ತಿರುವನಂತಪುರಂ: ಕೇರಳದಲ್ಲಿ ಉಪಚುನಾವಣೆಯ (Wayanad by-polls) ಕಾವು ಜೋರಾಗಿದೆ. ಈ ನಡುವೆ ಭಾನುವಾರ ಕೇರಳದ ವಡುವಾಂಚಲ್ ಪ್ರದೇಶದಲ್ಲಿ ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರ ರೋಡ್ ಶೋ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿಆರ್‌ಪಿಎಫ್ (CRPF) ನಡುವೆ ಘರ್ಷಣೆ ಸಂಭವಿಸಿದೆ ಎಂದು ವರದಿಯಾಗಿದೆ. ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ತನ್ನ ವಾಹನದಿಂದ ಜನಸಮೂಹದತ್ತ ಕೈಬೀಸುತ್ತಿರುವುದು ಕಾಣಿಸುತ್ತದೆ. ಭದ್ರತಾ ದೃಷ್ಟಿಯಿಂದ ಸಿಆರ್‌ಪಿಎಫ್ ಸಿಬ್ಬಂದಿಗಳು ಕಾರ್ಯಕರ್ತರನ್ನು ವಾಹನ ಸುತ್ತ ನಿಲ್ಲಲು ಅವಕಾಶ ಕೊಡಲಿಲ್ಲ. ಈ ಕಾರಣಕ್ಕೆ ರೋಡ್‌ಶೋ ನಡುವೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ್ದಾರೆ.
#WATCH | Wayanad, Kerala: A clash broke out between Congress worker and CRPF during the road show of Congress candidate for Wayanad Lok Sabha seat bye-elections Priyanka Gandhi Vadra's roadshow at Vaduvanchal, Muppainad Kalpetta pic.twitter.com/9EOubAxiu8
— ANI (@ANI) November 10, 2024
ಕೆಲ ಕಾಲ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ನಂತರ ಕೆಲ ಕಾರ್ಯಕರ್ತರು ಉಳಿದವರನ್ನು ಸಮಾಧಾನ ಮಾಡಿ ಕರೆದುಕೊಂಡು ಹೋಗಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಪ್ರಸಿದ್ಧ ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ಕೊನೆ ಹಂತದ ಬಹಿರಂಗ ಪ್ರಚಾರ ಮುಗಿಸಿದ್ದಾರೆ.
ನಂತರ ಕ್ಷೇತ್ರದಲ್ಲಿ ರೋಡ್‌ಶೋ ನಡೆಸಿದ ಅವರು ಕ್ರಿಶ್ಚಿಯನ್ ಸಮುದಾಯದ ಜನರನ್ನು ಭೇಟಿಯಾಗಿದ್ದಾರೆ. ನಿಮ್ಮ ಅವರ ಬೇಡಿಕೆಗಳಿಗಾಗಿ ಹೋರಾಡುತ್ತೇನೆ ಎಂದು ಕಾಂಗ್ರೆಸ್ ನಾಯಕಿ ಭರವಸೆ ನೀಡಿದ್ದಾರೆ. ಜನರು ನನಗೆ ಸಾಕಷ್ಟು ಪ್ರೀತಿ ಮತ್ತು ಪ್ರೀತಿಯನ್ನು ನೀಡಿದ್ದಾರೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಇಲ್ಲಿ ಪ್ರಚಾರ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ನಾನು ಕ್ರಿಶ್ಚಿಯನ್ ಸಮುದಾಯದ ಅನೇಕ ಜನರನ್ನು ಭೇಟಿ ಮಾಡುತ್ತಿದ್ದೇನೆ. ಅವರ ಬೇಡಿಕೆಗಳಿಗಾಗಿ ನಾನು ಹೋರಾಟ ಮಾಡುತ್ತೇನೆ. ನಾನು ಎಲ್ಲರಿಗಾಗಿ ಹೋರಾಡುತ್ತೇನೆ, ನಾನು ಅವರೊಂದಿಗೆ ಚರ್ಚಿಸುತ್ತೇನೆ, ಸರಿಯಾಗಿ ಅರ್ಥಮಾಡಿಕೊಳ್ಳುತ್ತೇನೆ ಮತ್ತು ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ವಯನಾಡು ಉಪಚುನಾವಣೆ
ವಯನಾಡು ಉಪಚುನಾವಣೆ ನವೆಂಬರ್ 13 ರಂದು ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಹಾಗೂ ವಯನಾಡಿನಲ್ಲಿ ರಾಹುಲ್ ಗಾಂಧಿ ಜಯಗಳಿಸಿದ್ದರು. ನಂತರ ವಯನಾಡು ಕ್ಷೇತ್ರಕ್ಕೆ ರಾಜಿನಾಮೆ ಕೊಟ್ಟಿದ್ದರು. ಇದೀಗ ಖಾಲಿಯಿರುವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.