ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muridke: ಮುರಿದ್ಕೆಯಲ್ಲಿ ಭಾರತ ನಾಶಪಡಿಸಿದ ಮಸೀದಿಯನ್ನು ಮತ್ತೆ ನಿರ್ಮಾಣ; ಲಗ್ಗೆಗೆಟ್ಟ ಪಾಕ್‌ನಿಂದ ಪ್ರತಿಜ್ಞೆ

Muridke: ಭಾರತದ ಆಪರೇಷನ್ ಸಿಂಧೂರ್‌ನಭಾಗವಾಗಿ ಗುರಿಯಾಗಿದ್ದ ಒಂಬತ್ತು ಭಯೋತ್ಪಾದಕ ತಾಣಗಳಲ್ಲಿ ಒಂದಾದ ಮುರಿದ್ಕೆಗೆ ಪಾಕಿಸ್ತಾನದ ಕೇಂದ್ರ ಸಚಿವ ರಾಣಾ ತನ್ವೀರ್ ಹುಸೇನ್ಬುಧವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಹಾನಿಗೊಳಗಾದ ಪ್ರದೇಶವನ್ನು ಪಾಕಿಸ್ತಾನ ಸರ್ಕಾರವು ಸ್ವಂತ ವೆಚ್ಚದಲ್ಲಿ ಪುನರ್‌ನಿರ್ಮಾಣ ಮಾಡಲಿದೆ ಎಂದು ಘೋಷಿಸಿದರು. ಅಲ್ಲದೆ, ಭಾರತದ ತಂತ್ರಜ್ಞಾನವನ್ನು ಗೇಲಿ ಮಾಡಿದ ಅವರು, “ಭಾರತದ ಹೆಮ್ಮೆಯ ತಂತ್ರಜ್ಞಾನವು ಶೀಘ್ರದಲ್ಲೇ ಲಾಹೋರ್‌ನ ಬಿಲಾಲ್ ಗಂಜ್‌ನಲ್ಲಿ ಮಾರಾಟವಾಗುವುದನ್ನು ನೋಡಬಹುದು” ಎಂದು ವ್ಯಂಗ್ಯವಾಡಿದ್ದಾರೆ.

ಭಾರತ ಹೊಡೆದುರುಳಿಸಿದ ಮಸೀದಿ ನಿರ್ಮಾಣಕ್ಕೆ ಪಾಕ್ ಸರ್ಕಾರ ಮುಂದು

ಭಾರತ ಹೊಡೆದುರುಳಿಸಿದ ಮಸೀದಿ

Profile Sushmitha Jain May 15, 2025 4:49 PM

ಲಾಹೋರ್: ಭಾರತದ ಆಪರೇಷನ್ ಸಿಂಧೂರ್‌ನ (Operation Sindoor) ಭಾಗವಾಗಿ ಗುರಿಯಾಗಿದ್ದ ಒಂಬತ್ತು ಭಯೋತ್ಪಾದಕ ತಾಣಗಳಲ್ಲಿ ಒಂದಾದ ಮುರಿದ್ಕೆಗೆ (Muridke) ಪಾಕಿಸ್ತಾನದ ಕೇಂದ್ರ ಸಚಿವ ರಾಣಾ ತನ್ವೀರ್ ಹುಸೇನ್ (Rana Tanveer Hussain) ಬುಧವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಹಾನಿಗೊಳಗಾದ ಪ್ರದೇಶವನ್ನು ಪಾಕಿಸ್ತಾನ ಸರ್ಕಾರವು ಸ್ವಂತ ವೆಚ್ಚದಲ್ಲಿ ಪುನರ್‌ನಿರ್ಮಾಣ ಮಾಡಲಿದೆ ಎಂದು ಘೋಷಿಸಿದರು. ಅಲ್ಲದೆ, ಭಾರತದ ತಂತ್ರಜ್ಞಾನವನ್ನು ಗೇಲಿ ಮಾಡಿದ ಅವರು, “ಭಾರತದ ಹೆಮ್ಮೆಯ ತಂತ್ರಜ್ಞಾನವು ಶೀಘ್ರದಲ್ಲೇ ಲಾಹೋರ್‌ನ (Lahore) ಬಿಲಾಲ್ ಗಂಜ್‌ನಲ್ಲಿ ಮಾರಾಟವಾಗುವುದನ್ನು ನೋಡಬಹುದು” ಎಂದು ವ್ಯಂಗ್ಯವಾಡುವ ಮೂಲಕ ಉದ್ಧಟತನ ಮೆರೆದಿದ್ದಾರೆ.

ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರು ಆಪರೇಷನ್‌ನಲ್ಲಿ ಹಾನಿಗೊಳಗಾದ ಮಸೀದಿಯ ಪುನರ್‌ನಿರ್ಮಾಣಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು. ಪಾಕ್ ಮಾಧ್ಯಮಗಳ ಪ್ರಕಾರ, ಈ ಘೋಷಣೆಯು ಮುರಿದ್ಕೆಯಲ್ಲಿ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಮೇ 7, 2025 ರಂದು ಭಾರತವು ಆಪರೇಷನ್ ಸಿಂದೂರ್ ಆರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಿತು. ಈ ದಾಳಿಗೆ ಮುರಿದ್ಕೆಯೂ ಗುರಿಯಾಯಿತು. ಜೈಷ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗಳ ಜಿಹಾದಿ ಸ್ಥಳಗಳು ಈ ದಾಳಿಯ ಪ್ರಮುಖ ಗುರಿಯಾಗಿದ್ದವು. ಈ ಎರಡೂ ಭಯೋತ್ಪಾದಕ ಸಂಘಟನೆಗಳು ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ನಡೆದ ಪ್ರಮುಖ ದಾಳಿಗಳಿಗೆ ಕಾರಣವಾಗಿವೆ. ಈ ದಾಳಿಯು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿತ್ತು.

ಈ ಸುದ್ದಿಯನ್ನು ಓದಿ:Viral Video: ಸ್ಕೈಡೈವಿಂಗ್ ಮಾಡಿದ ಸಿಂಹ; ವಿಡಿಯೊ ನೋಡಿ ಶಾಕ್‌ ಆದ ನೆಟ್ಟಿಗರು ಹೇಳಿದ್ದೇನು?

ಲಾಹೋರ್‌ನಿಂದ ಸುಮಾರು 33 ಕಿಮೀ ದೂರದಲ್ಲಿರುವ ಐತಿಹಾಸಿಕ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿರುವ ಮುರಿದ್ಕೆಯು ಲಷ್ಕರ್-ಎ-ತೊಯ್ಬಾದ (LeT) ಪ್ರಧಾನ ಕಚೇರಿಯಾದ ಮರ್ಕಜ್-ಎ-ತೊಯ್ಬಾಕ್ಕೆ ಆತಿಥ್ಯ ವಹಿಸಿದೆ. ಜಮ್ಮತ್-ಉದ್-ದಾವಾ ಎಂಬ ಸಂಸ್ಥೆಯ ಮುಖವಾಡದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಕೇಂದ್ರವು ಲಷ್ಕರ್-ಎ-ತೊಯ್ಬಾದ ಲಾಜಿಸ್ಟಿಕ್ ಮತ್ತು ಕಾರ್ಯಾಚರಣೆಯ ಕೇಂದ್ರವಾಗಿದೆ. 200 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಸಂಕೀರ್ಣವು ಪಾಕಿಸ್ತಾನ ಮಾತ್ರವಲ್ಲ, ವಿಶ್ವದ ಅತಿದೊಡ್ಡ ಭಯೋತ್ಪಾದಕ ಸೌಲಭ್ಯಗಳಲ್ಲಿ ಒಂದಾಗಿದೆ.

1980ರ ದಶಕದ ಕೊನೆಯಲ್ಲಿ ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಾಫಿಜ್ ಮೊಹಮ್ಮದ್ ಸಯೀದ್, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಇತರೆ ಧನಸಹಾಯದ ಬೆಂಬಲದೊಂದಿಗೆ ಇದನ್ನು ಸ್ಥಾಪಿಸಿದರು. ಇಲ್ಲಿ ಪಾಕಿಸ್ತಾನ ಮತ್ತು ಕಾಶ್ಮೀರದಿಂದ ನೇಮಕಗೊಂಡ ನೂರಾರು ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತದೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳ ಯೋಜನೆಯನ್ನು ರೂಪಿಸಲಾಗುತ್ತದೆ.