Shah Rukh Khan Son: ಶಾರುಖ್ ಪುತ್ರನ ಗ್ರ್ಯಾಂಡ್ ಬರ್ತ್ ಡೇ ಸೆಲೆಬ್ರೇಶನ್! ಇಲ್ಲಿದೆ ಫೋಟೋಸ್
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮಾತ್ರವಲ್ಲ ಅವರ ಮಕ್ಕಳು ಕೂಡ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಶಾರುಖ್ ಖಾನ್ ಪುತ್ರ ಅಬ್ರಾಮ್ ತನ್ನ 12ನೇ ಹುಟ್ಟುಹಬ್ಬವನ್ನು ತಾಯಿ ಗೌರಿ ಮತ್ತು ಅಕ್ಕ ಸುಹಾನಾ ಜೊತೆ ಸಂಭ್ರಮಿಸಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.



ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ಗೆ ಮೂವರು ಮಕ್ಕಳಿದ್ದಾರೆ. ಮಗಳು ಸುಹಾನಾ ಖಾನ್ ಈಗಾಗಲೇ ನಾಯಕಿಯಾಗಿ ಇಂಡಸ್ಟ್ರಿಗೆ ಎಂಟ್ರಿ ನೀಡಿದ್ದಾರೆ. ಮಗ ಆರ್ಯನ್ ಖಾನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ಅವರ ಮೂರನೇ ಪುತ್ರ ಅಬ್ರಾಮ್ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಶಾರುಖ್ ಖಾನ್ ಅವರ ಕಿರಿಯ ಪುತ್ರ ಅಬ್ರಾಮ್ 12ನೇ ವರ್ಷದ ಹುಟ್ಟುಹಬ್ಬವನ್ನು ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಬಹಳಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಶಾರುಖ್ ಮಗ ಅಬ್ರಾಮ್ 12ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಬಹಳ ಕ್ಯೂಟ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ. ಶಾರುಖ್ ಖಾನ್ ಮತ್ತು ಅವರ ಮಗ ಆರ್ಯನ್ ಖಾನ್ ಈ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಿಲ್ಲ.

ಅಬ್ರಾಮ್ ತಮ್ಮ ಅಕ್ಕ ಸುಹಾನಾ ಖಾನ್ ಜೊತೆ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಅಬ್ರಾಮ್ ಗೆ ಅಕ್ಕ ಸುಹಾನಾ ಇಷ್ಟ ಎಂಬುದು ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅವರಿಬ್ಬರು ಕೈ- ಕೈ ಹಿಡಿದು ನಿಂತಿರುವ ಫೋಟೋದಲ್ಲಿ ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ತಾಯಿ, ಅಕ್ಕ, ಅಜ್ಜಿ, ಮಾವಂದಿರ ಜೊತೆ ಅಬ್ರಾಮ್ ಗ್ರೂಫ್ ಪೋಟೋ ದಲ್ಲಿ ಕಾಣಿಸಿಕೊಂಡಿದ್ದಾನೆ. ಅಬ್ರಾಮ್ ಬ್ಲೂ ಬಣ್ಣದ ಸಿಂಪಲ್ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಕಂಡಿದ್ದಾನೆ. ಈ ಪೋಟೋ ನೆಟ್ಟಿಗರ ಮನ ಗೆದ್ದಿದ್ದು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಅಪ್ಪನಂತೆ ಮಗನು ಮುದ್ದಾಗಿದ್ದಾನೆ ಎಂದು ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಹುಟ್ಟುಹಬ್ಬದ ಆಚರಣೆಯು ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿರುವ ಆರ್ಟ್ಸ್ ಕೆಫೆಯಲ್ಲಿ ನಡೆದಿದ್ದು, ಗೌರಿ ಖಾನ್ ಅವರೇ ವಿನ್ಯಾಸಗೊಳಿಸಿದ್ದಾರೆ.