಇಲ್ಲ. ಯೋಗ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗೆ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.