Aishwarya Rai: ಕಾನ್ಸ್ ಫೆಸ್ಟಿವಲ್ನಲ್ಲಿ ಐಶ್ವರ್ಯ ರೈ ಮತ್ತೊಂದು ಲುಕ್ಗೆ ನೆಟ್ಟಿಗರು ಫಿದಾ..!
ಫ್ರಾನ್ಸ್ನಲ್ಲಿ ನಡೆಯುತ್ತಿರುವ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಇಡೀ ಸಿನಿಮಾ ತಾರಾಗಣವೇ ಭಾಗವಹಿಸುತ್ತಿದ್ದು ಫಿಲ್ಮ್ ಫೆಸ್ಟಿವಲ್ನ ಮೆರುಗು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಫಿಲ್ಮ್ ಫೆಸ್ಟಿವಲ್ಗೆ ಸಿನಿಮಾ ಸಾಧಕರು, ನಟ ನಟಿಯರು ಭಾಗಿಯಾಗುತ್ತಿದ್ದು ಖ್ಯಾತ ನಟ- ನಟಿಯರ ಫೋಟೋಗಳು ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. 78ನೇ ಅಂತಾರಾಷ್ಟ್ರೀಯ ಕಾನ್ಸ್ ಫಿಲ್ಮ್ ಫೆಸ್ಟಿವಲ್ಗೆ ಬಾಲಿವುಡ್ ಫೇಮಸ್ ಬೆಡಗಿ ನಟಿ ಐಶ್ಚರ್ಯಾ ರೈ ಅವರು ಕೂಡ ಆಗಮಿಸಿದ್ದು, ಇವರ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.



ನಟಿ ಐಶ್ವರ್ಯ ರೈ ಅವರು ಇತ್ತೀಚೆಗಷ್ಟೇ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಐವರಿ ಸೀರೆ ಧರಿಸಿ ಟ್ರೆಡಿಶನಲ್ ಲುಕ್ ಮೂಲಕ ಕಂಗೊಳಿಸಿದ್ದರು. ಇದರ ಬೆನ್ನಲ್ಲೆ ನಟಿ ಐಶ್ವರ್ಯ ರೈ ಅವರು ಸೀರೆ ಲುಕ್ಗಿಂತ ಭಿನ್ನವಾಗಿ ಮಾಡರ್ನ್ ಲುಕ್ನಲ್ಲಿ ಕೂಡ ಕೇನ್ಸ್ ಫಿಲ್ಮ್ ಫೆಸ್ಟಿವಲ್ಗೆ ಆಗಮಿಸಿದ್ದಾರೆ.

ನಟಿ ಐಶ್ವರ್ಯಾ ರೈ ಕಪ್ಪು ಬಣ್ಣದ ಗೌನ್ ಧರಿಸಿದ್ದು ಹಳೆಯ ಕಾಲದ ರಾಜಕುಮಾರಿಯಂತೆ ಗ್ಲಾಮರಸ್ ಆಗಿ ಕಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ನಟಿ ಐಶ್ವರ್ಯ ರೈ ಬರುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆಯ ಮೂಲಕ ಸ್ವಾಗತಿಸಿ ಬರ ಮಾಡಿಕೊಂಡರು.

ಗೌರವ್ ಗುಪ್ತಾ ಕಸ್ಟಮ್ ಗೌನ್ನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ ಈ ಡ್ರೆಸ್ನಲ್ಲಿ ಅಭಿಮಾನಿಗಳನ್ನು ಬೆರಗು ಗೊಳಿಸಿದ್ದಾರೆ. ನಟಿ ಐಶ್ವರ್ಯ ರೈ ಅವರು ಕಪ್ಪು ಬಣ್ಣದ ಸೀಕ್ವಿನ್ಡ್ ಗೌನ್ನಲ್ಲಿ ಪ್ರಿನ್ಸೆಸ್ ನಂತೆ ಕಂಡಿದ್ದಾರೆ. ಈ ಗೌನ್ ಮೇಲ್ಗಡೆಗೆ ಬೃಹತ್ ಶಾಲ್ ಒಂದನ್ನು ಸ್ಟೈಲಾಗಿ ಹಾಕಿಕೊಂಡಿದ್ದು ಅವರ ನೋಟ ನೋಡುಗರ ಗಮನ ಸೆಳೆಯುವಂತೆ ಮಾಡಿದೆ.

ಚೆಂದುಳ್ಳಿ ಚೆಲುವೆ ನಟಿ ಐಶ್ವರ್ಯ ರೈ ಅವರಿಗೆ ವಯಸ್ಸು 51 ಆಗಿದ್ದರೂ ಯಂಗ್ ಲುಕ್ ಹಾಗೆಯೇ ಇದೆ. ಸಿಂಪಲ್ ಮೇಕಪ್ ಗೆ ಡಾರ್ಕ್ ರೆಡ್ ಶೇಡ್ ಲಿಪ್ ಸ್ಟಿಕ್ ಹಾಕಿದ್ದು ಅವರ ಮುಖ ಹೆಚ್ಚು ಗ್ಲಾಮರ್ ಆಗಿ ಹೊಳೆಯುವಂತೆ ಮಾಡಿದೆ. ಸ್ಟಡಿಂಗ್ ಕಿವಿಯೋಲೆ ಮತ್ತು ಕೈಗೆ ಸ್ಟೋನ್ ಉಂಗುರ ಧರಿಸಿದ್ದಾರೆ. ಫ್ರೀ ಹೇರ್ ಸ್ಟೈಲ್ ವಿಭಿನ್ನವಾದ ಲುಕ್ ನೀಡುವಂತೆ ಮಾಡಿದೆ.

ಕಾನ್ಸ್ನಲ್ಲಿ ಲೋರಿಯಲ್ ಪ್ಯಾರಿಸ್ ರಾಯಭಾರಿಯಾಗಿ ನಟಿ ಐಶ್ವರ್ಯ ರೈ ಭಾಗವಹಿಸಿದ್ದರು. ನಟಿ ಐಶ್ವರ್ಯ ರೈ ಜೊತೆಗೆ ಡೇಮ್ ಹೆಲೆನ್ ಮಿರ್ರೆನ್ ಮತ್ತು ಕಾರಾ ಡೆಲೆವಿಂಗ್ನೆ ಕೂಡ ರೆಡ್ ಕಾರ್ಪೆಟ್ ಮೇಲೆ ಹಾಜರಿದ್ದ ಫೋಟೊ ಕೂಡ ವೈರಲ್ ಆಗಿದೆ. ಒಟ್ಟಿನಲ್ಲಿ ನಟಿ ಐಶ್ಚರ್ಯ ರೈ ಅವರು ಸಿನಿಮಾ ರಂಗದಲ್ಲಿ ಇತ್ತೀಚೆಗೆ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ ಅವರಿಗೆ ಇರುವ ಅಭಿಮಾನಿ ಬಳಗ ಈಗಲೂ ಅಷ್ಟೇ ಪ್ರೀತಿಯಿಂದ ಆರಾಧಿಸುತ್ತಿದ್ದಾರೆ.