ಪ್ಲೇ-ಆಫ್ ಪಂದ್ಯಕ್ಕೆ ಆರ್‌ಸಿಬಿ ಸೇರಲಿದ್ದಾರೆ ಘಾತಕ ವೇಗಿ; ತಂಡಕ್ಕೆ ಆನೆಬಲ
34 ವರ್ಷದ ಹ್ಯಾಜಲ್‌ವುಡ್ ಫಿಟ್‌ನೆಸ್‌ಗಾಗಿ ಇನ್ನೂ ಕೆಲವು ದಿನ ಪುನರ್ವಸತಿಗೆ ಒಳಗಾಗಿ ಆ ಬಳಿಕ ಆರ್‌ಸಿಬಿ ಸೇರಲಿದ್ದಾರೆ ಎನ್ನಲಾಗಿದೆ. ಸದ್ಯ ಆರ್‌ಸಿಬಿ ಎರಡು ಲೀಗ್ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳಿಗೆ ಹ್ಯಾಜಲ್‌ವುಡ್ ಅಲಭ್ಯರಾಗಲಿದ್ದಾರೆ ಎಂದು ಈಗಾಗಲೇ ಕೋಚ್ ಆ್ಯಂಡಿ ಫ್ಲವರ್ ಖಚಿತಪಡಿಸಿದ್ದಾರೆ.


ಬೆಂಗಳೂರು: ಚೊಚ್ಚಲ ಟ್ರೋಫಿ ಗೆಲ್ಲುವ ಇರಾದೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ ಪ್ಲೇ ಆಫ್ ಪಂದ್ಯಕ್ಕೂ(IPL 2025 playoffs) ಮುನ್ನ ಶುಭ ಸುದ್ದಿಯೊಂದು ಲಭಿಸಿದೆ. ಗಾಯಗೊಂಡಿರುವ ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್(Josh Hazelwood) ಅವರು ಪ್ಲೇ ಆಫ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುಕೇಕ ಖಚಿತವಾಗಿದೆ. ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹ್ಯಾಜಲ್‌ವುಡ್ ಐಪಿಎಲ್(IPL 2025) ಮಧ್ಯ ಋತುವಿನಲ್ಲಿ ಅಮಾನತುಗೊಂಡ ನಂತರ ಬ್ರಿಸ್ಬೇನ್‌ನಲ್ಲಿ ಪುನರ್ವಸತಿಗೆ ಒಳಗಾಗಿದ್ದಾರೆ.
34 ವರ್ಷದ ಹ್ಯಾಜಲ್‌ವುಡ್ ಫಿಟ್‌ನೆಸ್‌ಗಾಗಿ ಇನ್ನೂ ಕೆಲವು ದಿನ ಪುನರ್ವಸತಿಗೆ ಒಳಗಾಗಿ ಆ ಬಳಿಕ ಆರ್‌ಸಿಬಿ ಸೇರಲಿದ್ದಾರೆ ಎನ್ನಲಾಗಿದೆ. ಸದ್ಯ ಆರ್‌ಸಿಬಿ ಎರಡು ಲೀಗ್ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳಿಗೆ ಹ್ಯಾಜಲ್‌ವುಡ್ ಅಲಭ್ಯರಾಗಲಿದ್ದಾರೆ ಎಂದು ಈಗಾಗಲೇ ಕೋಚ್ ಆ್ಯಂಡಿ ಫ್ಲವರ್ ಖಚಿತಪಡಿಸಿದ್ದಾರೆ. ಪ್ಲೇ ಆಫ್ ಪಂದ್ಯದ ವೇಳೆ ತಂಡಕ್ಕೆ ಹ್ಯಾಜಲ್‌ವುಡ್ ಮರಳುತ್ತಿರುವುದು ಆರ್‌ಸಿಬಿಗೆ ಆನೆ ಬಲ ಬಂದಂತಾಗಿದೆ.
ಹಾಲಿ ಆವೃತ್ತಿಯಲ್ಲಿ ಹ್ಯಾಜಲ್‌ವುಡ್ ಆರ್‌ಸಿಬಿ ಪರ 10 ಪಂದ್ಯಗಳನ್ನಾಡಿ 18 ವಿಕೆಟ್ ಕಿತ್ತು, ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಆರ್‌ಸಿಬಿ ಸೇರಿದ ಟಿಮ್ ಸೀಫರ್ಟ್
ಐಪಿಎಲ್ ಪ್ಲೇ ಆಫ್‌ಗೂ ಮುನ್ನ ಇಂಗ್ಲೆಂಡ್‌ನ ಸ್ಪೋಟಕ ಬ್ಯಾಟರ್ ಜೆಕೊಬ್ ಬೆಥೆಲ್, ರಾಷ್ಟ್ರೀಯ ತಂಡದ ಕರ್ತವ್ಯಕ್ಕಾಗಿ ಇಂಗ್ಲೆಂಡ್ ತಂಡ ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಅವರ ಬದಲಿಗೆ ನ್ಯೂಜಿಲೆಂಡ್ ಮೂಲದ ಸ್ಪೋಟಕ ಬ್ಯಾಟರ್ ಟಿಮ್ ಸೀಫರ್ಟ್ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ.
ಇದನ್ನೂ ಓದಿ IPL 2025: ಚೊಚ್ಚಲ ಶತಕ ಬಾರಿಸಿ ದಾಖಲೆ ಬರೆದ ಮಿಚೆಲ್ ಮಾರ್ಷ್
30 ವರ್ಷದ ಟಿಮ್ ಸೀಫರ್ಟ್ ಇದುವರೆಗೂ ಕಿವೀಸ್ ಪರ 66 ಟಿ20 ಪಂದ್ಯಗಳನ್ನಾಡಿ 1540 ರನ್ ಸಿಡಿಸಿದ್ದಾರೆ. ಅವರು 2 ಕೋಟಿ ರುಪಾಯಿ ಮೊತ್ತಕ್ಕೆ ಆರ್‌ಸಿಬಿ ತಂಡವನ್ನು ತಾತ್ಕಾಲಿಕವಾಗಿ ಕೂಡಿಕೊಂಡಿದ್ದಾರೆ. ಟಿಮ್ ಸೀಫರ್ಟ್ ಈ ಮೊದಲು 2021ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅಗ್ರಕ್ರಮಾಂಕದ ಬ್ಯಾಟರ್ ಆಗಿರುವ ಸೀಫರ್ಟ್ ವಿಕೆಟ್ ಕೀಪರ್ ಮಾತ್ರವಲ್ಲದೇ ಚುರುಕಿನ ಕ್ಷೇತ್ರರಕ್ಷಣೆಗೂ ಹೆಸರುವಾಸಿಯಾಗಿದ್ದಾರೆ.