Saturday, 21st September 2024

ಹೊಸ ಫೀಚರ್‌ಗಳ ನವೀನ ಸ್ಮಾರ್ಟ್‌ಫೋನ್‌ಗಳು

* ವಸಂತ ಗ ಭಟ್

ತಂತ್ರಜ್ಞಾನ ಮುಂದುವರಿದಂತೆಲ್ಲಾ, ಕಡಿಮೆ ಬೆಲೆಗೆ ಫೀಚರ್ ಹೊಂದಿರುವ ಮೊಬೈಲ್‌ಗಳು ಜನಸಾಮಾನ್ಯರಿಗೆ ದೊರೆಯುವ ಅವಕಾಶ ಈ ದಿನಗಳಲ್ಲಿದೆ. ಬಜೆಟ್ ಬೆಲೆಯ ಮತ್ತು ಮಧ್ಯಮ ಬೆಲೆಯ ಎರಡು ಸ್ಮಾಾರ್ಟ್‌ಫೋನ್‌ಗಳ ಪರಿಚಯ ಇಲ್ಲಿದೆ.

ಸಧ್ಯ ಭಾರತದಲ್ಲಿ ಅತಿ ಹೆಚ್ಚು ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿಿರುವ ಸಂಸ್ಥೆೆ ಶವೋಮಿ, ತನ್ನ ಹೊಸ ಮೊಬೈಲ್ ಎಂಐ 8 ನ ಮಾರಾಟವನ್ನು ಇದೇ ತಿಂಗಳ 14 ರಿಂದ ಆರಂಭಿಸಲಿದೆ. ಗುಣಮಟ್ಟದ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ನೀಡುವುದರ ಮೂಲಕ ಭಾರತದಲ್ಲಿ ಅತಿ ಹೆಚ್ಚು ಪ್ರಾಾಮುಖ್ಯತೆ ಎಂಐ, ಈ ಮೊಬೈಲ್‌ನಲ್ಲಿ ಕೂಡ ಗ್ರಾಾಹಕನಿಗೆ ಸೇವೆ ನೀಡುವ ಹೊಸ ಹೊಸ ವೈಶಿಷ್ಟ್ಯತೆ ಗಳನ್ನು ಹೊತ್ತು ತರಲಿದೆ.

6.22 ಇಂಚಿನ ಪರದೆಯನ್ನು ಹೊಂದಿರುವ ಎಂಐ 8 ಸಂಪೂರ್ಣ ಪರದೆಯ ಮೊಬೈಲ್‌ಅಲ್ಲ. ಸದ್ಯ ಜನಪ್ರಿಿಯವಾಗಿರುವ ನೀರಿನ ಹನಿಯ ಪರದೆಯನ್ನು ಇದು ಹೊಂದಿದೆ. ಮೂರು ವರ್ಣಗಳಾದ ಕಪ್ಪುು, ಸಫಾಯರ್ ನೀಲಿ ಮತ್ತು ರುಬಿ ಕೆಂಪು ವರ್ಣದಲ್ಲಿ ಲಭ್ಯವಿರುವ ಮೊಬೈಲ್‌ನ ಹಿಂಬದಿ ಬೆಳಕಿನಲ್ಲಿ ಸುಂದರವಾಗಿ ಹೊಳೆಯುತ್ತದೆ. ಆದರೆ ಕೈಯಲ್ಲಿ ಹಿಡಿದಾಗ ಜಾರದಂತೆ ಎಚ್ಚರವಹಿಸಿದೆ ಈ ಬೆಲೆಯ ಮೊಬೈಲ್‌ಗಳಿಗೆ ಹೋಲಿಸಿದರೆ, ಉತ್ತಮ ಎನಿಸುವಂತಹ ಕ್ವಾಾಲ್‌ಕೊಮ್ ಸ್ನಾಾಪ್‌ಡ್ರಾಾಗನ್ 439 ಪ್ರಾಾಸೆಸರ್‌ನ್ನು ಈ ಮೊಬೈಲ್ ಹೊಂದಿದೆ.

ಮೊಬೈಲ್‌ನ ಕೆಳ ಭಾಗದಲ್ಲಿ ಯೂಎಸ್ಬಿಿ ಸಿ ರೀತಿಯ ಚಾರ್ಜಿಂಗ್ ಅವಕಾಶವನ್ನು ನೀಡಿರುವ ಸಂಸ್ಥೆೆ, ಇನ್ನು ಮುಂದೆ ತನ್ನ ಎಲ್ಲ ಬೆಲೆಯ ಮೊಬೈಲ್‌ಗಳು ಸಿ ರೀತಿಯ ಚಾರ್ಜಿಂಗ್ ಅನ್ನೆೆ ಹೊಂದಿರಲಿದೆ ಎಂಬ ಸೂಚನೆಯನ್ನು ನೀಡಿದೆ. ಮೊಬೈಲ್‌ನ ಎಡ ಭಾಗದಲ್ಲಿ ಎರಡು ನಾನೋ ಸಿಮ್ ಮತ್ತು ಮೆಮರೀ ಕಾರ್ಡ್ ಹಾಕುವ ಸ್ಥಳವಕಾಶವಿದೆ. 512 ಮೆಮರೀ ಕಾರ್ಡ್ ಅನ್ನು ಈ ಮೊಬೈಲ್‌ನಲ್ಲಿ ಬಳಸಬಹುದಾಗಿದೆ. ಬೆರಳಚ್ಚು ಮತ್ತು ಫೇಸ್ ಐಡಿ ಎರಡರ ಮೂಲಕವು ಮೊಬೈಲ್‌ನ್ನು ತೆರೆಯುವ ಅವಕಾಶ ನೀಡಿರುವ ಸಂಸ್ಥೆೆ ಎರಡು ಉತ್ತಮ ಗುಣಮಟ್ಟದ್ದಾಗಿರುವಂತೆ ಎಚ್ಚರಿಕೆ ವಹಿಸಿದೆ. ಕೆಲವೊಮ್ಮೆೆ ಬೆರಳಚ್ಚು ಕಂಡು ಹಿಡಿಯಲು ಸೆನ್ಸರ್ ಸ್ವಲ್ಪ ಜಾಸ್ತಿಿ ಸಮಯ ತೆಗೆದುಕೊಳ್ಳುತ್ತವೆ ಎಂದೆನಿಸದರೂ, ತಾಳ್ಮೆೆ ಕಳೆಯುವಷ್ಟು ಧೀರ್ಘವಾಗಿಲ್ಲ.

ಈ ಮೊಬೈಲ್‌ನ ಅತಿ ಮುಖ್ಯ ಅಂಶವೆಂದರೆ ಅದು ಇದರ ಬ್ಯಾಾಟರಿ. 5000 ಎಂಎಚ್ ಬ್ಯಾಾಟರಿಯನ್ನು ಹೊಂದಿರುವ ಎಂಐ 8, ಬಳಸಿದರೂ ಒಂದು ದಿನದ ವರೆಗೆ ಸುಲಭವಾಗಿ ಬಳಸಬಹುದು. ಹೆಚ್ಚು ಸ್ಪಷ್ಟತೆ ಇರುವ ವೀಡಿಯೋ ಗಳನ್ನು ನೋಡುವಾಗಾಗಲಿ ಅಥವಾ ಪಬ್‌ಜಿ ಮತ್ತಿಿತರ ಆಟಗಳನ್ನು ಆಡುವಾಗಾಗಲಿ ಮೊಬೈಲ್ ಬಿಸಿ ಯಾಗುವುದಿಲ್ಲ ಎನ್ನುವುದು ಈ ಮೊಬೈಲ್ ನ ಇನ್ನೊೊಂದು ವಿಶೇಷತೆ. 4 ಜಿಬಿ ರಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿರುವ ಮೊಬೈಲ್ ನಮ್ಮ ಸಾಮಾನ್ಯ ಅಗತ್ಯಗಳಿಗೆ ಸೂಕ್ತವೆನ್ನಿಿಸುತ್ತದೆ. ಅನ್ದ್ರೋಯಿಡ್ 9 ಪೈ ಆಪರೇಟಿಂಗ್ ವ್ಯವಸ್ಥೆೆಯನ್ನು ಅನ್ನು ಹೊಂದಿರುವ ಮೊಬೈಲ್ ಅನ್ದ್ರೋಯಿಡ್ ಗೆ ತೇರ್ಗಡೆ ಪಡೆಯುವ ಎಲ್ಲ ಸಾಧ್ಯತೆಗಳಿವೆ.

ಇಲ್ಲಿ ಮೊಬೈಲ್‌ನ ಬ್ಯಾಾಟರಿಯ ಬಗ್ಗೆೆ ಹೆಚ್ಚಿಿನ ಜನರಲ್ಲಿರುವ ಒಂದು ತಪ್ಪುು ಭಾವನೆಗೆ ಸ್ಪಷ್ಟತೆ ನೀಡಬೇಕು. ಮೊಬೈಲ್ ಬ್ಯಾಾಟರಿಯ ಎಂಎಚ್ ಹೆಚ್ಚಾಾದ ತಕ್ಷಣ ಬ್ಯಾಾಟರಿಯ ಬಳಿಕೆ ಧೀರ್ಘವಾಗಲೇ ಬೇಕೆಂದಿಲ್ಲ. ಮೊಬೈಲ್‌ನ ಬ್ಯಾಾಟರಿಯನ್ನು ಹೇಗೆ ಬಳಸಬೇಕು ಎನ್ನುವ ತಂತ್ರಾಾಂಶದ ಮೇಲೂ ಅದು ಬಹು ಪಾಲು ಅವಲಂಭಿಸಿರುತ್ತದೆ. ಹಾಗಾಗಿ 3000 ಎಂಎಚ್ ನ ಬ್ಯಾಾಟರಿ ಹೊಂದಿರುವ ಕೆಲವು ಮೊಬೈಲ್‌ಗಳು ಕೂಡ 4000 ಅಥವಾ 5000 ಎಂಎಚ್ ಹೊಂದಿದ ಮೊಬೈಲ್ ಗಿಂತ ಧೀರ್ಘ ಬಾಳಿಕೆ ಬರಬಹುದು.

ಇನ್ನೂ ಕ್ಯಾಾಮೆರಾ ವಿಚಾರಕ್ಕೆೆ ಬರುವುದಾದರೆ ಹಿಂಬದಿಯಲ್ಲಿ ಎರಡು ಕ್ಯಾಾಮೆರಾ ಹೊಂದಿರುವ ಮೊಬೈಲ್‌ನ ಪ್ರಾಾಥಮಿಕ ಕ್ಯಾಾಮೆರಾ 12 ಮೆಗಾ ಪಿಕ್ಸೆೆಲ್‌ನದ್ದಾಗಿದ್ದಾರೆ ಎರಡೆನೆಯ ಕ್ಯಾಾಮೆರಾ 2 ಮೆಗಾ ಪಿಕ್ಸೆೆಲ್ ನ ಜೂಮ್ ಲೆನ್‌ಸ್‌ ಆಗಿದೆ. ಎರಡು ಕ್ಯಾಾಮೆರಗಳು ಮತ್ತು ಬೆರಳಚ್ಚು ಕಂಡು ಹಿಡಿಯುವ ಸೆನ್ಸರ್‌ಗಳನ್ನು ಮೊಬೈಲ್‌ನ ಹಿಂಬಾಗದಲ್ಲಿ ಉದ್ದ ರೇಖೆಯಲ್ಲಿ ಜೋಡಿಸಲಾಗಿದೆ. ಮುಂಬದಿಯಯಲ್ಲಿ ಕೇವಲ ಒಂದು ಕ್ಯಾಾಮೆರಾವಿದ್ದು ಅದು 8 ಮೆಗಾ ಪಿಕ್ಸೆೆಲ್ ಕ್ಯಾಾಮೆರಾದ ಕಾರ್ಯಕ್ಷಮತೆಯ ವಿಚಾರಕ್ಕೆೆ ಬರುವುದಾದರೆ, ಬೆಳಕು ಉತ್ತಮವಾಗಿರುವ ಸ್ಥಳಗಳಲ್ಲಿ ತೆಗೆಯುವ ಚಿತ್ರಗಳು ಅತ್ಯಂತ ಸೊಗಸಾಗಿ ಮೂಡಿ ಬಂದರೆ ಬೆಳಕು ಕಡಿಮೆಯಿರುವ ಮತ್ತು ರಾತ್ರಿಿ ತೆಗೆಯುವ ಚಿತ್ರಗಳು ಅಷ್ಟೊೊಂದು ಸ್ಪಷ್ಟತೆ ಇಲ್ಲದಿರುವುದು ಗಮನಕ್ಕೆೆ ಬರುತ್ತದೆ. ಇನ್ನೂ ಹಿಂಬದಿಯ ಕ್ಯಾಾಮೆರಾ ಕೂಡ ಕೇವಲ 12 ಮೆಗಾ ಪಿಕ್ಸೆೆಲ್ ನದ್ದಾಗಿರುವುದರಿಂದ ಸ್ವಲ್ಪ ದೂರದ ಪ್ರದೇಶವನ್ನು ಜೂಮ್ ಮಾಡಿ ತೆಗೆಯಲು ಹೋದಾಗ ಚಿತ್ರದ ಸ್ಪಷ್ಟತೆ ಸ್ವಲ್ಪ ಕಡಿಮೆಯಾಗಬಹುದು.

ಕೊನೆಯದಾಗಿ ಬೆಲೆಯ ವಿಚಾರಕ್ಕೆೆ ಬರುವುದಾದರೆ ಈ ನ ಆರಂಭಿಕ ಬೆಲೆ 7,999 ರೂಪಾಯಿಗಳಾಗಿದ್ದು ನಿಮ್ಮ ರ್ಯಾಾಮ್ ಮತ್ತು ಆಂತರಿಕ ಸಂಗ್ರಹಣೆಗನುಗುಣವಾಗಿ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಬಜೆಟ್ ಬೆಲೆಯ ಸ್ಮಾಾರ್ಟ್‌ಫೋನ್ ನಲ್ಲಿ ಹೆಚ್ಚಿಿನ ಆಯ್ಕೆೆಗಳಿರಬೇಕು ಎಂದು ನೀವು ಬಯಸುವರಾದರೆ ಈ ಮೊಬೈಲ್ ಅನ್ನು ಖಂಡಿತ ಖರಿದಿಸಬಹುದು.

ವಿವೋ ವಿ 17 ಪ್ರೊ


ಕಳೆದ ತಿಂಗಳು ಬಿಡುಗಡೆಯಾದ ಈ ಮೊಬೈಲ್ ಭಾರತದ ಮಟ್ಟಿಿಗೆ ಮಧ್ಯಮ ದುಬಾರಿ ಬೆಲೆಯ ಮೊಬೈಲ್‌ಗಳ ಶ್ರೇಣಿಯಲ್ಲಿ ನಿಲ್ಲುತ್ತದೆ. ಈ ಮೊಬೈಲ್ ನ ಸಧ್ಯದ ಬೆಲೆ ಸುಮಾರು ರೂಪಾಯಿ. ಬಿಡುಗಡೆ ಯಾದ ಸಮಯಕ್ಕೆೆ ಹೊಲಿಸಿದರೆ 2-3 ಸಾವಿರ ರೂಪಾಯಿಯಷ್ಟು ಬೆಲೆ ಕಡಿಮೆಯಾಗಿದೆ. ಈ ಮೊಬೈಲ್ ಒನ್‌ಪ್ಲಸ್ 7 ಮತ್ತು ಒಪ್ರೋೋ ರೆನೊ 2 ಜಡ್ ಮೊಬೈಲ್ ನೋಡನೆ ನೇರ ಸ್ಪರ್ಧೆಗೆ ಇಳಿಯಲಿದೆ.

6.44 ಇಂಚಿನ ಸಂಪೂರ್ಣ ಸ್ಪಷ್ಟ ರೂಪತೆಯ ಪರದೆಯನ್ನು ಹೊಂದಿರುವ ಈ ಮೊಬೈಲ್ ಗೊರಿಲ್ಲ ಗ್ಲಾಾಸ್ 6 ಅನ್ನು ತನ್ನ ಪರದೆಯಲ್ಲಿ ಬಳಸಿದೆ. ಐಫೋನ್ 10, 11 ರ ರೀತಿಯಲ್ಲಿ ಸಂಪೂರ್ಣ ಪರದೆಯ ಫೋನ್ ಎಂದು ಪರದೆಯ ಸುತ್ತ ಇರುವ ಕಪ್ಪುು ಪಟ್ಟಿಿಯನ್ನು ಹೊರತುಪಡಿಸಿದರೆ ಇದು ಸಂಪೂರ್ಣ ಪರದೆಯ ಮೊಬೈಲ್. ಪರದೆಯಲ್ಲೇ ಬೆರಳಚ್ಚನ್ನು ಕಂಡುಹಿಡಿಯುವ ತಂತ್ರಜ್ಞಾಾನವನ್ನು ಹೊಂದಿರುವ ಮೊಬೈಲ್‌ನಲ್ಲಿ ಫೇಸ್ ಐಡಿ ಮೂಲಕವೂ ಫೋನ್‌ನ್ನು ಅನ್‌ಲಾಕ್ ಮಾಡಬಹುದು. ಆದರೂ ಮುಖವನ್ನು ಕಂಡು ಹಿಡಿಯುವ ತಂತ್ರಜ್ಞಾಾನ ಅಷ್ಟೊೊಂದು ಕ್ಷಮತೆಯಲ್ಲಿ ಕಾರ್ಯ ನಿರ್ವಹಿಸದ ಕಾರಣ ಅದನ್ನು ಕೊನೆಯ ಆಯ್ಕೆೆಯಾಗಿ ಬಳಸಬಹುದಾಗಿದೆ. 8 ಜಿಬಿ ರ್ಯಾಾಮ್ ಮತ್ತು 128 ಜಿಬಿಯ ಆಂತರಿಕ ಸಂಗ್ರಹಣೆಯ ಒಂದೇ ಆವೃತ್ತಿಿಯಲ್ಲಿ ಲಭ್ಯ ವಿರುವ ಈ ನ ಸಂಗ್ರಹಣೆಯನ್ನು 512 ಜಿಬಿ ಯವರೆಗೂ ಮೆಮರೀ ಕಾರ್ಡ್ ಮುಖಾಂತರ ವಿಸ್ತರಿಸಬಹುದಾಗಿದೆ. ಒನೆಪ್ಲೂೂಸ್ ರೀತಿಯಲ್ಲಿ ಮಾರುಕಟ್ಟೆೆಯ ಹೊಸ ಸ್ನಾಾಪ್ ಡ್ರಾಾಗನ್ ಪ್ರೊೊಸೆಸರ್‌ಅನ್ನುಬಳಸದೆ, ವಿವೋ ವಿ 15 ಪ್ರೊೊ ನಲ್ಲಿ ಬಳಸಿದ ಸ್ನಾಾಪ್ ಡ್ರಾಾಗನ್ 675 ಎಸ್‌‌ಒಸಿ ಅನ್ನೆೆ ಇದರಲ್ಲೂ ಬಳಸಲಾಗಿದೆ.

                        ನಾಲ್ಕು ಕ್ಯಾಮೆರಾ ಮೊಬೈಲ್

ಈ ಮೊಬೈಲ್ ನ ಮುಖ್ಯ ವಿಶೇಷತೆ ಎಂದರೆ ಕ್ಯಾಾಮೆರಾ. ಹಿಂಬದಿಯಲ್ಲಿ ನಾಲ್ಕು ಕ್ಯಾಾಮೆರಾಗಳನ್ನು ಹೊಂದಿರುವ ಈ ಮೊಬೈಲ್ ಮುಂಭಾಗದಲ್ಲಿ 2 ಕ್ಯಾಾಮೆರಗಳನ್ನು ಹೊಂದಿದೆ. ನಾಲ್ಕು ಕ್ಯಾಾಮೆರಗಳ ಪೈಕಿ ಪ್ರಾಾಥಮಿಕ ಕ್ಯಾಾಮೆರಾ 48 ಮೆಗಾ ಪಿಕ್ಸೆೆಲ್ ನದ್ದಾಗಿದ್ದಾರೆ, ಎರಡನೆಯ ಮತ್ತು ಮೂರನೆಯ ಕ್ಯಾಾಮೆರಾ 13 ಮೆಗಾ ಪಿಕ್ಸೆೆಲ್ ಮತ್ತು 8 ಮೆಗಾ ಪಿಕ್ಸೆೆಲ್ ನದ್ದಾಗಿದೆ. ಇನ್ನೂ ಕೊನೆಯ ಕ್ಯಾಾಮೆರಾ 2 ಮೆಗಾ ಪಿಕ್ಸೆೆಲ್ ನ ಜೂಮ್ ಲೆನ್‌ಸ್‌ ಆಗಿರಲಿದೆ. ಹಿಂಬದಿಯ ನಾಲ್ಕು ಕ್ಯಾಾಮೆರಗಳು ಉದ್ದ ರೇಖೆಯಲ್ಲಿ ಜೋಡಿಸಲಾಗಿದೆ. ಮುಂಬದಿಯ ಎರಡು ಕ್ಯಾಾಮೆರಗಳ ಪೈಕಿ ಮೊದಲೇನೆಯದು 32 ಮೆಗಾ ಪಿಕ್ಸೆೆಲ್‌ನದ್ದಾಗಿದ್ದರೆ ಎರಡೆನೆಯ ಕ್ಯಾಾಮೆರಾ 12 ಮೆಗಾ ನದ್ದಾಗಿದೆ. ಈ ಎರಡು ಕ್ಯಾಾಮೆರಗಳು ಮೊಬೈಲ್‌ನ ಒಳ ಭಾಗದಲ್ಲಿ ಅಡಗಿದ್ದು, ಬೇಕಾದಾಗ ಮಾತ್ರ ಹೊರಬರುವ ವ್ಯವಸ್ಥೆೆಯನ್ನು ಹೊಂದಿದೆ.

ವಿವೋ 15 ಪ್ರೊೊ ನಲ್ಲಿ ಈ ರೀತಿಯ ಒಂದು ಕ್ಯಾಾಮೆರವನ್ನು ಬಿಟ್ಟು ಯಶಸ್ಸು ಕಂಡ ಸಂಸ್ಥೆೆ ಅದರದೇ ಮುಂದಿನ ಆವ್ರತ್ತಿಿ ಎನ್ನುವಂತೆ ಎರಡು ಕ್ಯಾಾಮೆರವನ್ನು ಮುಂಬದಿಯಲ್ಲಿ ಇಟ್ಟಿಿದೆ. ಅನ್ದ್ರೋಯಿಡ್ 9 ಪೈ ಆಪರೇಟಿಂಗ್ ವ್ಯವಸ್ಥೆೆಯನ್ನು ಅನ್ನು ಹೊಂದಿರುವ ಮೊಬೈಲ್ 4100 ಎಂಎಚ್‌ನ ಬ್ಯಾಾಟರಿಯನ್ನು ಹೊಂದಿದೆ. ಸಾಮಾನ್ಯ ಬಳಕೆಯಲ್ಲಿ ಒಂದುವರೆ ದಿನ ಬಳಸಬಹುದಾದ ಬ್ಯಾಾಟರಿ ಅತ್ಯಧಿಕ ಬಳಕೆಯಲ್ಲಿಯು ಆರಾಮವಾಗಿ ಒಂದು ದಿನ ಬಳಸಬಹುದಾಗಿದೆ. ಹೆಚ್ಚು ಬೆಲೆಯ ಉತ್ತಮ ಗುಣಮಟ್ಟದ ಕ್ಯಾಾಮೆರಗಳನ್ನು ಹೊಂದಿರುವ ಹೊಸ ಮೊಬೈಲ್‌ಗಾಗಿ ನೀವು ಕಾಯುತ್ತಿಿದ್ದರೆ ಈ ಮೊಬೈಲ್ ಖಂಡಿತ ನಿಮ್ಮ ಆಯ್ಕೆೆ ಯಾಗಬಹುದು.