Miss Universe Karnataka: ರ್ಯಾಂಪ್ ವಾಕ್ ಮೂಲಕ ಗಮನ ಸೆಳೆದ ಮಾಡೆಲ್ಗಳು; ಮಿಸ್ ಯುನಿವರ್ಸ್ ಕರ್ನಾಟಕ 2025ರ ಕಲರ್ಫುಲ್ ಫೋಟೊ ಇಲ್ಲಿದೆ
ಉದ್ಯಾನನಗರಿ ಬೆಂಗಳೂರಿನಲ್ಲಿ ಮೇ 16ರಂದು ಮಿಸ್ ಯುನಿವರ್ಸ್ ಕರ್ನಾಟಕ-2025ರ ಸೌಂದರ್ಯ ಸ್ಪರ್ಧೆಯಲ್ಲಿ ಯಶಸ್ವಿಯಾಗಿ ನೆರವೇರಿತು. ಮಿಸ್ ಯೂನಿವರ್ಸ್ ಕರ್ನಾಟಕ ಟೈಟಲ್ ಹಾಗೂ ಕಿರೀಟವನ್ನು ವಂಶಿ ಮುಡಿಗೇರಿಸಿಕೊಂಡರು. ಈ ಸೌಂದರ್ಯ ಸ್ಪರ್ದೆಯ ಕಲರ್ಫುಲ್ ಝಲಕ್ ಇಲ್ಲಿದೆ.



ಉದ್ಯಾನನಗರಿ ಬೆಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಫ್ಯಾಷನ್ ಪೇಜೆಂಟ್ ಡೈರೆಕ್ಟರ್ ನಂದಿನಿ ನಾಗರಾಜ್ ನೇತೃತ್ವದಲ್ಲಿ, ಮಿಸ್ ಯುನಿವರ್ಸ್ ಕರ್ನಾಟಕ ವಿಭಾಗದ ಫಿನಾಲೆ ಶುಕ್ರವಾರ (ಮೇ 16) ನಡೆದಿದ್ದು, ವಿಶ್ವವಾಣಿ ಟಿವಿ ಸ್ಪೆಷಲ್ ಕೈ ಜೋಡಿಸಿತು.

ಕರ್ನಾಟಕ ಇತಿಹಾಸದಲ್ಲೆ ಮೊದಲ ಬಾರಿಗೆ ನಡೆದ ಅಡಿಷನ್ನಲ್ಲಿ ಸುಮಾರು 100ಕ್ಕೂ ಹೆಚ್ಚು ಮಾಡೆಲ್ಗಳು ಭಾಗವಹಿಸಿದ್ದರು. ಫಿನಾಲೆಯಲ್ಲಿ 30 ಯುವತಿಯರ ಮಧ್ಯೆ ಮಿಸ್ ಯುನಿವರ್ಸ್ ಕರ್ನಾಟಕ ಟೈಟಲ್ಗಾಗಿ ಪ್ರಬಲ ಪೈಪೋಟಿ ಕಂಡುಬಂತು.

ಮಿಸ್ ಯುನಿವರ್ಸ್ ಕರ್ನಾಟಕ 2025ರ ಸ್ಪರ್ಧೆಯ ನಾನಾ ಸುತ್ತುಗಳಲ್ಲಿ ಮಾಡೆಲ್ ವಂಶಿ ಮೊದಲನೇ ಸ್ಥಾನ ಪಡೆದು ಟೈಟಲ್ ತಮ್ಮದಾಗಿಸಿಕೊಂಡರು. ಇನ್ನು ಅಸ್ಮಿತಾ ಮೊದಲನೇ ರನ್ನರ್ ಅಪ್ ಆದರೆ, ಲೇಖನಾ ಎರಡನೇ ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಸೌಂದರ್ಯ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಇಂಡೋ-ವೆಸ್ಟರ್ನ್ ಸೀರೆ ಸ್ಟೈಲಿಂಗ್ನಲ್ಲಿ ಕ್ಯಾಟ್ ವಾಕ್ ಮಾಡಿದರು. ಎರಡನೇ ರೌಂಡ್ನಲ್ಲಿ ಗ್ಲಾಮರಸ್ ಬೀಚ್ ಸೈಡ್ ರೆಸಾರ್ಟ್ವೇರ್ಸ್ ಧರಿಸಿ, ಸಿನಿಮಾ ನಟಿಯರಂತೆ ಕಾಣಿಸಿಕೊಂಡು, ಹೆಜ್ಜೆ ಹಾಕಿದರು. ಇನ್ನು, ಮೂರನೇ ಸುತ್ತಿನಲ್ಲಿ, ಸೆಲೆಬ್ರೆಟಿ ಡಿಸೈನರ್ ಚಂದನ್ ಗೌಡ ಅವರ ಡಿಸೈನರ್ ಎಕ್ಸ್ಕ್ಲೂಸಿವ್ ಗೌನ್ಗಳಲ್ಲಿ ಕಾಣಿಸಿಕೊಂಡು, ಜ್ಯೂರಿ ಪ್ಯಾನೆಲ್ ಪ್ರಶ್ನೆಗಳಿಗೆ ಉತ್ತರಿಸಿದರು.

ಜ್ಯೂರಿಯಾಗಿ ಮಿಸ್ ಯುನಿವರ್ಸ್ ಇಂಡಿಯಾ ಟೈಟಲ್ ವಿಜೇತೆ ರಿಯಾ ಸಿಂಘಾ, ನ್ಯಾಷನಲ್ ಡೈರೆಕ್ಟರ್ ನಿಖಿಲ್ ಆನಂದ್, ಮಿಸ್ ಯೂನಿವರ್ಸ್ ಕರ್ನಾಟಕ 2024 ಟೈಟಲ್ ವಿಜೇತೆ ಅವನಿ, ಪೇಜೆಂಟ್ನ ಫ್ರಾಂಚೈಸ್ ಡೈರೆಕ್ಟರ್ ಅಮ್ಜದ್ ಖಾನ್ ಭಾಗವಹಿಸಿದ್ದರು.