ಬೆಂಗಳೂರು : ಸಾಧುಗಳು ಹಾಗೂ ಸಂತರು ತಮ್ಮ ಇಡೀ ಜೀವನವನ್ನು ದೇವರ ಜಪದಲ್ಲೇ ಕಾಲ ಕಳೆಯುತ್ತಾರೆ. ಅವರಿಗೆ ಯಾವುದೇ ಭೌತಿಕ ಸುಖಗಳ ಬಗ್ಗೆ ಆಸಕ್ತಿ ಇರುವುದಿಲ್ಲ. ಸಾಮಾನ್ಯವಾಗಿ ನಾವು ನೋಡಿದ ಹಾಗೇ ಸಾಧುಗಳು ಮತ್ತು ಸಂತರು ಕೆಂಪು, ಹಳದಿ ಅಥವಾ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ನಾಗ ಸಾಧುಗಳು(Naga Sadhu) ಮಾತ್ರ ಯಾವುದೇ ಬಟ್ಟೆಯನ್ನು ಧರಿಸದೆ ನಗ್ನವಾಗಿ ಓಡಾಡುತ್ತಿರುತ್ತಾರೆ. ನಾಗ ಸಾಧುಗಳು ಎಂದರೆ ಯಾರು? ಅವರು ಯಾಕೆ ಬಟ್ಟೆ ಧರಿಸುವುದಿಲ್ಲ? ಎಂಬ ಬೆರಗು, ಸಾಕಷ್ಟು ಪ್ರಶ್ನೆಗಳು ಹೆಚ್ಚಿನವರ ಮನಸ್ಸಿನಲ್ಲಿ ಇರುತ್ತವೆ.ನಿಮ್ಮೆಲ್ಲರ ಕುತೂಹಲವನ್ನು ತಣಿಸಲು ಇಲ್ಲೊಂದಿಷ್ಟು ಮಾಹಿತಿಯ ಕಣಜವಿದೆ ನೋಡಿ.
ನಾಗಾ ಸನ್ಯಾಸಿಗಳು ಬಟ್ಟೆಗಳನ್ನು ಏಕೆ ಧರಿಸುವುದಿಲ್ಲ:
ನಾಗಾ ಸಾಧುಗಳು ಪ್ರಕೃತಿ ಮತ್ತು ನೈಸರ್ಗಿಕವಾಗಿ ಇರುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಒಬ್ಬ ವ್ಯಕ್ತಿಯು ನಗ್ನನಾಗಿ ಜನಿಸುತ್ತಾನೆ. ಅದು ಅವನ ನೈಸರ್ಗಿಕವಾದ ಸ್ಥಿತಿ ಎಂಬುದು ನಾಗಾ ಸಾಧುಗಳು ನಂಬಿಕೆ, ಅದಕ್ಕಾಗಿಯೇ ಅವರು ಬಟ್ಟೆಗಳನ್ನು ಧರಿಸುವುದಿಲ್ಲ. ಆದರೆ ಅವರು ಮೈಮೇಲೆ ಬೂದಿ, ವಿಭೂತಿಯನ್ನು ಹಚ್ಚಿಕೊಂಡು ಓಡಾಡುತ್ತಾರೆ.
ನಾಗಾ ಸಾಧುಗಳಿಗೆ ಚಳಿಯ ಅನುಭವವಾಗುವುದಿಲ್ಲವೇ?
ನಾಗ ಸಾಧುಗಳು ಬಟ್ಟೆ ಧರಿಸುವುದಿಲ್ಲ.ಇದರಿಂದ ಅವರಿಗೆ ಚಳಿಯಾಗುವುದಿಲ್ಲವೇ? ಎಂಬ ಅನುಮಾನ ಹಲವರಿಗಿದೆ. ನಾಗಾ ಸಾಧುಗಳಿಗೆ ಚಳಿ ಆಗುವುದಿಲ್ಲವಂತೆ. ಇದರ ಹಿಂದಿನ ರಹಸ್ಯವೆಂದರೆ ಯೋಗ. ನಾಗಾ ಸಾಧುಗಳು ಮೂರು ರೀತಿಯ ಯೋಗಗಳನ್ನು ಮಾಡುತ್ತಾರೆ, ಈ ಯೋಗವು ಅವರಿಗೆ ಚಳಿಯನ್ನು ಎದುರಿಸಲು, ಆಲೋಚನೆಗಳು ಮತ್ತು ಆಹಾರವನ್ನು ನಿಯಂತ್ರಿಸಲು ಸಹಾಯವಾಗುತ್ತದೆಯಂತೆ.
ನಾಗಾ ಸನ್ಯಾಸತ್ವದ ರಹಸ್ಯ
ನಾಗಾ ಸನ್ಯಾಸತ್ವ ಪಡೆಯಲು 12 ವರ್ಷಗಳು ಬೇಕಾಗುತ್ತದೆಯಂತೆ. ಇದರಲ್ಲಿ 6 ವರ್ಷಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಈ ಅವಧಿಯಲ್ಲಿ, ಅವರು ನಾಗಾ ಪಂತಕ್ಕೆ ಸೇರಲು ಬೇಕಾದ ಮಾಹಿತಿಯನ್ನು ಪಡೆಯುತ್ತಾರೆ ಮತ್ತು ಈ ಸಮಯದಲ್ಲಿ ಅವರು ಲಂಗೋಟಿಯನ್ನು ಬಿಟ್ಟು ಬೇರೆ ಏನನ್ನೂ ಧರಿಸುವುದಿಲ್ಲ. ಅದರ ನಂತರ ಕುಂಭಮೇಳದಲ್ಲಿ ಪ್ರತಿಜ್ಞೆ ಮಾಡಿದ ನಂತರ, ಅವರು ಲಂಗೋಟಿಯನ್ನು ತ್ಯಜಿಸಿ ಜೀವನದುದ್ದಕ್ಕೂ ನಗ್ನರಾಗಿ ತಿರುಗುತ್ತಾರೆ.
ಏನಿದು ಬಿಜ್ವಾನ್?
ನಾಗಾ ಸಾಧುವಾಗುವ ಪ್ರಕ್ರಿಯೆಯಲ್ಲಿ, ಮೊದಲನೆಯದಾಗಿ, ಅವರು ಬ್ರಹ್ಮಚರ್ಯದ ಶಿಕ್ಷಣವನ್ನು ಪಡೆಯಬೇಕು. ಇದರಲ್ಲಿ ಯಶಸ್ವಿಯಾದ ನಂತರ, ಅವರಿಗೆ ಮಹಾಪುರುಷ ದೀಕ್ಷೆಯನ್ನು ನೀಡಲಾಗುತ್ತದೆ ಮತ್ತು ನಂತರ ಯಜ್ಞೋಪವಿತ್ ಮಾಡಲಾಗುತ್ತದೆ. ಇದರ ನಂತರ, ಅವರು ತಮ್ಮ ಕುಟುಂಬಕ್ಕೆ ಪಿಂಡ ದಾನ ಮಾಡುವ ಕಾರ್ಯ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು ‘ಬಿಜ್ವಾನ್’ ಎಂದು ಕರೆಯಲಾಗುತ್ತದೆ. ಇದರ ನಂತರ ನಾಗಾ ಸಾಧುಗಳು ಲೌಕಿಕ ಕುಟುಂಬವನ್ನು ತ್ಯಾಗ ಮಾಡಿ , ಸಮುದಾಯವನ್ನು ತಮ್ಮ ಕುಟುಂಬವೆಂದು ಪರಿಗಣಿಸುತ್ತಾರೆ.
*ನಾಗಾ ಸಾಧುಗಳಿಗೆ ವಾಸವಿರಲು ಯಾವುದೇ ವಿಶೇಷ ಸ್ಥಳ ಅಥವಾ ಮನೆ ಇರುವುದಿಲ್ಲ. ಅವರು ತಾವು ನಿರ್ಮಿಸಿದ ಗುಡಿಸಲಿನಲ್ಲಿ ಜೀವನವನ್ನು ಕಳೆಯುತ್ತಾರೆ. ಹಾಗೇ ನೆಲದ ಮೇಲೆ ಮಲಗುತ್ತಾರೆ.
*ನಾಗಾ ಸಾಧುಗಳು ದಿನಕ್ಕೆ 7 ಮನೆಗಳಿಂದ ಭಿಕ್ಷೆ ಕೇಳಬಹುದು. ಮನೆಗಳಿಂದ ಪಡೆದ ಭಿಕ್ಷೆಯನ್ನು ಸೇವಿಸುತ್ತಾರೆ. ಇಲ್ಲದಿದ್ದರೆ ಅವರು ಹಸಿವಿನಿಂದ ಇರಬೇಕಾಗುತ್ತದೆ. ಅವರು ಇಡೀ ದಿನದಲ್ಲಿ ಒಮ್ಮೆ ಮಾತ್ರ ಆಹಾರವನ್ನು ಸೇವಿಸುತ್ತಾರೆ.
ನಾಗಾ ಸಾಧುಗಳು ಹಿಂದೂ ಸಾಧುಗಳಾಗಿದ್ದು, ಅವರು ಯುದ್ಧ ಕಲೆಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ವಿವಿಧ ಅಖಾಡಗಳಲ್ಲಿ ಅವರಿಗೆ ಸ್ಥಾನವಿದೆ. ಹೆಚ್ಚಿನ ನಾಗಾ ಸಾಧುಗಳು ಜುನಾ ಅಖಾಡದಲ್ಲಿದ್ದಾರೆ. ನಾಗಾಸಾಧುಗಳು ಅಖಾಡದಲ್ಲಿ ಉಳಿಯುವ ಸಂಪ್ರದಾಯವನ್ನು ಹುಟ್ಟುಹಾಕಿದ್ದು ಆದಿಗುರು ಶಂಕರಾಚಾರ್ಯರು.
ಇದನ್ನೂ ಓದಿ:ದೇವಿಯ ಮೇಲಿನ ಭಕ್ತಿಗೆ ರೇಜರ್ನಿಂದ ಕತ್ತು ಸೀಳಿಕೊಂಡ!
ಸ್ತ್ರೀ ನಾಗಾ ಸಾಧು
ಪುರುಷರಂತೆ, ಸ್ತ್ರೀ ನಾಗಾ ಸಾಧುಗಳು ಇರುತ್ತಾರೆ. ಆದರೆ ಅವರು ನಗ್ನರಾಗಿರುವುದಿಲ್ಲ, ಬದಲಿಗೆ ಅವರು ಬಟ್ಟೆಗಳನ್ನು ಧರಿಸುತ್ತಾರೆ. ಸ್ತ್ರೀ ನಾಗಾ ಸಾಧುಗಳು ತಮ್ಮ ದೇಹಕ್ಕೆ ಬೂದಿಯನ್ನು ಹಚ್ಚುತ್ತಾರೆ ಮತ್ತು ತಲೆಯ ಮೇಲೆ ಜಡೆ ಕಟ್ಟಿಕೊಂಡಿರುತ್ತಾರೆ. ಅವರು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಕೇಸರಿ ಬಣ್ಣದ ಹೊಲಿಗೆಯಿಲ್ಲದ ಬಟ್ಟೆಗಳನ್ನು ಧರಿಸುತ್ತಾರೆ. ಇದರಿಂದಾಗಿ ಅವರು ಪುರುಷ ನಾಗಾ ಸಾಧುಗಳಿಗಿಂತ ಭಿನ್ನರಾಗಿರುತ್ತಾರೆ.