ನವದೆಹಲಿ : ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶವನ್ನ ಎದುರಿಸುತ್ತಿದೆ.
ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 9ನೇ ಓವರಿನಲ್ಲಿ ಗಾಯಗೊಂಡಿದ್ದು, ವಿರಾಟ್ ಕೊಹ್ಲಿ ಉಳಿದ ಮೂರು ಬೌಲುಗಳನ್ನ ಎಸೆದರು.
ಲಿಟನ್ ದಾಸ್ ಬಲವಾಗಿ ಆಡಿದ್ದು, ಹಾರ್ದಿಕ್ ತನ್ನ ಬಲಗಾಲಿನಿಂದ ಅದನ್ನ ತಡೆಯಲು ಪ್ರಯತ್ನಿಸಿದರು. ಬಳಿಕ ಅವರಿಂದ ಆಟ ಮುಂದುವರಿಯಲು ಸಾಧ್ಯವಾಗಲಿಲ್ಲ. ಉಳಿದ ಓವರ್ ಕೊಹ್ಲಿ ಬೌಲಿಂಗ್ ಮಾಡಿದರು. ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯನ್ನ ಅವರ ಅಪರೂಪದ ಬೌಲಿಂಗ್ ಅವತಾರದಲ್ಲಿ ನೋಡಲು ಒಂದು ಅವಕಾಶವಾಯಿತು.