ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uorfi Javed: 2025ರ ಕಾನ್ಸ್‌ ಚಿತ್ರೋತ್ಸವಕ್ಕೆಂದು ಸಿದ್ಧಪಡಿಸಿದ್ದ ಉರ್ಫಿ ಜಾವೇದ್ ಡ್ರೆಸ್‌ ರಿವೀಲ್‌; ಈ ವಿಡಿಯೊ ನೋಡಿ

Uorfi Javed: ತನ್ನ ಪ್ರಾಯೋಗಿಕ ಫ್ಯಾಷನ್ ಶೈಲಿಗೆ ಹೆಸರಾದ ಉರ್ಫಿ ಜಾವೆದ್ , ವಿಶಿಷ್ಟವಾದ ಕೌಚರ್ ಶೈಲಿಯ ಉಡುಗೆಗಳನ್ನು ರಚಿಸುವ ಮೂಲಕ ಮತ್ತು ಖ್ಯಾತ ವಿನ್ಯಾಸಕರಿಂದ ಸ್ಪೂರ್ತಿ ಪಡೆದು ಗಮನ ಸೆಳೆಯುವ ಉಡುಗೆಗಳನ್ನು ತಯಾರಿಸುವಲ್ಲಿ ಖ್ಯಾತಿಗಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ವಿಡಿಯೊವೊಂದರಲ್ಲಿ, 2025ರ ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ಗೆ ಧರಿಸಲು ಬಯಸಿದ್ದ ಡ್ರೆಸ್‌ನ್ನು ಆಕೆ ಬಹಿರಂಗಪಡಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಕೇಸ್‌‌ಗೆ ತೆರಳಲು ಅವರಿಗೆ ಸಾಧ್ಯವಾಗಲಿಲ್ಲ.

ಕಾನ್ಸ್‌ ಫೆಸ್ಟಿವಲ್‌ಗೆ  ಉರ್ಫಿ ಜಾವೆದ್ ಗೈರು- ಔಟ್‌ಫಿಟ್‌ ರಿವೀಲ್‌

ಉರ್ಫಿ ಜಾವೆದ್‌

Profile Sushmitha Jain May 18, 2025 7:27 AM

ಮುಂಬೈ: ತನ್ನ ಪ್ರಾಯೋಗಿಕ ಫ್ಯಾಷನ್ (Fashion) ಶೈಲಿಗೆ ಹೆಸರಾದ ಉರ್ಫಿ ಜಾವೆದ್ (Uorfi Javed), ವಿಶಿಷ್ಟವಾದ ಕೌಚರ್ ಶೈಲಿಯ ಉಡುಗೆಗಳನ್ನು ರಚಿಸುವ ಮೂಲಕ ಮತ್ತು ಖ್ಯಾತ ವಿನ್ಯಾಸಕರಿಂದ ಸ್ಪೂರ್ತಿ ಪಡೆದು ಗಮನ ಸೆಳೆಯುವ ಉಡುಗೆಗಳನ್ನು ತಯಾರಿಸುವಲ್ಲಿ ಖ್ಯಾತಿಗಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ವಿಡಿಯೊವೊಂದರಲ್ಲಿ, 2025ರ ಕೇನ್ಸ್ (Cannes film Festival) ಫಿಲ್ಮ್ ಫೆಸ್ಟಿವಲ್‌ಗೆ ಧರಿಸಲು ಬಯಸಿದ್ದ ಡ್ರೆಸ್‌ನ್ನು ಆಕೆ ಬಹಿರಂಗಪಡಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಕೇಸ್‌‌ಗೆ ತೆರಳಲು ಅವರಿಗೆ ಸಾಧ್ಯವಾಗಲಿಲ್ಲ.

ಮೇ 17 ರಂದು, ಉರ್ಫಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ಮುಂಬೈನಲ್ಲಿ ಒಂದು ದಿನ ಮೊದಲು ಧರಿಸಿದ್ದ ಕೆಂಪು 'ಬ್ಲೂಮಿಂಗ್ ಫ್ಲವರ್' ಡ್ರೆಸ್ ತಾನು ಕಾನ್ಸ್ 2025ರ ರೆಡ್ ಕಾರ್ಪೆಟ್‌ಗೆ ಧರಿಸಲು ಯೋಜಿಸಿದ್ದ ಉಡುಗೆ ಎಂದು ಹಂಚಿಕೊಂಡಿದ್ದಾರೆ. "ಇದು ಕೇಸ್‌ ರೆಡ್ ಕಾರ್ಪೆಟ್ ಉಡುಗೆಯಾಗಿರಬೇಕಿತ್ತು. ಇದು ಇನ್ನೂ ಪೂರ್ಣಗೊಂಡಿಲ್ಲ" ಎಂದು ಆಕೆ ಕ್ಯಾಪ್ಷನ್ ಬರೆದಿದ್ದಾರೆ.

ವಿಡಿಯೊದಲ್ಲಿ ಈ ಡ್ರೆಸ್ ತಯಾರಿಯ ಒಂದು ಝಲಕ್ ಇದೆ. ಉರ್ಫಿಯ ಪ್ರಕಾರ, ಈ ಉಡುಗೆಯ ಕಾನ್ಸೆಪ್ಟ್ 'ಬ್ಲೂಮಿಂಗ್ ರೋಸ್' ಆಗಿತ್ತು. ಒಂದು ಮೊಗ್ಗು ತೆರೆದು ಹೂವಾಗಿ ಅರಳುವಂತೆ, ಕಸೂತಿಯ ದಳಗಳಿಂದ ಕೂಡಿದ ಉಡುಗೆಯನ್ನು ರಚಿಸಲು ಅವರು ಬಯಸಿದ್ದರು. "ನಮಗೆ ತುಂಬ ಕಡಿಮೆ ಸಮಯವಿತ್ತು, ಎಲ್ಲವೂ ಕೊನೆಯ ಕ್ಷಣದಲ್ಲಿ ನಿರ್ಧರಿತವಾಯಿತು. ಹೀಗಾಗಿ ರಾತ್ರಿ-ಹಗಲು ಶ್ರಮಿಸಿದೆವು. ಡ್ರೆಸ್‌ನ ಮೇಲೆ ಕಸೂತಿ ಕೆಲಸವನ್ನೂ ಮಾಡಿದ್ದೇನೆ, ಬೆಳಕು ಬಿದ್ದಾಗ ಅದು ತೆರೆದುಕೊಂಡು ಹೊಳೆಯುತ್ತದೆ" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಈ ಐಸ್‍ಕ್ರೀಂ ಕೋನ್‍ನಲ್ಲಿ ಹಲ್ಲಿಯ ಬಾಲ ಪತ್ತೆ; ವಿಡಿಯೊ ವೈರಲ್

ದುರದೃಷ್ಟವಶಾತ್, ಉರ್ಫಿ ಕಾನ್ಸ್‌ಗೆ ತೆರಳಲು ಸಾಧ್ಯವಾಗಲಿಲ್ಲ. ಆದರೆ, ಆಕೆ ಧೈರ್ಯಗೆಡದೆ, ಉಡುಗೆ ತಯಾರಾಗಿರುವುದರಿಂದ ಮುಂಬೈನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಈ ಡ್ರೆಸ್ ಸುಮಾರು 20 ಕೆಜಿ ತೂಕವಿತ್ತು. "ಇದನ್ನು ಧರಿಸಿ ನಡೆಯಲು ಕೂಡ ಸಾಧ್ಯವಾಗಲಿಲ್ಲ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಉರ್ಫಿಯ ಈ ಲುಕ್‌ಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್‌ಗಳಲ್ಲಿ ಒಬ್ಬ ಬಳಕೆದಾರ "ಕಾನ್ಸ್‌ಗೆ ಉರ್ಫಿಯೇ ಸೂಕ್ತ ಎಂದು ಬರೆದಿದ್ದಾರೆ. ಮತ್ತೊಬ್ಬರು, "12 ಇನ್‌ಫ್ಲುಯೆನ್ಸರ್‌ಗಳು ಕಳಪೆ ಫ್ಯಾಷನ್ ಉಡುಗೆ ಧರಿಸಿರುವುದನ್ನು ನೋಡಿದ್ದೇನೆ. ಆದರೆ ಇದು ಒಂದು 'ಬ್ಲೂಮ್'! ಮುಂದಿನ ಮೆಟ್ ಗಾಲಾದಲ್ಲಿ ನೀವು ಇರುವುದು ಖಚಿತವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. "ನೀವು ಕಾನ್ಸ್‌ಗೆ ಖಂಡಿತವಾಗಿಯೂ ಅರ್ಹರಾಗಿದ್ದೀರಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇದರಿಂದ ಕಾನ್ಸ್‌ಗೆ ನಷ್ಟವಾಗಿದೆ,” ಎಂದು ಬರೆದಿದ್ದಾರೆ.