Ground Zero: ಏ. 25 ರಂದು ತೆರೆ ಮೇಲೆ ಬರಲಿದೆ ಇಮ್ರಾನ್ ಹಶ್ಮಿ 'ಗ್ರೌಂಡ್ ಜೀರೋ' ; BSF ಯೋಧರ ಜೊತೆ ಪ್ರೀಮಿಯರ್ ಶೋ ವೀಕ್ಷಿಸಿದ ಚಿತ್ರತಂಡ
ನಟ ಇಮ್ರಾನ್ ಹಶ್ಮಿ ಅವರ ಬಹುನಿರೀಕ್ಷಿತ ಚಿತ್ರ ಗ್ರೌಂಡ್ ಜೀರೋ ಚಿತ್ರ ಇದೇ ತಿಂಗಳ 25 ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದ ಪ್ರೀಮಿಯರ್ ಶೋವನ್ನು ಚಿತ್ರ ತಂಡ ಕಾಶ್ಮೀರದಲ್ಲಿ ಆಯೋಜನೆ ಮಾಡಿತ್ತು. ಚಿತ್ರ ತಂಡ BSF ಯೋಧರ ಜೊತೆ ಚಿತ್ರವನ್ನು ವೀಕ್ಷಿಸಿದೆ.



ಬಾಲಿವುಡ್ ನಟ ಇಮ್ರಾನ್ ಅಶ್ಮಿ ಅವರ ಬಹುನಿರೀಕ್ಷಿತ ಚಿತ್ರ ಗ್ರೌಂಡ್ ಝೀರೋ ಏ. 25 ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಟ ಇತ್ತೀಚೆಗೆ ಶ್ರೀನಗರದಲ್ಲಿ ತಮ್ಮ ನಿರ್ಮಾಪಕರೊಂದಿಗೆ ಚಿತ್ರದ ಪ್ರಥಮ ಪ್ರದರ್ಶನಕ್ಕೆ ಹಾಜರಾಗಿದ್ದರು, ಅಲ್ಲಿ ಅವರು ಬಿಎಸ್ಎಫ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಚಿತ್ರವನ್ನು ವೀಕ್ಷಿಸಿದ್ದಾರೆ.

ಶುಕ್ರವಾರ ಶ್ರೀನಗರದಲ್ಲಿ ಬಿಎಸ್ಎಫ್ ಜವಾನರಿಗಾಗಿ ಇಮ್ರಾನ್ ಹಶ್ಮಿ ಅವರ 'ಗ್ರೌಂಡ್ ಝೀರೋ' ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇಮ್ರಾನ್ ಹಶ್ಮಿ, ಸಾಯಿ ತಮ್ಹಂಕರ್, ನಿರ್ದೇಶಕ ತೇಜಸ್ ಪ್ರಭಾ ವಿಜಯ್ ದಿಯೋಸ್ಕರ್, ನಿರ್ಮಾಪಕರಾದ ರಿತೇಶ್ ಸಿಧ್ವಾನಿ, ಪತ್ನಿ ಡಾಲಿ ಸಿಧ್ವಾನಿ, ಫರ್ಹಾನ್ ಅಖ್ತರ್ ಮತ್ತು ಪತ್ನಿ ಶಿಬಾನಿ ದಂಡೇಕರ್ ಮತ್ತು ಸಹ-ನಿರ್ಮಾಪಕ ಅರ್ಹಾನ್ ಬಗಾತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿತ್ರದಲ್ಲಿ ಇಮ್ರಾನ್ ಹಶ್ಮಿ ಬಿಎಸ್ಎಫ್ ಕಮಾಂಡೆಂಟ್ ನರೇಂದ್ರ ನಾಥ್ ಧಾರ್ ದುಬೆ ಅವರ ಪಾತ್ರವನ್ನು ನಿರ್ವಹಿಸಿದ್ದು, ಸಾಯಿ ತಮ್ಹಂಕರ್ ಅವರು ಅಧಿಕಾರಿಯ ಪತ್ನಿಯ ಪಾತ್ರವನ್ನು ಮಾಡಿದ್ದಾರೆ. 2000ದ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ ನಡೆಯುವ ಈ ಚಿತ್ರ, ಭಯೋತ್ಪಾದಕ ಮಾಸ್ಟರ್ಮೈಂಡ್ ಘಾಜಿ ಬಾಬಾನನ್ನು ಹೇಗೆ ಹೊಡೆದುರುಳಿಸಲಾಗಿದೆ ಎಂದು ತೋರಿಸಲಾಗಿದೆ.

BSF ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇಮ್ರಾನ್ ಹಶ್ಮಿ ಗ್ರೌಂಡ್ ಝೀರೋ ಚಿತ್ರವು ಗಡಿ ಭದ್ರತಾ ಪಡೆ (BSF) ಯ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಸಂಪೂರ್ಣವಾಗಿ ಮೀಸಲಾಗಿರುವ ಮೊದಲ ಚಿತ್ರ ಎಂದು ಹೇಳಿದ್ದಾರೆ. ಈ ಚಿತ್ರವು ಭಾರತದ ರಾಷ್ಟ್ರೀಯ ಭದ್ರತಾ ಇತಿಹಾಸದಲ್ಲಿ ನಿರ್ಣಾಯಕ ಕಾರ್ಯಾಚರಣೆ' ಎಂದು ನಟ ಕರೆದಿದ್ದಾರೆ.

ಗ್ರೌಂಡ್ ಝೀರೋ ಚಿತ್ರವನ್ನು ತೇಜಸ್ ದಿಯೋಸ್ಕರ್ ಅವರು ನಿರ್ದೇಶಿಸಿದ್ದಾರೆ. ರಿತೇಶ್ ಸಿಧ್ವಾನಿ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕ್ಸೆಲ್ ಎಂಟರ್ಟೈನ್ಮೆಂಟ್ ಎಕ್ಸೆಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ನಿಂದ ಚಿತ್ರ ತೆರೆ ಮೇಲೆ ಬರಲಿದೆ. ಅಭಿಷೇಕ್ ಕುಮಾರ್ ಮತ್ತು ನಿಶಿಕಾಂತ್ ರಾಯ್ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಏಪ್ರಿಲ್ 25, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.