ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರವಾಹಿ (Seetha Rama Serial) ಅದ್ಭುತವಾಗಿ ಮೂಡಿ ಬರುತ್ತಿದೆ. ಇದೇ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದರೂ ಸೀತಾ ರಾಮ ಸೀರಿಯಲ್ಗೆ ಯಾವುದೇ ಹೊಡೆತ ಬಿದ್ದಿಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೀತಾ ರಾಮ ಧಾರಾವಾಹಿಯ ಮುಂದಿನ ಏಪಿಸೋಡ್‌ಗಳು ಹೇಗಿರಬಹುದು ಎಂಬ ಕುತೂಹಲಕ್ಕೆ ಪ್ರೋಮೋಗಳ ಮೂಲಕ ಉತ್ತರ ನೀಡುತ್ತಿದೆ.
ಸದ್ಯ ಸೀತಾ ರಾಮದಲ್ಲಿ ಸಿಹಿಯ ಅಂತ್ಯವಾಗಿದೆ. ಆದರೆ, ಕಾಣದ ರೂಪದಲ್ಲಿ ಎಲ್ಲರ ಜೊತೆಗೇ ಇದ್ದಾಳೆ. ಅಂದರೆ ಸಿಹಿ ಈಗ ಆತ್ಮವಾಗಿ ಮಾತ್ರ ಇದ್ದಾಳೆ. ಸಿಹಿಯ ಆತ್ಮ ಸುಬ್ಬಿಗೆ ಮಾತ್ರ ಕಾಣಿಸುತ್ತದೆ. ಅತ್ತ ಕೋಮಾಕ್ಕೆ ಹೋಗಿದ್ದ ಸೀತಾ ಎಚ್ಚರವಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾಳೆ. ಆದರೆ, ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸಿಹಿಯ ನೆನಪಲ್ಲೇ ಗೊಂಬೆಯನ್ನು ಹಿಡಿದುಕೊಂಡು ಕಾಲ ಕಳೆಯುತ್ತಿದ್ದಾರೆ.
ಅತ್ತ ರಾಮ್ಗೆ ಸೀತಾಳ ಸ್ಥಿತಿಯನ್ನು ನೋಡಲಾಗುತ್ತಿಲ್ಲ. ಒಂದು ಕಡೆ ಮಗಳ ಸಾವಿನ ನೋವಿನಿಂದ ಹೊರಕ್ಕೆ ಬರಲಾಗದ ಸ್ಥಿತಿಯಲ್ಲಿ ರಾಮ್ ಇದ್ದರೆ ಮತ್ತೊಂದೆಡೆ ಸೀತಾಳ ಸ್ತೀತಿ ಕಂಡು ಕಣ್ಣೀರಿಡುತ್ತಿದ್ದಾನೆ. ಸೀತಾ ಗೊಂಬೆಯನ್ನು ತಬ್ಬಿಕೊಂಡು ನಿದ್ದೆ ಮಾಡು ಎಂದು ತಟ್ಟುತ್ತಾ ಇರುತ್ತಾಳೆ. ಆಗ ಸೀತಾ, ರಾಮ್ ಬಳಿ ನೋಡು ನಿಮ್ಮ ಮಗಳು ಹೇಗೆ ಮಲಗಿದ್ದಾಳಂತ ಎಂದು ಹೇಳುತ್ತಾಳೆ. ಇದಕ್ಕೆ ರಾಮ್ ನೀವೂ ಆರಾಮಾಗಿ ಮಲಗಿ, ನಿಮ್ಗೂ ರೆಸ್ಟ್ ಬೇಕಲ್ಲ ಎಂದು ಹೇಳುತ್ತಾನೆ. ಯಾವಾಗಲು ರೆಸ್ಟ್, ರೆಸ್ಟ್ ಅಂತೀರಾ ನನಗೆ ಏನಾಗಿದೆ, ನಾನು ಹುಷಾರಿಗಿದ್ದೇನೆ ಎನ್ನುತ್ತಾಳೆ ಸೀತಾ.
ಸೀತಾಳನ್ನು ಮಲಗಿಸಲು ರಾಮ್, ನಿಮ್ಗೂ ಆಕ್ಸಿಡೆಂಟ್ ಆಗಿತ್ತಲ್ವಾ, ತಲೆಗೆ ಜೋರಾಗಿ ಪೆಟ್ಟಾಗಿದೆ. ಕೇರ್ಫುಲ್ ಆಗಿರುವುದು ಒಳ್ಳೆಯದಲ್ವಾ ಎನ್ನುತ್ತಾನೆ. ಆದರೆ, ಇದನ್ನು ತಲೆಗೆ ಹಾಕಿಕೊಳ್ಳದ ಸೀತಾ, ನೀವು ಮಲಗಿ, ನಿಮಗೆ ರೆಸ್ಟ್ ಬೇಕು ಎಂದು ಹೇಳಿ ಗೊಂಬೆಯನ್ನು ಪುನಃ ತಟ್ಟುತ್ತಾಳೆ. ಇದನ್ನು ಕಂಡು ಬೇಜಾರಾದ ರಾಮ್, ನೀವು ಯಾವಾಗ ಸರಿ ಹೋಗ್ತೀರಾ ಸೀತಾ ಎಂದು ನೆನೆದು ಅಳುತ್ತಾನೆ.
ಅತ್ತ ಸುಬ್ಬಿ ಮನಸ್ಸು ಅಮ್ಮನಿಗಾಗಿ ಹಂಬಲಿಸಲು ಶುರುಮಾಡಿದೆ. ಕದ್ದ ಪರ್ಸ್ ಒಂದಲ್ಲಿ ಒಂದು ತಾಯಿ ಮಗಳು ತಬ್ಬಿಕೊಂಡಿರುವ ಫೋಟೋ ಇರುತ್ತದೆ. ಇದನ್ನು ನೋಡಿ ನನ್ನ ಅಮ್ಮನೂ ನನ್ನ ಜೊತೆ ಹೀಗೆ ಇದ್ರೆ ಎಂದು ನೆನೆದು ಬೇಸವಾಗುತ್ತಾಳೆ. ನನಗೆ ಸ್ಟ್ರಾಂಗಿ ಅನಿಸ್ತಿದೆ ನನ್ನ ಅಮ್ಮ ಇದ್ದಾಳೆ ಅಂತ ಎಂದು ಸುಬ್ಬಿ ಹೇಳುತ್ತಾಳೆ. ಸದ್ಯ ಸುಬ್ಬಿ ಹಾಗು ಸೀತಾ ಭೇಟಿ ಯಾವಾಗ ಆಗುತ್ತೆ ಎಂದು ನೋಡಲು ವೀಕ್ಷಕರು ಕಾದು ಕುಳಿತಿದ್ದಾರೆ.
BBK 11: ಕ್ಯಾಪ್ಟನ್ ಆಗುವ ಕನಸು ನನಸಾದರೂ ಅನುಭವಿಸಲಾಗದೆ ಬಿಗ್ ಬಾಸ್ ತೊರೆದ ಗೋಲ್ಡ್ ಸುರೇಶ್