Mohammed Shami: ಇಂಗ್ಲೆಂಡ್ ಟೆಸ್ಟ್‌ಗೆ ವೇಗಿ ಶಮಿ ಆಯ್ಕೆ ಅನುಮಾನ
ಟೆಸ್ಟ್‌ನಂತಹ ದೀರ್ಘ ಸ್ವರೂಪದ ಆಟದಲ್ಲಿ ಆಟಗಾರ ಸಂಪೂರ್ಣ ಫಿಟ್ ಇದ್ದರೆ ಮಾತ್ರ ಆಡಲು ಸಾಧ್ಯ. ಹೀಗಾಗಿ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು 22 ಪ್ರಥಮ ದರ್ಜೆ ಪಂದ್ಯಗಳಿಂದ 74 ವಿಕೆಟ್‌ಗಳನ್ನು ಪಡೆದಿರುವ ಹರಿಯಾಣದ ಬಲಗೈ ಸೀಮರ್ ಅನ್ಶುಲ್ ಕಾಂಬೋಜ್ ಅವರನ್ನು ಶಮಿ ಬದಲಿಗೆ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


ಮುಂಬಯಿ: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ(Mohammed Shami) ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಐಪಿಎಲ್‌ನಲ್ಲೂ ಕೂಡ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ ಅವರ ಫಿಟ್‌ನೆಸ್ ಬಗ್ಗೆ ಕೆಲವು ಸಂಶಯಗಳಿವೆ. ಹಾಗಾಗಿ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಗೆ ಇಂದು ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಶಮಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ನಿರೀಕ್ಷಿತ ಬೌಲಿಂಗ್ ದಾಳಿ ನಡೆಸಲು ವಿಫಲರಾಗಿದ್ದರು. ಆಡಿದ ಎಲ್ಲ ಪಂದ್ಯಗಳಲ್ಲಿಯೂ ದುಬಾರಿಯಾಗಿ ಕಂಡು ಬಂದಿದ್ದರು. ಹೀಗಾಗಿ ಅವರನ್ನು ಕೆಲ ಪಂದ್ಯಗಳಿಂದ ಕೈಬಿಡಲಾಗಿತ್ತು.
ಟೆಸ್ಟ್‌ನಂತಹ ದೀರ್ಘ ಸ್ವರೂಪದ ಆಟದಲ್ಲಿ ಆಟಗಾರ ಸಂಪೂರ್ಣ ಫಿಟ್ ಇದ್ದರೆ ಮಾತ್ರ ಆಡಲು ಸಾಧ್ಯ. ಹೀಗಾಗಿ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು 22 ಪ್ರಥಮ ದರ್ಜೆ ಪಂದ್ಯಗಳಿಂದ 74 ವಿಕೆಟ್‌ಗಳನ್ನು ಪಡೆದಿರುವ ಹರಿಯಾಣದ ಬಲಗೈ ಸೀಮರ್ ಅನ್ಶುಲ್ ಕಾಂಬೋಜ್ ಅವರನ್ನು ಶಮಿ ಬದಲಿಗೆ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂಬೋಜ್ ಈಗಾಗಲೇ ಇಂಗ್ಲೆಂಡ್‌ನ ಭಾರತ ಎ ಪ್ರವಾಸದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ ಟೆಸ್ಟ್ ತಂಡ ಪ್ರಕಟಕ್ಕೂ ಮುನ್ನ ಬುಮ್ರಾಗೆ ನಿರಾಸೆ; ಉಪನಾಯಕನ ಸ್ಥಾನದಿಂದ ಕೊಕ್!
ಭಾರತದ ಪೂರ್ಣಾವಧಿ ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಬದಲಿಗೆ ಶುಭಮನ್ ಗಿಲ್ ಮತ್ತು ಉಪನಾಯಕನಾಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಅಧಿಕೃತ ಪ್ರಕಟನೆಯೊಂದೆ ಬಾಕಿ.