ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಜೂನ್ ೧೫ – ೨೦೦೪ ಅಹ್ಮದಾಬಾದಿನ ಹೊರಭಾಗದಲ್ಲಿ ‘ಕ್ರೈಂ ಬ್ರಾಂಚ್’ನ ಪೊಲೀಸರು ನಾಲ್ಕು ಜನ ಪಾಕಿಸ್ತಾನದ ಜತೆ ನಂಟಿರುವ ಭಯೋತ್ಪಾದಕರನ್ನು ಬೆಳಗಿನ ಜಾವ ಎನ್ ಕೌಂಟರ್ ಮಾಡಿ ಮುಗಿಸಿದ್ದರು.
ಎನ್ಕೌಂಟರ್ ಮಾಡುವ ಒಂದು ತಿಂಗಳ ಮೊದಲು ಅಹಮದಾಬಾದ್ ಪೊಲೀಸರಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ನಾಲ್ಕು ಜನರು ನೀಲಿ ಬಣ್ಣದ ‘ಟಾಟಾ ಇಂಡಿಕಾ’ ಕಾರಿನಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ಮುಂಬೈನಿಂದ ಅಹಮದಾಬಾದ್ ನಗರಕ್ಕೆ ತಲುಪಿ ಗುಜರಾತಿನ ಅಂದಿನ ಮುಖ್ಯಮಂತ್ರಿ ಯಾಗಿದ್ದಂಥ ‘ನರೇಂದ್ರ ಮೋದಿ’ ಹಾಗೂ ‘ಬಿ.ಜೆ.ಪಿ’ಯ ಭೀಷ್ಮ ‘ಅಡ್ವಾಣಿ’ಯವರನ್ನು ಕೊಲ್ಲಲು ಬರುತ್ತಿದ್ದರೆಂಬ ಮಾಹಿತಿಯ ಮೇರೆಗೆ ಪೊಲೀಸರು ಈ ಕಾರ್ಯಾಚರಣೆಯನ್ನು ಮಾಡಿದ್ದರು.
ಜಾವೀದ್ ಗುಲಾಮ, ಅಜ್ಮಾದ್ ಅಲಿ ರಾಣಾ, ಜಿಸಾನ್ ಜೋಹರ್ ಮತ್ತು ಇಶ್ರತ್ ಜಹಾನ್ (ಮಹಿಳೆ) ಎಂಬ ನಾಲ್ಕು ಜನ ಭಯೋತ್ಪಾದಕರನ್ನು ಅಹಮದಾಬಾದ್ ಪೊಲೀಸರು ಹೊಡೆದು ಹಾಕಿದ್ದರು. ‘ಇಶ್ರತ್ ಜಹಾನ್’ಎಂಬ ಮಹಿಳೆ ಭಯೋತ್ಪಾದಕ
ಸಂಘಟನೆಯ ಸದಸ್ಯಳಲ್ಲವೆಂಬ ಗುಲ್ಲು ಎಡೆಯೂ ಹಬ್ಬಲು ಶುರುವಾಗಿತ್ತು. ಪೊಲೀಸರು ಅಮಾಯಕ ಹುಡುಗಿಯನ್ನು ನಕಲಿ ಎನ್ಕೌಂಟರ್ನಲ್ಲಿ ಕೊಂದರೆಂದು ಗುಜರಾತಿನ ಮುಸ್ಲಿಂ ಮುಖಂಡರು ಹೇಳಿಕೆಗಳನ್ನು ಕೊಡಲು ಶುರು ಮಾಡಿದರು.
ಆಕೆಯ ತಾಯಿ ತನ್ನ ಮಗಳು ಅಮಾಯಕಿ ಆಕೆಗೂ ಭಯೋತ್ಪಾದನಾ ಸಂಘಟನೆಗೂ ಯಾವುದೇ ಸಂಬಂಧವಿರಲಿಲ್ಲವೆಂಬ ಹೇಳಿಕೆಯನ್ನು ನೀಡಿದ್ದಳು. ಶಾಂತಿಪ್ರಿಯರಿಗೆ ಹೆಣದ ಮೇಲೆ ರಾಜಕೀಯ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಷ್ಟು ಸಾಕಲ್ಲ.‘ಇಶ್ರತ್ ಜಹಾನ್’ಳನ್ನು ಶಾಹೀದ್ (ಹುತಾತ್ಮ ಮಹಿಳೆ) ಎಂದು ಕರೆದರು. ಆಂಬುಲೆನ್ಸ್ ಮೇಲೆ ‘ಶಾಹೀದ್
ಇಶ್ರತ್ ಜಹಾನ್ ಎಂದು ಬರೆಸಿದರು. ಮುಂಬೈ ಮೂಲ ದವಳಾಗಿದ್ದ ‘ಇಶ್ರತ್ ಜಹಾನ್’ಳ ದೇಹವನ್ನು ಮೆರವಣಿಗೆಯ ಮೂಲಕ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಕೊಂಡೊಯ್ಯಲಾಯಿತು, ಇವಳ ಅಂತ್ಯಕ್ರಿಯೆಯಲ್ಲಿ ಸುಮಾರು ೧೦,೦೦೦ ಜನರು ಪಾಲ್ಗೊಂಡಿದ್ದರು.
ಸಮಾಜವಾದಿ ಪಕ್ಷದ ಅಧ್ಯಕ್ಷನಾಗಿದ್ದ ‘ಅಬು ಅಜ್ಮಿ’ ‘ಇಶ್ರತ್ ಜಹಾನ್’ಳ ಎನ್ಕೌಂಟರ್ ಕೇಸನ್ನು ‘ಸಿ.ಬಿ.ಐ’ಗೆ ಒಪ್ಪಿಸುತ್ತೇನೆಂದು ಎಲ್ಲರ ಮುಂದೆ ಘಂಟಾಘೋಷವಾಗಿ ಹೇಳಿದ್ದ. ಎನ್ಕೌಂಟರ್ ನಡೆದ ಒಂದು ತಿಂಗಳ ನಂತರ ಪಾಕಿಸ್ತಾನಿ ಮೂಲದ ‘ಗಾಜ್ವಾ ಟೈಮ್ಸ’ ಪತ್ರಿಕೆಯು ಲಷ್ಕರ್ ಭಯೋತ್ಪಾದಕ ಸಂಘಟನೆಯು ‘ಶಾಹೀದ್ ಇಶ್ರತ್ ಜಹಾನ್’ ತನ್ನ ಸದಸ್ಯೆ ಎಂದು ಹೇಳಿಕೆ ನೀಡಿರುವ ವರದಿಯನ್ನು ಪ್ರಸಾರ ಮಾಡಿತ್ತು, ಈ ವರದಿಯನ್ನು ಭಾರತದ ಮಾಧ್ಯಮಗಳು ಯತಾವತ್ತಾಗಿ ಪ್ರಸಾರ ಮಾಡಿದ್ದವು.
ಆಗ ಅಧಿಕಾರದಲ್ಲಿದ್ದದ್ದು ಅಂಟೋನಿಯೋ ಮೈನೋ ನೇತೃತ್ವದ ‘UPA’ ಸರಕಾರ. ಈ ವಿಷಯ ತಿಳಿದು ಅಂಟೋನಿಯೋ ಮೈನೋರ ಅತ್ಯಂತ ಆಪ್ತನಾಗಿದ್ದ ‘ಅಹ್ಮದ್ ಪಟೇಲ’ ಗುಜರಾತಿನಲ್ಲಿ ಮೈಕೊಡವಿ ನಿಂತಿದ್ದರು. ಆಗಸ್ಟ್ ೨೦೦೪ರಲ್ಲಿ ‘ಇಶ್ರತ್ ಜಹಾನ್’ಳ ತಾಯಿ ತನ್ನ ಮಗಳನ್ನು ಪೊಲೀಸರು ಸುಳ್ಳು ಆರೋಪದಡಿಯಲ್ಲಿ ಎನ್ಕೌಂಟರ್ನಲ್ಲಿ ಕೊಂದರು, ಹಾಗಾಗಿ ಎನ್ಕೌಂಟರ್ ಕೇಸನ್ನು ‘ಸಿ.ಬಿ.ಐ’ ತನಿಖೆಗೆ ಒಳಪಡಿಸಬೇಕೆಂದು ಗುಜರಾತ್ ಹೈ ಕೋರ್ಟಿನ ಮೊರೆಹೋದರು.
೨೦೦೪ರಲ್ಲಿ ಅಹ್ಮದಾಬಾದಿನ ಕ್ರೈಂ ಬ್ರಾಂಚಿನ ಮಹಿಳಾ ವಿಭಾಗದ ‘ಸಹಾಯಕ ಪೊಲೀಸ್ ಕಮಿಷನರ್ ೨೦೦೪ರಲ್ಲಿ
ನಡೆದ ಎನ್ಕೌಂಟರ್ನಲ್ಲಿ ಯಾವುದೇ ಲೋಪದೋಷಗಳಿಲ್ಲ, ಅದು ನಿಜವಾದ ಎನ್ಕೌಂಟರ್ ಹಾಗೂ ಮೃತ ಮಹಿಳೆ
‘ಇಶ್ರತ್ ಜಹಾನ್’ ಭಯೋತ್ಪಾದಕ ಸಂಘಟನೆಯ ಸದಸ್ಯೆಯಾಗಿದ್ದು ನರೇಂದ್ರ ಮೋದಿ ಹಾಗೂ ಅಡ್ವಾಣಿಯವರನ್ನು ಕೊಲ್ಲಲು ಬಂದಿದ್ದ ತಂಡದಲ್ಲಿದ್ದಳೆಂದು ಕೋರ್ಟಿಗೆ ದೀರ್ಘವಾದ ವರದಿಯನ್ನು ಸಲ್ಲಿಸಿದ್ದರು.
ವರದಿಯನ್ನು ಪರಿಗಣಿಸಿದ ಹೈ ಕೋರ್ಟ್ ‘ಜಿಲ್ಲಾ ಮ್ಯಾಜಿಸ್ಟ್ರೇಟ್’ ನೇತೃತ್ವದಲ್ಲಿ ‘ನ್ಯಾಯಾಂಗ ತನಿಖೆ’ ನಡೆಸಲು ಆದೇಶ ನೀಡಿತ್ತು. ಆದೇಶ ನೀಡಿದ ದಿನವೇ ಕತೆಯಂದು ತಿರುವು ಕಾಣಿಸಿತು. ಎರಡು ವರ್ಷದ ಕೆಳಗೆ ‘ಇಶ್ರತ್ ಜಹಾನ್’ಳನ್ನು ತನ್ನ ಸಂಘಟನೆಯ ಸದಸ್ಯೆಯೆಂದು ಹೇಳಿಕೊಂಡಿದ್ದಂಥ ‘ಲಷ್ಕರ್’ ಸಂಘಟನೆ ೨೦೦೬ರ ಜೂನ್ ೮ರಂದು ಉಲ್ಟಾ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿತು.
ಎರಡು ವರ್ಷದ ಕೆಳಗೆ ತಾನು ‘ಇಶ್ರತ್ ಜಹಾನ್’ಳನ್ನು ತನ್ನ ಸಂಘಟನೆಯ ಸದಸ್ಯೆಯೆಂದು ಸುಳ್ಳು ಹೇಳಿದೆವೆಂದು ಹೇಳಿಕೆ ನೀಡಿತು. ಭಯೋತ್ಪಾದಕ ಸಂಘಟನೆ ಯೊಂದು ತಾನು ನೀಡಿದ್ದ ಹೇಳಿಕೆಯನ್ನು ಸುಳ್ಳೆಂದು ಹೇಳಿದ್ದು ಬಹುಷಃ ಭಾರತದ
ಇತಿಹಾಸದಲ್ಲಿಯೇ ಮೊದಲು. ಯಾವಾಗ ‘ಇಶ್ರತ್ ಹಾನ್’ಳ ಎನ್ಕೌಂಟರ್ ತನಿಖೆಯನ್ನು ಕೋರ್ಟ್ ನ್ಯಾಯಾಂಗ ತನಿಖೆಗೆ ವಹಿಸಿತೋ ಅಂದೇ ಈ ಹೇಳಿಕೆ ನೀಡುವ ಮೂಲಕ ತನ್ನ ನಿಲುವನ್ನು ಬದಲಿಸಿತು.
ಈ ಹೇಳಿಕೆಯನ್ನು ತನಿಖೆಯ ಸಮಯದಲ್ಲೂ ಅಥವಾ ಹೇಳಿಕೆ ನೀಡಿದ ಒಂದೆರಡು ತಿಂಗಳ ನೀಡಬಹುದಿತ್ತು, ಆದರೆ
ಕೋರ್ಟ್ ಆದೇಶ ನೀಡುವ ದಿನವೇ ನೀಡಿದ್ದರಿಂದ ದೊಡ್ಡದೊಂದು ಅನುಮಾನ ಎಲ್ಲರನ್ನು ಕಾಡತೊಡಗಿತ್ತು. ಭಯೋತ್ಪಾದಕ ಕೃತ್ಯಗಳನ್ನು ಒಪ್ಪಿಕೊಳ್ಳುವುದು ಭಯೋತ್ಪಾದಕ ಸಂಘಟಗಳಿಗೆ ಹೆಮ್ಮೆಯ ಸಂಗತಿ, ಯಾಕೆಂದರೆ ಅವರು ಒಪ್ಪಿಕೊಂಡರೆ ಮಾತ್ರ ಅವರ ಅಸ್ತಿತ್ವವನ್ನು ಇತರ ಸಂಘಟನೆಗಳು ಕೊಂಡಾಡುತ್ತವೆ ಹಾಗೂ ಬೆಂಬಲಿಸುತ್ತವೆ.
ಆದರೆ ಇಶ್ರತ್ ಜಹಾನ್ ಕೇಸಿನಲ್ಲಿ ಎರಡು ವರ್ಷದಲ್ಲಿ ತನ್ನ ಹೇಳಿಕೆಯನ್ನು ಸುಳ್ಳೆಂದು ವಾಪಾಸ್ ಪಡೆಯಬೇಕಾದರೆ ಯಾವ ಮಟ್ಟಿನ ರಾಜಕೀಯ ಪಿತೂರಿ ಇದರ ಹಿಂದಿರಬಹುದೆಂದು ನೀವೇ ಅರ್ಥಮಾಡಿಕೊಳ್ಳಿ. ಮ್ಯಾಜಿಸ್ಟ್ರೇಟ್ ತನಿಖೆ ಸಂದರ್ಭದಲ್ಲಿ, ಕೇಂದ್ರದಲ್ಲಿ ಅಂದು ಅಧಿಕಾರದಲ್ಲಿದ್ದಂಥ ಅಂಟೋನಿಯೋ ಮೈನೋ ನೇತೃತ್ವದ ‘”UPA’ ಸರಕಾರವು ಗುಜರಾತ್ ಹೈ ಕೋರ್ಟಿನಲ್ಲಿ ‘ಇಶ್ರತ್ ಜಹಾನ್’ ಹಾಗೂ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಯ ನಂಟಿನ ಕುರಿತು ‘ಅಫಿಡವಿಟ್’ಸಲ್ಲಿಕೆ
ಮಾಡಿತ್ತು. ಈ ಅಫಿಡವಿಟ್ನಲ್ಲಿ ೨೦೦೪ರಲ್ಲಿ ಲಷ್ಕರ್ ಸಂಘಟನೆಯು ಹೇಳಿದ್ದಂಥ ಆಕೆಯ ನಂಟಿನ ಬಗ್ಗೆ ಉಲ್ಲೇಖ ಮಾಡ ಲಾಗಿತ್ತು.
ಪಾಕಿಸ್ತಾನದ ಮಾಧ್ಯಮ ಅಂದು ವರದಿ ಮಾಡಿದ್ದಂಥ ಲಷ್ಕರ್ ಸಂಘಟನೆಯ ಹೇಳಿಕಯನ್ನೇ ಈ ‘ಅಫಿಡವಿಟ್’ನಲ್ಲಿ ಲಗತ್ತಿಸಲಾಗಿತ್ತು. ಆದರೆ ಕೇವಲ ಎರಡೇ ತಿಂಗಳುಗಳಲ್ಲಿ ಅಂದರೆ ಸೆಪ್ಟೆಂಬರ್ ೨೦೦೯ರಲ್ಲಿ ‘”UPA’ ಸರಕಾರ ತನ್ನ ‘ಅಫಿಡವಿಟ್’ನಲ್ಲಿ ಹೇಳಿದ್ದಂಥ ಹೇಳಿಕೆಯನ್ನು ವಾಪಾಸ್ ಪಡೆಯುವ ಮೂಲಕ ಎರಡನೇ ‘ಅಫಿಡವಿಟ್’ ಸಲ್ಲಿಕೆ ಮಾಡಿತ್ತು. ತನ್ನ ಎರಡನೇ ‘ಅಫಿಡವಿಟ್’ನಲ್ಲಿ ಪಾಕಿಸ್ತಾನ ಉಗ್ರ ಸಂಘಟನೆಯು ನೀಡಿದ್ದಂಥ ಹೇಳಿಕೆಯನ್ನು ಅಳಿಸಿ ಹಾಕಿ, ತನ್ನ ನಿಲುವನ್ನು ಬದಲಿಸಿತ್ತು.
ಅತ್ತ ಎರಡು ವರ್ಷಗಳ ನಂತರ ತನ್ನದೇ ಹೇಳಿಕೆಯನ್ನು ಭಯೋತ್ಪಾದಕ ಸಂಘಟನೆಯೊಂದು ವಾಪಾಸ್ ಪಡೆಯುತ್ತದೆ, ಇತ್ತ
ಅಂಟೋನಿಯೋ ಮೈನೋ ನೇತೃತ್ವದ ಸರಕಾರ ಎರಡೇ ಎರಡು ತಿಂಗಳಲ್ಲಿ ತಾನು ಕೋರ್ಟಿಗೆ ಸಲ್ಲಿಸಿದ್ದಂಥ ‘ಅಫಿಡವಿಟ್’ ವಾಪಾಸ್ ಪಡೆದು, ಎರಡನೆಯ ಅಫಿಡವಿಟ್ ನಲ್ಲಿ ತಾನು ಹಿಂದೆ ಉಕಿಸಿದಂಥ ಲಷ್ಕರ್ ಸಂಘಟನೆಯ ಹೇಳಿಕೆಯನ್ನು ತೆಗೆದು ಹಾಕಿತ್ತು. ಹೇಳಿ ಕೇಳಿ ಕಾಂಗ್ರೆಸ್ ಸರಕಾರ, ಮುಸಲ್ಮಾನರ ವಿರುದ್ಧ ಯಾವುದಾದರೊಂದು ಆರೋಪ ಬಂದರೆ ಸಾಕು ತನ್ನ ಎಲ್ಲ ಕದಂಬ ಬಾಹುಗಳನ್ನೇ ಚಾಚಿ ಅವರ ಪರವಾಗಿ ನಿಲ್ಲಲು ತುದಿಗಾಲಿನಲ್ಲಿ ನಿಂತಿರುತ್ತದೆ.
ಅಂದಿನ ಕಾಲದಲ್ಲಿ ಮುಸಲ್ಮಾನರು ಕಾಂಗ್ರೆಸ್ಸಿಗೆ ನಿಷ್ಠಾವಂತ ಮತದಾರರಾಗಿದ್ದರು, ಗುಜರಾತಿನಲ್ಲಿ ‘ಇಶ್ರತ್ ಜಹಾನ್’ಳ ಹೆಸರಿನಲ್ಲಿ ಮತಬ್ಯಾಂಕಿನ ರಾಜಕಾರಣವನ್ನು ಮಾಡಬೇಕಿತ್ತು. ‘ಅಂಟೋನಿಯೋ ಮೈನೋ’ರ ಆಪ್ತ ‘ಅಹ್ಮದ್ ಪಟೇಲ್’ ಗುಜರಾತಿನಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದರು. ಇಂದು ಸತ್ತು ಸಂಪಿಗೆ ಮರವಾಗಿರುವ ‘ಅಹ್ಮದ್ ಪಟೇಲ’ ಹೇಳಿದಂತೆ ಅಂಟೋನಿಯೋ ಮೈನೋ ಕೇಳುತ್ತಿದ್ದರು.
ಗುಜರಾತಿನಲ್ಲಿ ಅಷ್ಟುಹೊತ್ತಿಗಾಗಲೇ ಗೋಧ್ರಾ ಹತ್ಯಾಕಾಂಡದ ನಂತರ ಹಲವೆಡೆ ಕೋಮುಗಲಭೆಗಳು ನಡೆಡಿದ್ದವು, ಅಹ್ಮದಾಬಾದಿನಲ್ಲಿ ಉಗ್ರರು ಬಾಂಬುಗಳನ್ನು ಸೋಟಿಸುವ ಮೂಲಕ ಕೋಮುಗಲಭೆಗಳ ಸೇಡನ್ನು ತೀರಿಸಿಕೊಂಡಿದ್ದರು. ಇಂಥ ಹಲವು ಅಡೆತಡೆಗಳ ನಡುವೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಸರಕಾರ ‘ಗುಜರಾತ್’ ರಾಜ್ಯವನ್ನು ಅಭಿವೃದ್ಧಿಯ ದೃಷ್ಟಿಯಿಂದ ಒಂದು ಮಾದರಿ ರಾಜ್ಯದೆಡೆಗೆ ಕರೆದೊಯ್ಯುತ್ತಿದ್ದರು, ಅವರ ಓಟಕ್ಕೆ ಕಡಿವಾಣ ಹಾಕಲು ಯಾವುದಾದರೊಂದು ವಿಷಯ ಕಾಂಗ್ರೆಸ್ಸಿಗೆ ಬೇಕಿತ್ತು. ‘ಇಶ್ರತ್ ಜಹಾನ್’ ಕೇಸಿನಲ್ಲಿ ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರನ್ನು ಸಿಲುಕಿಸುವ ಪ್ರಯತ್ನದ ಆರಂಭವಾಯಿತು.
ಆಗಸ್ಟ್ ೨೦೦೯ರಲ್ಲಿ ಗುಜರಾತ್ ಹೈ ಕೋರ್ಟ್ ವಿಶೇಷ ತನಿಖಾ ದಳವನ್ನು ನೇಮಿಸಿ ಎನ್ಕೌಂಟರ್ ಕೇಸನ್ನು ತನಿಖೆ ಮಾಡು ವಂತೆ ಆದೇಶ ನೀಡಿತ್ತು. ಇದಾದ ಒಂದು ತಿಂಗಳುಗಳ ಒಳಗೆ ಹಳೆಯ ಮ್ಯಾಜಿಸ್ಟ್ರೇಟ್ ನೇತೃತ್ವದ ತನಿಖಾ ತಂಡ ತನ್ನ
ವರದಿ ಯನ್ನು ಗುಜರಾತ್ ಹೈ ಕೋರ್ಟಿಗೆ ಸಲ್ಲಿಸಿತ್ತು, ತನ್ನ ೨೩೮ ಪುಟಗಳ ವರದಿಯಲ್ಲಿ ಇದೊಂದು ನಕಲಿ ಎನ್ಕೌಂಟರ್ ಎಂಬುದನ್ನು ಹೇಳಿತ್ತು. ಗುಜರಾತ್ ಸರಕಾರವು ಈ ವರದಿಯನ್ನು ಅನುಷ್ಠಾನಗೊಳಿಸದಂತೆ ಹೈ ಕೋರ್ಟ್ನಲ್ಲಿ ತಡೆಯಾಜ್ಞೆ ಯನ್ನು ಕೋರಿ ಅರ್ಜಿ ಹಾಕಿತ್ತು.
ಸರಕಾರದ ಅರ್ಜಿಯನ್ನು ಪರಿಶೀಲಿಸಿದ ಗುಜರಾತ್ ಹೈ ಕೋರ್ಟ್ ತಡೆಯಾಜ್ಞೆಯನ್ನು ನೀಡಿತ್ತು. ಇದಾದ ಎರಡು ವರ್ಷಗಳ
ನಂತರ, ೨೦೧೧ರಲ್ಲಿ ವಿಶೇಷ ತನಿಖಾ ದಳವು ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿಯೂ ಸಹ ನಕಲಿ ಎನ್ಕೌಂಟರ್ ಎಂದು ಉಖವಾಗಿತ್ತು, ಪೊಲೀಸ್ ಅಧಿಕಾರಿಗಳು ತಮ್ಮ ಮುಂಬಡ್ತಿಯನ್ನು ಪಡೆಯುವ ವಿಚಾರದಲ್ಲಿ ನಾಲ್ಕು ಜನರನ್ನು ಬೇರೆಡೆ ಶೂಟ್ ಮಾಡಿ ಅಹಮದಾಬಾದ್ ನಗರದ ಹೊರವಲಯದಲ್ಲಿ ನಕಲಿ ಎನ್ ಕೌಂಟರ್ ಮಾಡಿದ್ದಾರೆಂದು ಹೇಳಲಾಗಿತ್ತು.
ಆದರೆ ವಿಶೇಷ ತನಿಖಾ ದಳದ ವರದಿಯನ್ನು ಅಂಗೀಕರಿಸಿ ನ್ಯಾಯಾಲಯವು ಈ ಪ್ರಕರಣವನ್ನು ‘ಸಿ.ಬಿ.ಐ’ಗೆ ನೀಡುವುದು ಸೂಕ್ತವೆಂದು ಪರಿಗಣಿಸಿ ತನಿಖೆಯನ್ನು ೨೦೧೧ರ ಡಿಸೆಂಬರ್ನಲ್ಲಿ ‘ಸಿ.ಬಿ.ಐ’ಗೆ ಒಪ್ಪಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ
‘ಸಿ.ಬಿ.ಐ’ ೨೦೧೩ರಲ್ಲಿ ಎನ್ಕೌಂಟರ್ನಲ್ಲಿ ಬಾಗಿಯಾಗಿದ್ದಂಥ ಹಲವು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿ ತನ್ನ
ವಿಚಾರಣೆಯನ್ನು ನಡೆಸಿತು.
ಗುಜರಾತಿನ ಗೃಹ ಮಂತ್ರಿಯಾಗಿದ್ದಂಥ ‘ಅಮಿತ್ ಶಾ’ರನ್ನು ಈ ಪ್ರಕರಣ ಸುಮ್ಮನೆ ಬಿಡಲಿಲ್ಲ, ಹಲವು ದಿನಗಳ ಕಾಲ ಅಮಿತ್ ಶಾ
ಜೈಲಿನಲ್ಲಿರಬೇಕಾದಂಥ ಪ್ರಸಂಗ ಎದುರಾಯಿತು. ತನ್ನ ರಾಜ್ಯವನ್ನು ಬಿಟ್ಟು ಬೇರೆಡೆಗೆ ಗಡಿ ಪಾರದಂಥ ಪ್ರಸಂಗವು ‘ಅಮಿತ್ ಶಾ’ರಿಗೆ ಎದುರಾಯಿತು. ಅಂಟೋನಿಯೋ ಮೈನೋರ ಆಪ್ತನಾಗಿದ್ದಂಥ ‘ಅಹ್ಮದ್ ಪಟೇಲ’ ಸದಾ ಅಮಿತ್ ಶಾ ಹಾಗೂ ಮೋದಿಯವರ ಮೇಲೆ ಕತ್ತಿ ಮಸೆಯುತ್ತಲೇ ಇದ್ದರು.
ಅವರಿಗೆ ಇವರಿಬ್ಬರ ತಾಕತ್ತು ಅಂದೇ ಗೊತ್ತಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನೂ ಸಿಲುಕಿ ಹಾಕಿಸಿದರೆ ಗುಜರಾತಿನಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ಸುಲಭವಾಗಿ ತರಬಹುದೆಂಬ ರಾಜಕೀಯ ಲೆಕ್ಕಾಚಾರ ಅವರದ್ದಾಗಿತ್ತು. ಮೋದಿ ಹಾಗೂ ಅಮಿತ್ ಶಾ ಮುಂದಿನ
ದಿನಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ಬಂದರೆ ಕಾಂಗ್ರೆಸ್ ಪಕ್ಷ ನೆಲಕಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬ ಭಯ
‘ಅಹ್ಮದ್ ಪಟೇಲ್’ ಹಾಗೂ ‘ಅಂಟೋನಿಯೋ ಮೈನೋ’ಗೆ ಇತ್ತು.
೨೦೧೪ರಲ್ಲಿ ‘ಸಿ.ಬಿ.ಐ’ ಗುಜರಾತಿನ ಗೃಹ ಸಚಿವರಾಗಿದ್ದ ‘ಅಮಿತ್ ಶಾ’ರ ಮೇಲಿರುವ ಆರೋಪಕ್ಕೆ ಯಾವುದೇ ಸಾಕ್ಷಿಯಿಲ್ಲವೆಂದು ಅಹಮದಾಬಾದ್ ವಿಶೇಷ ಕೋರ್ಟಿಗೆ ವರದಿಯನ್ನು ಸಲ್ಲಿಸಿತ್ತು. ಇವೆಲ್ಲದರ ಮಧ್ಯೆ ೨೦೧೦ರಲ್ಲಿ ನಡೆದ ಮತ್ತೊಂದು ಘಟನೆ ಯನ್ನು ನೆನಪಿಸಿಕೊಳ್ಳಬೇಕು. ೨೦೧೦ರಲ್ಲಿ ಕೆಲವು ಮಾಧ್ಯಮಗಳು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಹೆಡ್ಲಿ ರಾಷ್ಟ್ರೀಯ ತನಿಖಾ ದಳವು ನಡೆಸುತ್ತಿದ್ದಂಥ ತನಿಖೆಯ ಸಂದರ್ಭದಲ್ಲಿ ‘ಇಶ್ರತ್ ಜಹಾನ್’ ಲಷ್ಕರ್ ಉಗ್ರ ಸಂಘಟನೆಯ ಸದಸ್ಯಳೆಂದು ಹೇಳಿzನೆಂದು ಸುದ್ದಿಯನ್ನು ಬಿತ್ತರಿಸಿದವು.
ಆದರೆ ರಾಷ್ಟ್ರೀಯ ತನಿಖಾ ದಳವು, ಈ ಹೇಳಿಕೆಯನ್ನು ತಳ್ಳಿ ಹಾಕಿತ್ತು. ೨೦೧೩ರಲ್ಲಿ ‘ಇಂಡಿಯಾ ಟುಡೇ’ ಮಾಧ್ಯಮವು ‘ಡೇವಿಡ್ ಹೆಡ್ಲಿ’ಯ ವಿಚಾರಣಾ ವರದಿಯನ್ನು ಬಿತ್ತರಿಸುವ ಸಂದರ್ಭದಲ್ಲಿ ‘ಇಶ್ರತ್ ಜಹಾನ್’ ಭಯೋತ್ಪಾದಕ ಸಂಘಟನೆಯಾದಂಥ ‘ಲಷ್ಕರ್’ನ ಒಬ್ಬ ಹಾದಿಯೆಂದು ಹೆಡ್ಲಿ ಹೇಳಿzಳೆಂಬ ಅಂಶವನ್ನು ವರದಿ ಮಾಡಿತ್ತು. ಇದರ ಜತೆಗೆ ನರೇಂದ್ರ ಮೋದಿ ಹಾಗೂ
ಅಡ್ವಾಣಿಯವರನ್ನು ಕೊಲ್ಲಲು ಎನ್ಕೌಂಟರ್ನಲ್ಲಿ ಮೃತಪಟ್ಟ ನಾಲ್ಕು ಮಂದಿ ಹಾಕಿದ್ದ ಸ್ಕೆಚ್ಗೆ ಬೇಕಾದಂಥ ಸಾಕ್ಷಿಗಳು ‘ತನಿಖಾ ದಳ’ದ ಬಳಿ ಇದೆಯೆಂದು ವರದಿ ಮಾಡುವ ಮೂಲಕ, ಎನ್ಕೌಂಟರ್ ಹಿಂದಿನ ಅಸಲಿ ಸತ್ಯವನ್ನು ಬಯಲಿಗೆಳೆದಿತ್ತು.
೨೦೧೬ರ ಮಾರ್ಚ್ ತಿಂಗಳಲ್ಲಿ ಮುಂಬೈ ಭಯೋತ್ಪಾದನೆಯ ಮಾಸ್ಟರ್ ಮೈಂಡ್ ‘ಡೇವಿಡ್ ಹೆಡ್ಲಿ’ ಮತ್ತೊಮ್ಮೆ ತಾನು ‘ರಾಷ್ಟ್ರೀಯ ತನಿಖಾ ದಳ’ದ ಮುಂದೆ ‘ಇಶ್ರತ್ ಜಹಾನ್’ ಲಷ್ಕರ್ ಸಂಘಟನೆಯ ಸದಸ್ಯೆಯೆಂದು ೨೦೧೦ರಲ್ಲಿ ಹೇಳಿದ್ದೇನೆಂದು ಪುನರುಚ್ಚರಿಸುತ್ತಾನೆ. ತಾನು ನೀಡಿದ ಹೇಳಿಕೆಯನ್ನು ೨೦೧೦ರಲ್ಲಿ ರಾಷ್ಟ್ರೀಯ ತನಿಖಾ ದಳದವರು ಯಾಕೆ ಪರಿಗಣಿಸಲಿಲ್ಲ ವೆಂದು ನನಗೆ ತಿಳಿಯುತ್ತಿಲ್ಲವೆಂದು ಹೇಳುವ ಮೂಲಕ ರಾಷ್ಟ್ರೀಯ ತನಿಖಾ ದಳವು ಯಾರ ಕೈಗೊಂಬೆಯಾಗಿತ್ತೆಂಬ ಅನುಮಾನವನ್ನು ಎಲ್ಲರಲ್ಲೂ ಮೂಡಿಸುತ್ತಾನೆ.
೨೦೧೬ರ ಮಾರ್ಚ್ ತಿಂಗಳಲ್ಲಿ ಡೇವಿಡ್ ಹೆಡ್ಲಿಯ ಹೇಳಿಕೆ ಹೊರಬರುತ್ತಿರುವ ಸಂದರ್ಭದಲ್ಲಿ, ಅಂಟೋನಿಯೋ ಮೈನೋ ನೇತೃತ್ವದ ಸರಕಾರದಲ್ಲಿ ಪಿ.ಚಿದಂಬರಂ ಗೃಹ ಸಚಿವರಾಗಿದ್ದಾಗ ಇಲಾಖೆಯ ಕಾರ್ಯದರ್ಶಿಯಾಗಿದ್ದಂಥ ಜಿ.ಕೆ.ಪಿಳ್ಳೆ ಸೋಟಕ ಹೇಳಿಕೆಯೊಂದನ್ನು ನೀಡಿದರು. ೨೦೦೯ರಲ್ಲಿ ಕೇಂದ್ರ ಸರಕಾರವು ಸಲ್ಲಿಸಿದ ಎರಡನೇ ಅಫಿಡವಿಟ್ನಲ್ಲಿ ಇಶ್ರತ್ ಜಹಾನ್ ಬಗ್ಗೆ ಲಷ್ಕರ್ ಸಂಘಟನೆ ನೀಡಿದ್ದಂಥ ಹೇಳಿಕೆಯನ್ನು ತೆಗೆದು ಹಾಕಲು ಹೇಳಿದ್ದೇ ಪಿ.ಚಿದಂಬರಂ ಎಂದುಬಿಟ್ಟರು.
ಇವರ ಹೇಳಿಕೆಯು ೨೦೦೯ರಲ್ಲಿ ಕಾಂಗ್ರೆಸ್ ಪಕ್ಷವು ಹೇಗೆ ಮುಸಲ್ಮಾನ್ ಭಯೋತ್ಪಾದಕರ ರಕ್ಷಣೆಗೆ ನಿಂತಿತ್ತೆಂಬುದನ್ನು ಎತ್ತಿ ತೋರಿಸುತ್ತಿತ್ತು. ಗೃಹ ಸಚಿವ ಚಿದಂಬರಂ, ನರೇಂದ್ರ ಮೋದಿ ಹಾಗೂ ಅಡ್ವಾಣಿಯವರಂಥ ನಾಯಕರನ್ನು ಕೊಲ್ಲಲು ಬಂದು ಅಹಮದಾಬಾದ್ ಪೊಲೀಸರ ಎನ್ಕೌಂಟರ್ಗೆ ಬಲಿಯಾದಂಥ ‘ಇಶ್ರತ್ ಜಹಾನ್’ಳ ಪರವಾಗಿ ನಿಂತಿದ್ದನ್ನು ಪಿಳ್ಳೆ ಹೇಳಿಕೆಯು ಗಟ್ಟಿಯಾಗಿ ಹೇಳುತ್ತಿತ್ತು.
೨೦೧೪ರಲ್ಲಿ ಗೃಹ ಸಚಿವರಾಗಿದ್ದಂಥ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಕಾಂಗ್ರೆಸ್ ಸರಕಾರವು ಹೇಗೆ ಗೃಹ ಇಲಾಖೆಯ ಮೂಲಕ ನರೇಂದ್ರ ಮೋದಿ ಹಾಗೂ ‘ಅಮಿತ್ ಶಾ’ರನ್ನು ೨೦೦೯ರಲ್ಲಿ ಸುಳ್ಳು ಆರೋಪಿಗಳನ್ನಾಗಿಸಲು ಮಸಲತ್ತು ನಡೆಸಿತ್ತೆಂಬುದನ್ನು ಸವಿವರವಾಗಿ ಹೇಳಿದ್ದರು. ಎನ್ಕೌಂಟರ್ ಕೇಸಿನ ‘ಆರೋಪ’ವನ್ನು ಎದುರಿಸುತ್ತಿದ್ದ ಅಧಿಕಾರಿಯಾದಂಥ ‘ರಾಜೇಂದ್ರ ಕುಮಾರ್’ ಫೆಬ್ರವರಿ ೨೦೧೬ರಲ್ಲಿ ಪತ್ರಿಕೆ ಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಗುಜರಾತಿನ ಹಿರಿಯ ಕಾಂಗ್ರೆಸ್ ನಾಯಕನೊಬ್ಬ ತನಗೆ
ಹಲವು ಆಮಿಷಗಳನ್ನು ಒಡ್ಡಿ ಅಂದಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದಂಥ ನರೇಂದ್ರ ಮೋದಿಯವರ ಹೆಸರಿಗೆ ಮಸಿಬಳಿದು, ಇಲ್ಲ ಸಲ್ಲದ ಆರೋಪವನ್ನು ಅವರ ಮೇಲೆ ಹೊರಿಸಲು ಹೇಳಿದ್ದರೆಂದು ಹೇಳಿದರು.
ಆ ನಾಯಕ ಯಾರೆಂದು ನಾನು ಬಾಯಿಬಿಟ್ಟು ಹೇಳ ಬೇಕಿಲ್ಲ, ಈಗಾಗಲೇ ನಿಮಗೆ ಆ ನಾಯಕನ ಊಹೆಯಾಗಿರಬಹುದು.
ಇಶ್ರತ್ ಜಹಾನ್ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಜೈಲು ಸೇರಿ, ಸೆರೆಮನೆ ವಾಸವನ್ನು ಅನುಭವಿಸಬೇಕಾಯಿತು. ಪೊಲೀಸರ ವರದಿಯಿಂದ ಶುರುವಾದಂಥ ಎನ್ಕೌಂಟರ್ ಕೇಸ್, ಮ್ಯಾಜಿಸ್ಟ್ರೇಟ್ ತನಿಖೆ, ವಿಶೇಷ ತನಿಖಾ ದಳ, ‘ಸಿ.ಬಿ.ಐ’ ಅಂಗಳಕ್ಕೆ ತಲುಪಿ ವಿವಿಧ ಆಯಾಮಗಳನ್ನು ಪಡೆದುಕೊಂಡಿತು.
ಪ್ರತಿಯೊಂದು ತನಿಖೆಯಲ್ಲೂ ರಾಜಕೀಯದ ವಾಸನೆ ಎದ್ದು ಕಾಣುತ್ತಿತ್ತು, ಪ್ರತಿಯೊಂದು ತನಿಖೆಯಲ್ಲೂ ಎನ್ಕೌಂಟರಿನಲ್ಲಿ ಸತ್ತಂಥ ನಾಲ್ಕು ಜನರು ‘ನರೇಂದ್ರ ಮೋದಿ’ ಹಾಗೂ ‘ಅಡ್ವಾಣಿ’ ಯವರನ್ನು ಕೊಲ್ಲಲು ಮುಂಬೈನಿಂದ ಅಹ್ಮದಾಬಾದಿಗೆ
ಬಂದಿzರೆಂಬುದು ಸಾಬೀತಾಗಿತ್ತು. ಕಳೆದ ವಾರದವರೆಗೂ ನಡೆದ ೧೭ ವರ್ಷಗಳ ಸುದೀರ್ಘ ತನಿಖೆಯ ನಂತರ ‘ಸಿ.ಬಿ.ಐ’ ವಿಶೇಷ ನ್ಯಾಯಾಲಯವು, ಅಹಮದಾಬಾದ್ ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದಾರೆಂದು ತೀರ್ಪು ನೀಡುವ ಮೂಲಕ ಎಲ್ಲರಿಗೂ ಕ್ಲೀನ್ ಚಿಟ್ ನೀಡಿತು.
ಇದರಿಂದ ೨೦೦೪ರಲ್ಲಿ ನಡೆದದ್ದು ‘ಅಸಲಿ ಎನ್ಕೌಂಟರ್ ಎಂಬುದು ಸಾಬೀತಾಗಿತ್ತು. ನಾವು ಮಾಡುವ ಕೆಲಸ ಸಂಪೂರ್ಣ ವಾಗಿ ನಮ್ಮ ಮನೆಯವರಿಗೆ ಹೇಗೆ ತಾನೇ ತಿಳಿದಿರುತ್ತದೆ? ‘ಸಿ.ಡಿ. ಕೇಸಿನಲ್ಲಿ ‘ಲೇಡಿ’ ಮಾಡುವ ಕೆಲಸ ಆಕೆಯ ಪೋಷಕರಿಗೆ ತಿಳಿಯಬೇಕೆಂದಿಲ್ಲ, ಅವರಿಗೆ ಇಂದಿಗೂ ತಮ್ಮ ಮಗಳು ಅಮಾಯಕಿಯಂತೆಯೇ ಕಾಣಿಸುತ್ತಾಳೆ. ಹೆತ್ತವರಿಗೆ ಹೆಗ್ಗಣ ಮುzಂಬಂತೆ ಇಶ್ರತ್ ಜಹಾನ್ಳ ತಾಯಿಗೂ ಅಷ್ಟೇ ತನ್ನ ಮಗಳು ಅಮಾಯಕಳಂತೆಯೇ ಕಾಣಿಸುತ್ತಾಳೆ.
ಆಕೆಗೆ ತನ್ನ ೧೯ ವರ್ಷದ ಮಗಳ ಉಗ್ರರ ನಂಟಿನ ಬಗ್ಗೆ ಅರಿವಿರಬೇಕೆಂದಿಲ್ಲ, ನಂಟಿರುವ ಹಲವು ಉಗ್ರರು ತಮ್ಮ ಮನೆಯಲ್ಲಿ ಹೇಳಿಕೊಂಡಿರುವುದಿಲ್ಲ. ಆದರೆ ತೀರ್ಪು ಬಂದ ನಂತರ ತನ್ನ ರಾಜಕೀಯ ದ್ವೇಷಕ್ಕಾಗಿ ೨೦೦೪ರಲ್ಲಿ ಭಯೋತ್ಪಾದಕಿಯನ್ನು ಹುತಾತ್ಮಳೆಂದು ಕರೆದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಈಗ ತಮ್ಮ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಕುಳಿತಿವೆ.