ಮುಂಬೈ:
ಸತತ ಗಾಯದ ಸಮಸ್ಯೆೆಗಳಿಂದ ಕಂಗಾಲಾಗಿದ್ದ ಭಾರತ ತಂಡದ ಸ್ಟಾಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಮರಳಿ ಅಭ್ಯಾಾಸ ಆರಂಭಿಸಿದ್ದು, ಟೀಮ್ ಇಂಡಿಯಾಗೆ ಮರಳುವ ಹಾದಿಯಲ್ಲಿದ್ದಾರೆ.
ಬೆನ್ನು ನೋವಿನ ಸಮಸ್ಯೆೆಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆೆ ಪಡೆದುಕೊಂಡಿರುವ ಪಾಂಡ್ಯ, ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಧಿಕೃತ ಖಾತೆಯಲ್ಲಿ ಓಟ ಮತ್ತು ವಿವಿಧ ವ್ಯಾಾಯಾಮಗಳನ್ನು ಆರಂಭಿಸಿರುವ ವಿಡಿಯೋ ಪ್ರಕಟಿಸಿದ್ದು, ಶೀಘ್ರದಲ್ಲೇ ಭಾರತ ತಂಡಕ್ಕೆೆ ಮರಳುವ ಸೂಚನೆ ನೀಡಿದ್ದಾರೆ.
ಕಳೆದ ಅಕ್ಟೋೋಬರ್ನಲ್ಲಿ ಶಸ್ತ್ರಚಿಕಿತ್ಸೆೆಗೆ ಒಳಪಟ್ಟ ಬಳಿಕ ನಡೆಯಲು ಕೂಡ ಕಷ್ಟಪಡುತ್ತಿಿದ್ದ ಹಾಗೂ ಬೇರೆಯವರ ಸಹಾಯ ಪಡೆದು ನಿಧಾನವಾಗಿ ನಡೆಯಲು ಪ್ರಯತ್ನಿಿಸುತ್ತಿಿದ್ದ ವಿಡಿಯೋವೊಂದನ್ನು ಪಾಂಡ್ಯ ಈ ಹಿಂದೆ ಹಂಚಿಕೊಂಡಿದ್ದರು. ಆದರೀಗ ಸಂಪೂರ್ಣ ಚೇತರಿಸಿದಂತಿದ್ದು, ಉತ್ತಮ ರೀತಿಯಲ್ಲಿ ಓಡಾಡುತ್ತಿಿರುವುದು ನೂತನ ವೀಡಿಯೋದಲ್ಲಿ ಸ್ಪಷ್ಟವಾಗಿದೆ.
ಅಂಗಣಕ್ಕೆೆ ಮರಳಿರುವುದು ಉತ್ತಮ ಅನುಭವ ತಂದುಕೊಟ್ಟಿಿದೆ ಎಂದು ಹಾರ್ದಿಕ್ ತಮ್ಮ ವಿಡಿಯೋ ಜೊತೆಗೆ ಸಂದೇಶವೊಂದನ್ನು ಅಭಿಮಾನಿಗಳಿಗೆ ರವಾನಿಸಿದ್ದಾರೆ.