Eid Mubarak: ರಂಜಾನ್ ಹಬ್ಬಕ್ಕೆ ಭೇಟಿ ನೀಡಲು ಸುಂದರ ಮಸೀದಿಗಳಿವು! ಎಲ್ಲೆಲ್ಲಿವೆ ಗೊತ್ತಾ?
ವಿಶ್ಚದ ಪ್ರಮುಖ ರಾಷ್ಟ್ರಗಳಲ್ಲಿ ರಂಜಾನ್(Eid Mubarak) ಆಚರಣೆ ಇದ್ದು ಬಹಳ ಶೃದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಒಂದು ತಿಂಗಳ ಕಾಲ ಕಟ್ಟುನಿಟ್ಟಿನ ಉಪವಾಸದ ಜೊತೆಗೆ ಕುರಾನ್ ಪಠಣ ಮಾಡುವುದು,ದಾನ ಧರ್ಮ ಮಾಡುವುದು ಜೊತೆಗೆ ಮುಸ್ಲಿಂ ಧಾರ್ಮಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರಗಳಿಗೂ ಕೂಡ ಭೇಟಿ ನೀಡಿ ಅಲ್ಲಾಹುವಿನ ಸ್ಮರಣೆ ಮಾಡುತ್ತಾರೆ. ಭಾರತದಲ್ಲಿ ಕೂಡ ಇಸ್ಲಾಮಿಕ್ ಹಿನ್ನೆಲೆ ಇರುವ ಅನೇಕ ಕ್ಷೇತ್ರಗಳಿದ್ದು ರಂಜಾನ್ ಹಬ್ಬದ ದಿನ ಈ ಸುಂದರ ಮಸೀದಿಗಳಿಗೆ ನೀವು ಭೇಟಿ ನೀಡಬಹುದು.


ನವದೆಹಲಿ: ಜಗತ್ತಿನಾದ್ಯಂತ ಇರುವ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್‌ಗೆ (Eid Mubarak) ವಿಶೇಷ ಮಹತ್ವವಿದೆ. ಭಾರತ ಮಾತ್ರವಲ್ಲದೇ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೈಟ್ಸ್, ಬ್ರಿಟನ್ , ಅಮೇರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಸ್ಟ್ರೆಲಿಯಾ ಸೇರಿದಂತೆ ವಿಶ್ಚದ ಪ್ರಮುಖ ರಾಷ್ಟ್ರಗಳಲ್ಲಿ ರಂಜಾನ್ ಆಚರಣೆ ಇದ್ದು ಬಹಳ ಶೃದ್ಧಾ ಭಕ್ತಿ ಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಒಂದು ತಿಂಗಳ ಕಾಲ ಕಟ್ಟು ನಿಟ್ಟಿನ ಉಪವಾಸದ ಜೊತೆಗೆ ಕುರಾನ್ ಪಠಣ ಮಾಡುವುದು,ದಾನ ಧರ್ಮ ಮಾಡುವುದು ಜೊತೆಗೆ ಮುಸ್ಲಿ ಧಾರ್ಮಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರಗಳಿಗೂ ಕೂಡ ಭೇಟಿ ನೀಡಿ ಅಲ್ಲಾಹುವಿನ ಸ್ಮರಣೆ ಮಾಡುತ್ತಾರೆ. ಭಾರತದಲ್ಲಿ ಕೂಡ ಇಸ್ಲಾಮಿಕ್ ಹಿನ್ನೆಲೆ ಇರುವ ಅನೇಕ ಕ್ಷೇತ್ರಗಳಿದ್ದು ರಂಜಾನ್ ಹಬ್ಬದ ದಿನ ಈ ಸುಂದರ ಮಸೀದಿಗಳಿಗೆ ನೀವು ಭೇಟಿ ನೀಡಬಹುದು.
ಪಠಾರ್ ಮಸೀದಿ:

ಪಠಾರ್ ಮಸೀದಿಯು ಶ್ರೀನಗರದ ಜೀಲಂ ನದಿಯ ದಡದಲ್ಲಿದ್ದು ಇದನ್ನು ನಯೇವ್ ಮಸೀದಿ ಎಂದು ಸಹ ಕರೆಯುತ್ತಾರೆ. ಧಾರ್ಮಿಕ ನಂಬಿಕೆಯ ಜೊತೆಗೆ ಐತಿಹಾಸಿಕ ಹಿನ್ನೆಲೆಯನ್ನು ಈ ಮಸೀದಿ ಹೊಂದಿದೆ. ಮೊಘಲರ ಕಾಲದ ಈ ಒಂದು ಮಸೀದಿಯನ್ನು 1623ರಲ್ಲಿ ನೂರ್ ಜಹಾನ್ ಕಾಲ ದಲ್ಲಿ ಕಟ್ಟಿಸಲಾಗಿದೆ. ಇಲ್ಲಿಗೆ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಲೇ ಇರು ತ್ತಿದ್ದು ರಂಜಾನ್ ಕಾಲದಲ್ಲಿ ಸಾಮಾನ್ಯ ದಿನಕ್ಕಿಂತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.ಹಾಗಾಗಿ ರಂಜಾನ್ ಸಂದರ್ಭದಲ್ಲಿ ಭೇಟಿ ನೀಡಲು ಉತ್ತಮ ಮಸೀದಿ ಇದಾಗಿದೆ.
ತಾಜ್ ಉಲ್ ಮಸೀದಿ:

ಸುನ್ನಿ ಇಸ್ಲಾಂ ಅಂಗಸಂಸ್ಥೆಯ ಅಧೀನದಲ್ಲಿ ಭೂಪಾಲ್ ನಲ್ಲಿ ಈ ಮಸೀದಿ ಯನ್ನು1887ರಂದು ಇಂಡೋ ಇಸ್ಲಾಮಿಕ್ ಮೊಘಲ್ ಶೈಲಿಯಲ್ಲಿ ಕಟ್ಟ ಲಾಗಿದೆ. ಮೊಘಲ್ ವಾಸ್ತುಶಿಲ್ಪದಿಂದ ಕಂಗೊಳಿಸುವ ತಾಜ್ ಉಲ್ ಮಸೀದಿಯನ್ನು ಏಷ್ಯಾದ ಅತೀ ದೊಡ್ಡ ಮಸೀದಿಗಳಲ್ಲಿ ಒಂದು ಎಂದು ಗುರುತಿಸಲಾಗುತ್ತಿದ್ದು ರಂಜಾನ್ ಸಂದರ್ಭ ಈ ಕ್ಷೇತ್ರಕ್ಕೆ ನೀವು ಭೇಟಿ ನೀಡಬಹುದು.
ಅಧಾಯಿ ದಿನ್ ಕಾ ಝೋನ್ ಪ್ರಾ:
ಭಾರತದ ರಾಜಸ್ಥಾನದ ಅಜ್ಮೀರ್ ನಗರದಲ್ಲಿ ನೆಲೆಗೊಂಡ ಅಧಾಯಿ ದಿನ್ ಕಾ ಝೋನ್ ಮಸೀದಿಯು ದೇಶದ ಅತ್ಯಂತ ಹಳೆಯ ಮಸೀದಿಯಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. 1199ರಲ್ಲಿ ವೃತ್ತಾಕಾರದ ಮತ್ತು ಕೊಳ ಲಿನ ವಿಶಿಷ್ಟ ಆಕಾರದಿಂದ ನಿರ್ಮಾಣವಾದ ಈ ಮಸೀದಿಯು ವಾಸ್ತು ಶಿಲ್ಪ ದಿಂದ ಅನೇಕರನ್ನು ತನ್ನತ್ತ ಸೆಳೆಯುತ್ತಿದೆ. ಭಾರತೀಯ ಇಸ್ಲಾಂಮಿಕ್ ಶೈಲಿಯಲ್ಲಿ 16 ಕಂಬಗಳು ಅತ್ಯಂತ ವಿಶಿಷ್ಟ ಅಲಂಕಾರದಿಂದಿದ್ದು ಇದನ್ನು ಕಾಣುವುದೆ ಕಣ್ಣಿಗೆ ಹಬ್ಬವಿದ್ದಂತೆ ಹಾಗಾಗಿ ರಂಜಾನ್ ಹೊಸ ಸ್ಥಳಕ್ಕೆ ಭೇಟಿ ನೀಡಬಯಸುವವರಿಗೆ ಈ ಸ್ಥಳ ಕೂಡ ಅತ್ಯುತ್ತಮ ಆಯ್ಕೆ ಆಗಲಿದೆ.
ಜಾಮಾ ಮಸೀದಿ:

ಭಾರತದ ರಾಜಧಾನಿ ದೆಹಲಿಯಲ್ಲಿರುವ ಅತೀ ದೊಡ್ಡ ಮತ್ತು ಅತ್ಯುತ್ತಮವಾಗಿ ಮೂಡಿ ಬಂದ ಮಸೀದಿಯಲ್ಲಿ ಒಂದಾದ ಜಾಮಾ ಮಸೀದಿಯು ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಧಾರ್ಮಿಕ ನಂಬಿಕೆ ಹೊಂದಿದೆ. ಪ್ರತೀ ಶುಕ್ರವಾರ ಇಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದ್ದು 25,000ಕ್ಕೂ ಅಧಿಕ ಜನ ಈ ಪ್ರಾರ್ಥನೆಗೆ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಕೆಂಪು ಮರಳು ಶಿಲೆ ಯಿಂದ ಹಾಗೂ ಅಮೃತ ಶಿಲೆಯಿಂದ ನಿರ್ಮಾಣವಾದ ಈ ಮಸೀದಿಯು ಅನೇಕ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ.
ಹಜರತ್ ನಿಜಾಮುದ್ದೀನ್ ದರ್ಗಾ:
ಹಜರತ್ ನಿಜಾಮುದ್ದೀನ್ ದರ್ಗಾವು ಭಾರತದ ಅತ್ಯಂತ ಪವಿತ್ರ ಇಸ್ಲಾ ಮಿಕ್ ತಾಣ ಎಂಬ ಪ್ರತೀತಿ ಪಡೆದಿದೆ. 1325ರಲ್ಲಿ ಮೊಹಮ್ಮದ್ ಬಿನ್ ತುಘಲಕ್ ಕಾಲದಲ್ಲಿ ಈ ದರ್ಗಾ ನಿರ್ಮಾಣವಾಗಿದ್ದು ಬಿಳಿ ದೊಡ್ಡ ಗುಮ್ಮಟ ಹೊಂದಿದ್ದು ವಿಶಿಷ್ಟ ನೈಪುಣ್ಯತೆಯ ವಾಸ್ತುಶಿಲ್ಪಗಳು ಪ್ರವಾಸಿಗರ ಮನಸೋರೆ ಗೊಳಿಸುತ್ತಿದೆ.
ಮೋತಿ ಮಸೀದಿ:
ಐತಿಹಾಸಿಕ ಹಿನ್ನೆಲೆಹೊಂದಿದ್ದ ಮೋತಿ ಮಸೀದಿಯನ್ನು ಮುತ್ತಿನ ಮಸೀದಿ ಎಂದು ಸಹ ಕರೆಯುತ್ತಾರೆ. 17ನೇ ಶತಮಾನದಲ್ಲಿ ಆಗ್ರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ಕಾಲದಲ್ಲಿ ಈ ಮಸೀದಿ ನಿರ್ಮಾಣವಾಗಿದ್ದು ಬಿಳಿ ಅಮೃತ ಶಿಲೆಯಿಂದ ಮಾಡಲ್ಪಟ್ಟ ಈ ಮಸೀದಿ ನೋಡಲು ಅತ್ಯದ್ಭುತವಾಗಿದೆ.
ಚಾರ್ ಮಿನಾರ್:

ಹೆಸರೆ ಸೂಚಿಸುವಂತೆ ಸುತ್ತಲೂ ನಾಲ್ಕು ಕಂಬಗಳಿಂದ ಜಗತ್ ಪ್ರಸಿದ್ಧ ವಾದ ಚಾರ್ ಮಿನಾರ್ 1591ರಲ್ಲಿ ಹೈದ್ರಾಬಾದ್ ನಲ್ಲಿ ನಿರ್ಮಿಸಲಾಗಿದ್ದು ಕುತುಬ್ ಶಾಹಿ ರಾಜ ವಂಶದ ಕತೆಗಳ ಸಾರ ಹೊತ್ತ ಈ ಕಂಬಗಳು ಕಲಾವೈಶಿಷ್ಟ್ಯ ಎತ್ತಿ ಹಿಡಿಯುತ್ತಿದೆ ಎಂದರೂ ತಪ್ಪಾಗದು.
ಇದನ್ನು ಓದಿ: Ramadan Eid 2025: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭ; ಏನಿದರ ಇತಿಹಾಸ? ಆಚರಣೆ ಹೇಗೆ?
ಇತರೆ ಮಸೀದಿಗಳು:
ಮುಂಬೈನ ವರ್ಲಿಯಾ ಕರಾವಳಿಯ ದ್ವೀಪದ ಪ್ರದೇಶದಲ್ಲಿ ಹಾಜಿ ಆಲಿ ದರ್ಗಾ ನಿರ್ಮಾಣವಾಗಿದ್ದು ನೋಡಲು ಬಹಳ ಆಕರ್ಷಕವಾಗಿದೆ. ಭಾರತದ ಏಕೈಕ ಗಾಜಿನ ಮಸೀದಿಯಾದ ಶಿಲ್ಲಾಂಗ್ ನ ಲಬನ್ ಪ್ರದೇಶದಲ್ಲಿ ನೆಲೆ ಗೊಂಡಿರುವ ಮದೀನ್ ಮಸೀದಿಯು ಮುಸ್ಲಿಂ ಪವಿತ್ರ ಕ್ಷೇತ್ರದಲ್ಲಿ ಒಂದು ಎನ್ನಬಹುದು. ಬೆಂಗಳೂರಿನಲ್ಲಿ ಬಿಲಾಲ್ ಮಸೀದಿ ಪ್ರಖ್ಯಾತಿ ಪಡೆದಿದ್ದು ಇದನ್ನು ರಾಜ್ಯದ ಪ್ರಸಿದ್ಧ ಮಸೀದಿಯಲ್ಲಿ ಒಂದು ಎಂದು ಹೇಳಲಾಗುತ್ತದೆ. ಹಾಗಾಗಿ ರಂಜಾನ್ ಕಾಲಕ್ಕೆ ಈ ಎಲ್ಲ ಸ್ಥಳಗಳು ನಿಮಗೆ ಅತ್ಯದ್ಭುತ ಅನುಭವ ನೀಡಲಿದೆ.