ಮನರಂಜನೆಗೆ ಮತ್ತೊಂದು ಹೆಸರೇ Zee ಕನ್ನಡ. ಜನಪ್ರಿಯ ಧಾರಾವಾಹಿಗಳಿಂದ ಈಗಾಗಲೇ ಮನೆ ಮಾತಾಗಿರುವ Zee ಕನ್ನಡ, ವಾರವಿಡೀ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ನಿಮ್ಮ ನೆಚ್ಚಿನ ಧಾರಾವಾಹಿಗಳ ಮೂಲಕ ನಿಮಗೆ ಒಂದು ಗಂಟೆಗಳ ಮಹಾಸಂಚಿಕೆಯ ಮೆರವಣಿಗೆ ನೀಡಲು ಸಜ್ಜಾಗಿದೆ.
ಸೋಮವಾರ ಸಂಜೆ 6:30 ರಿಂದ 7:30ಕ್ಕೆ ಪುಟ್ಟಕ್ಕನ ಮಕ್ಕಳು, ಮಂಗಳವಾರ ಸಂಜೆ 7 ರಿಂದ 8 ಗಂಟೆಯವರೆಗೆ ಅಮೃತಧಾರೆ, ಬುಧವಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಲಕ್ಷ್ಮಿ ನಿವಾಸ, ಗುರುವಾರ ರಾತ್ರಿ 9 ರಿಂದ 10 ಗಂಟೆಯವರೆಗೆ ಶ್ರಾವಣಿ ಸುಬ್ರಮಣ್ಯ, ಶುಕ್ರವಾರ ರಾತ್ರಿ 10 ರಿಂದ 11 ಗಂಟೆಯವರೆಗೆ ಬ್ರಹ್ಮಗಂಟು ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ನಿಮಗೆ ಒಂದು ಗಂಟೆಯ ಮಹಾ ಮನರಂಜನೆ ನೀಡಲಿವೆ.
ಶುರುವಾಗಿದೆ ಸರಿಗಮಪ:
ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಸರಿಗಮಪ. Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬಂದಿದೆ. ಈ ಸೀಸನ್ನಲ್ಲಿ 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿದ್ದು ಸ್ಪರ್ಧೆಯು ಮತ್ತಷ್ಟು ಇಂಟೆರೆಸ್ಟಿಂಗ್ ಆಗಿದೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಂಡಿರುವುದು ಈ ಆವೃತ್ತಿಯ ಮತ್ತೊಂದು ಹೈಲೈಟ್ ಆಗಿದೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಈ ಸೀಸನ್ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈ ಶೋನಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಿರದೇ ಅವರ ಸ್ಪೂರ್ತಿದಾಯಕ ಕಥೆಗಳು ಕೂಡ ನಿಮನ್ನು ಮತ್ತಷ್ಟು ಪ್ರೇರೇಪಿಸಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಈ ಬಾರಿ ವೀಕ್ಷಕರು Zee ಕನ್ನಡ ಸರಿಗಮಪ ಇನ್ಸ್ಟಾಗ್ರಾಮ್ ಅಧಿಕೃತ ಪೇಜ್ನಲ್ಲಿ ಪೋಸ್ಟ್ ಮಾಡುವ ಆಡಿಷನ್ ವಿಡಿಯೋಗಳನ್ನು ಲೈಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆಮಾಡಿದ್ದಾರೆ ಮತ್ತು ಅತೀ ಹೆಚ್ಚು ಲೈಕ್ ಗಳಿಸಿರುವ ಸ್ಪರ್ಧಿಗಳು ಮೆಗಾ ಆಡಿಷನ್ಗೆ ಬಡ್ತಿ ಪಡೆದಿದ್ದಾರೆ.
BBK 11: ಬಿಗ್ ಬಾಸ್ನಲ್ಲಿ ಬಿಗ್ ಟ್ವಿಸ್ಟ್: ಒಂದೇ ದಿನ ಮನೆಯಿಂದ ಹೊರಬಂದ ಇಬ್ಬರು ಸ್ಪರ್ಧಿಗಳು