Viral Video: ಇಷ್ಟು ದಿನ ಸೀಕ್ರೆಟ್ ಆಗಿ ಇಟ್ಟಿದ್ದ ಅನುಷ್ಕಾ-ಕೊಹ್ಲಿ ಮುದ್ದು ಮಕ್ಕಳ ವಿಡಿಯೊ ಇದೀಗ ವೈರಲ್!
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಗಾಗ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಇಬ್ಬರು ವೃತ್ತಿಜೀವನದ ಯಶಸ್ಸಿನ ಜೊತೆಗೆ ದಾಂಪತ್ಯ ಜೀವನದಲ್ಲಿಯೂ ಯಶಸ್ಸನ್ನು ಕಂಡುಕೊಂಡಿದ್ದಾರೆ. ತಮ್ಮ ಕುಟುಂಬದ ಜೊತೆಗೆ ಕಳೆದ ಖುಷಿಯ ಕ್ಷಣಗಳ ಫೋಟೋವನ್ನು ನಟಿ ಅನುಷ್ಕಾ ಶರ್ಮಾ ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅನುಷ್ಕಾ ಮತ್ತು ವಿರಾಟ್ ಮುದ್ದು ಮಕ್ಕಳಾದ ವಮಿಕಾ ಮತ್ತು ಅಕಾಯ್ ಅವರ ತುಂಟಾಟದ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.


ನವದೆಹಲಿ: ಭಾರತದ ಸೆಲೆಬ್ರಿಟಿ ಕಪಲ್ ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಆಗಾಗ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಇಬ್ಬರು ವೃತ್ತಿಜೀವನದ ಯಶಸ್ಸಿನ ಜೊತೆಗೆ ದಾಂಪತ್ಯ ಜೀವನದಲ್ಲಿಯೂ ಯಶಸ್ಸನ್ನು ಕಂಡುಕೊಂಡಿದ್ದಾರೆ. ತಮ್ಮ ಕುಟುಂಬದ ಜೊತೆಗೆ ಕಳೆದ ಖುಷಿಯ ಕ್ಷಣಗಳ ಫೋಟೋವನ್ನು ನಟಿ ಅನುಷ್ಕಾ ಶರ್ಮಾ ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಿತ್ತಿರುತ್ತಾರೆ. ಆದರೆ ಮಕ್ಕಳ ಫೋಟೊ ಮಾತ್ರ ಆದಷ್ಟು ಸೀಕ್ರೆಟ್ ಆಗಿ ಇಡಲು ಬಯಸುತ್ತಾರೆ. ಈ ಬಾರಿ ಅನುಷ್ಕಾ ಮತ್ತು ವಿರಾಟ್ ಮುದ್ದು ಮಕ್ಕಳಾದ ವಮಿಕಾ ಮತ್ತು ಅಕಾಯ ಅವರ ತುಂಟಾಟದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಕಾಯ್ ಮತ್ತು ವಮಿಕಾ ಅವರ ಈ ಕ್ಯೂಟ್ ವಿಡಿಯೊ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ದಂಪತಿಗಳು ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಸಂಭ್ರಮಿಸುತ್ತಿದ್ದು ನಟಿ ಅನುಷ್ಕಾ ಅವರು ಮಗು ಅಕಾಯ್ ನನ್ನು ಎತ್ತಿಕೊಂಡಿದ್ದಾರೆ. ಆಗ ಅಲ್ಲಿ ಅನುಷ್ಕಾ ಅವರ ಆಪ್ತರೊಬ್ಬರು ಅಕಾಯ್ ನನ್ನು ಮುದ್ದಾಡಿಸಿದ್ದಾರೆ. ಮಗು ಅಕಾಯ್ ನನ್ನು ಮುದ್ದಾಡಿಸಿದ್ದನ್ನು ಕಂಡ ವಮಿಕಾ ಪ್ರೀತಿಯಿಂದ ನೋಡುತ್ತಾ ಕ್ಯೂಟ್ ಎಕ್ಸ್‌ಪ್ರೆಶನ್‌ನ ನಗುಬೀರಿದ್ದ ಅಪರೂಪದ ದೃಶ್ಯವನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು.
ವೈರಲ್ ಆದ ವಿಡಿಯೊದಲ್ಲಿ ಅನುಷ್ಕಾ ಬಿಳಿ ಟೀ ಶರ್ಟ್ ಮತ್ತು ಹಸುರು ಪ್ಯಾಂಟ್ ಧರಿಸಿದ್ದು ಸಿಂಪಲ್ ಆಗಿ ಕಾಣಿಸಿ ಕೊಂಡಿದ್ದಾರೆ. ವಾಮಿಕ ಬಿಳಿ ಫ್ರಾಕ್ ಧರಿಸಿ ಪುಟ್ಟ ಪ್ರಿನ್ಸೆಸ್ ನಂತೆ ಕಂಡಿದ್ದಾರೆ. ವಿರಾಟ್ ಕಂದು ಬಣ್ಣದ ಟಿ-ಶರ್ಟ್ ಧರಿಸಿದ್ದು ಫ್ಯಾಮಿಲಿ ಜೊತೆ ಔಟಿಂಗ್ ಹೋಗಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು. ದಂಪತಿಗಳು ಈವರೆಗೆ ತಮ್ಮ ಮಕ್ಕಳ ಫೋಟೋಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಆದರೆ, ಮಕ್ಕಳ ಹೆಸರನ್ನು ವಾಮಿಕಾ ಮತ್ತು ಅಕಾಯ್ ಎಂಬು ದನ್ನು ಮಾತ್ರ ತಿಳಿಸಿದ್ದರು. ಹೀಗಿದ್ದರೂ ವಿರಾಟ್ ಮತ್ತು ಅನುಷ್ಕಾ ಅಭಿಮಾನಿಗಳ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಈ ವಿಡಿಯೊಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ವಿರುಷ್ಕಾ ಫ್ಯಾಮಿಲಿ ಎಷ್ಟು ಮುದ್ದಾಗಿದೆ, ದೃಷ್ಟಿ ತೇಗಿಬೇಕು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ವಿರಾಟ್ ಅನುಷ್ಕಾ ಸುಂದರ ಕ್ಷಣ ಮನತುಂಬುವಂತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Virat-Anushka : ಪ್ರೇಮಾನಂದ್ ಮಹಾರಾಜರ ಆಶ್ರಮಕ್ಕೆ ತೆರಳಿದ ವಿರುಷ್ಕಾ ದಂಪತಿ!
ಅನೇಕ ವರ್ಷಗಳ ಕಾಲ ಪ್ರೀತಿಸಿ ಬಳಿಕ 2017 ರಲ್ಲಿ ಇಟಲಿಯಲ್ಲಿ ಅನುಷ್ಕಾ ವಿರಾಟ್ ಅವರನ್ನು ವಿವಾಹವಾದರು. ಮಗಳು ವಾಮಿಕಾ ಮತ್ತು ಮಗ ಅಕಾಯ್ ಜೊತೆ ವಿರಾಟ್ ಅನುಷ್ಕಾ ಖುಷಿಯ ಕ್ಷಣವನ್ನು ಎಂಜಾಯ್ ಮಾಡುತ್ತಾರೆ. ವಿರಾಟ್ ಕೊಹ್ಲಿ ಅವರು ತಮ್ಮ 14 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದು ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ಬಹಿರಂಗ ಪಡಿಸಿದ್ದರು. ಈ ವಿಚಾರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ..