ಅಂಕ್ಲೆೆಂಡ್:
ಇಂಗ್ಲೆೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್‌ಟ್ ಪಂದ್ಯದ ಐದನೇ ಹಾಗೂ ಕೊನೆಯ ದಿನ ಜನಾಂಗೀಯ ನಿಂದನೆಗೆ ಒಳಗಾಗಿದ್ದ ವೇಗಿ ಜೊಫ್ರಾಾ ಆರ್ಚರ್ ಅವರ ಬಳಿ ಕಿವೀಸ್ ನಾಯಕ ಕೇನ್ ವಿಲಿಮ್ಸನ್ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ನಿಂದನೆಗೆ ಒಳಗಾದ ಬಗ್ಗೆೆ ಆರ್ಚರ್ ಟ್ವೀಟ್ ಮಾಡುವ ತನಕ ನಮಗೆ ತಿಳಿದಿರಲಿಲ್ಲ. ಇನ್ನೂ ಮುಂದೆ ಇದು ಮರುಕಳಿಸುವುದಿಲ್ಲ. ಈ ಘಟನೆ ಬಗ್ಗೆೆ ನಾನು ವೈಯಕ್ತಿಿಕವಾಗಿ ಕ್ಷಮೆ ಕೋರುತ್ತೇನೆ ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
ಇದು ಭಯಾನಕ ಸಂಗತಿ. ನಮ್ಮ ದೇಶ ಬಹುಸಂಸ್ಕೃತಿಯ ರಾಷ್ಟ್ರ. ಇನ್ನೂ ಮುಂದೆ ಈ ರೀತಿಯ ಘಟನೆ ಮರುಕಳಿಸುವುದಿಲ್ಲ. ಈ ಬಗ್ಗೆೆ ಹೆಚ್ಚಿಿನ ಪ್ರಭಾವ ಬೀರಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಪಂದ್ಯದ ವೇಳೆ ಫೀಲ್ಡಿಿಂಗ್ ಮಾಡುತ್ತಿಿದ್ದ ಜೊಫ್ರಾಾ ಆರ್ಚರ್ ಅವರ ಮೇಲೆ ಕಿಕ್ಕಿಿರಿದು ಸೇರಿದ್ದ ಜನಸಂದಣೆಯಿಂದ ಒಬ್ಬ ವ್ಯಕ್ತಿ ಜನಾಂಗೀಯ ನಿಂದನೆ ಮಾಡಿದ್ದರು. ತಕ್ಷಣ ಅಂಗಳ ತೊರೆದ ಆರ್ಚರ್, ತಂಡದ ಭದ್ರತಾ ಸಿಬ್ಬಂದಿಗೆ ಈ ಬಗ್ಗೆೆ ತಿಳಿಸಿದ್ದರು.
ಪಂದ್ಯದ ಬಳಿಕ ಜೊಫ್ರಾಾ ಆರ್ಚರ್ ತನ್ನ ಅಧಿಕೃತ ಟ್ವಿಿಟರ್ ಖಾತೆಯಲ್ಲಿ, ಇಂದು ಪಂದ್ಯದ ವೇಳೆ ಜನಾಂಗೀಯ ನಿಂದನೆ ಅನುಭವಿಸಿದ್ದೇನೆ. ಇದರಿಂದ ಸ್ವಲ್ಪ ತೊಂದರೆಗೆ ಒಳಗಾದೆ. ಇದರಿಂದ ನಮ್ಮ ತಂಡವನ್ನು ಉಳಿಸಿ ಎಂದು ಆಗ್ರಹಿಸಿದ್ದರು.
ಇದರ ಬೆನ್ನಲ್ಲೆ ನ್ಯೂಜಿಲೆಂಡ್ ಕ್ರಿಿಕೆಟ್ ಕೂಡ ಟ್ವೀಟ್ ಮಾಡಿ, ಆರ್ಚರ್ ವಿರುದ್ಧ ಕೇಳಿಬಂದಿರುವ ಜನಾಂಗೀಯ ನಿಂದನೆಗೆ ತಾವು ಕ್ಷಮೆಯಾಚಿಸುತ್ತೇವೆ. ಇದು ಪುನರಾವರ್ತನೆಯಾದರೆ, ಪೊಲೀಸ್ ಮೂಲಕ ಶಿಸ್ತುಬದ್ಧ ಕ್ರಮ ಜರುಗಿಸುವುದು ಎಂದು ಹೇಳಿತ್ತು.
ಆರ್ಚರ್ ಮೇಲೆ ನಿಂದನೆ ಮಾಡಿದ ವ್ಯಕ್ತಿಿಯನ್ನು ಮೊದಲು ಪತ್ತೆೆ ಹಚ್ಚಬೇಕು. ಇದು ಪ್ರಥಮ ಕೆಲಸವಾಬೇಕು. ಎಡರನೇಯದಾಗಿ ನನ್ನ ವೈಯಕ್ತಿಿಕ ಸಲಹೆ ಏನೆಂದರೆ, ಅವರು ಎಸಗಿದ ಕೃತ್ಯಕ್ಕೆೆ ಜೀವನವೀಡಿ ಕ್ರೀಡಾಂಗಣಕ್ಕೆೆ ಬಾರದೆ ಅಂತಾರಾಷ್ಟ್ರೀಯ ಪಂದ್ಯ ವೀಕ್ಷಿಸದಂತೆ ಅಮಾನತು ಶಿಕ್ಷೆ ವಿಧಿಸಬೇಕು.
–ಡೇವಿಡ್ ವೈಟ್, ನ್ಯೂಜಿಲೆಂಡ್ ತಂಡದ ಸಿಇಓ