Wednesday, 11th December 2024

ಡೆಲ್ಲಿಗೆ ತಿಳಿಯುವುದೇ ಬುಲ್ಸ್

ಪ್ರೊ ಕಬಡ್ಡಿ ಮೊದಲ : ಇಂದು ಬೆಂಗಳೂರು ಬುಲ್‌ಸ್‌-ದಬಾಂಗ್ ಡೆಲ್ಲಿ ಕಾದಾಟ ಪವನ್ ಮೇಲೆ ಎಲ್ಲರ ಚಿತ್ತ

 

ಅಹಮದಾಬಾದ್:
ಏಳನೇ ಆವೃತ್ತಿಿಯ ಪ್ರೊೊ ಕಬಡ್ಡಿಿ ಎಲಿಮಿನೇಟರ್-1ರ ಪಂದ್ಯದಲ್ಲಿ ಯು.ಪಿ ಯೋಧಾ ವಿರುದ್ಧ ರೋಚಕ ಜಯ ಸಾಧಿಸಿದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್‌ಸ್‌ ತಂಡ ಇಂದು ಸೆಮಿಫೈನಲ್ ಹಣಾಹಣಿಯಲ್ಲಿ ಅಂಕಪಟ್ಟಿಿಯಲ್ಲಿ ಅಗ್ರ ಸ್ಥಾಾನದಲ್ಲಿರುವ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಲು ಸಿದ್ಧವಾಗಿದೆ. ಮದಗಜಗಳ ಕಠಿಣ ಹೋರಾಟಕ್ಕೆೆ ಇಲ್ಲಿನ ಇಕೆಎ ಅರೇನಾ ಟ್ರಾಾನ್‌ಸ್‌ ಸ್ಟೇಡಿಯಾ ಅಂಗಳದಲ್ಲಿ ಸಜ್ಜಾಾಗಿದೆ.

ಪ್ರಸಕ್ತ ಆವೃತ್ತಿಿಯ ಮೊದಲ ಮುಖಾಮುಖಿಯಲ್ಲಿ ದಬಾಂಗ್ ಡೆಲ್ಲಿ 33-31 ಅಂತರದಲ್ಲಿ ಬುಲ್‌ಸ್‌ ತಂಡವನ್ನು ಮಣಿಸಿತ್ತು. ನಂತರದ ಹಣಾಹಣಿಯಲ್ಲಿ 39-39 ಅಂತರದಲ್ಲಿ ಪಂದ್ಯ ಟೈ ಆಗಿತ್ತು.

ಹಾಲಿ ಚಾಂಪಿಯನ್ ಬೆಂಗಳೂರು ಬುಲ್‌ಸ್‌ ತಂಡ ಸೋಮವಾರದ ಎಲಿಮಿನೇಟರ್-1ರ ಪಂದ್ಯದಲ್ಲಿ ಯು.ಪಿ ಯೋಧಾ ವಿರುದ್ಧ 48-45 ಅಂತರದಲ್ಲಿ ರೋಚಕ ಜಯ ಸಾಧಿಸಿ ಅಂತಿಮ ನಾಲ್ಕರ ಘಟ್ಟಕ್ಕೆೆ ಲಗ್ಗೆೆ ಇಟ್ಟಿಿತ್ತು. ಪಂದ್ಯದ ನಿಗದಿತ ಅವಧಿ ಮುಕ್ತಾಾಯಕ್ಕೆೆ ಉಭಯ ತಂಡಗಳು 36-36 ಸಮಬಲ ಸಾಧಿಸಿತ್ತು. ಸಿಕ್ಕ ಹೆಚ್ಚುವರಿ ಸಮಯದಲ್ಲಿ ಪವನ್ ಕುಮಾರ್ ಸೆಹ್ರಾಾವತ್ ಅವರು ನಡೆಸಿದ ಎರಡು ರೈಡ್‌ಗಳಲ್ಲಿ ಪಂದ್ಯದ ದಿಕ್ಕು ಬದಲಾಯಿತು. ಇದರ ಫಲವಾಗಿ ಬೆಂಗಳೂರು ಬುಲ್‌ಸ್‌ ತಂಡ ಯು.ಪಿ ಯೋಧಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿತ್ತು.

ಪವನ್ ಸೆಹ್ರಾಾವತ್ ಪ್ರಮುಖ ಆಕರ್ಷಣೆ:

ಇಂದು ನಡೆಯುವ ಮೊದಲನೇ ಸೆಮಿಫೈನಲ್ ಹಣಾಹಣಿಯಲ್ಲಿ ಕಬಡ್ಡಿಿ ಅಭಿಮಾನಿಗಳು ಇಬ್ಬರು ಅತ್ಯುತ್ತಮ ರೈಡರ್‌ಗಳ ಆಟವನ್ನು ಕಣ್ತುಂಬಿಕೊಳ್ಳುವ ತವಕದಲ್ಲಿದ್ದಾಾರೆ. ಬೆಂಗಳೂರು ಬುಲ್‌ಸ್‌ ಪರ ಪವನ್ ಕುಮಾರ್ ಹಾಗೂ ಡೆಲ್ಲಿ ದಬಾಂಗ್ ನವೀನ್ ಕುಮಾರ್ ಅವರು ಪಂದ್ಯದ ಪ್ರಮುಖ ಆಕರ್ಷಣೆಯಾಗಿದೆ.

ಟೂರ್ನಿಯುದ್ದಕ್ಕೂ ಪವನ್ ಸೆಹ್ರಾಾವತ್ ಅದ್ಭುತ ಪ್ರದರ್ಶನ ತೋರುತ್ತಾಾ ಬಂದಿದ್ದಾಾರೆ. ಅದರಲ್ಲೂ, ಸೋಮವಾರ ಯು.ಪಿ ಯೋಧಾ ವಿರುದ್ಧ ಸೋಲುವ ಪಂದ್ಯವನ್ನು ತಮ್ಮ ಚುರುಕಾದ ರೈಡಿಂಗ್‌ನಿಂದ ಬುಲ್‌ಸ್‌ ತಂಡವನ್ನು ಉಪಾಂತ್ಯಕ್ಕೆೆ ತಲುಪಿಸುವಲ್ಲಿ ಶ್ರಮಿಸಿದ್ದರು. ಈ ಪಂದ್ಯದಲ್ಲಿ ಅವರು ಒಟ್ಟು 20 ರೈಡ್ ಅಂಕಗಳನ್ನು ಕಲೆಹಾಕಿದ್ದರು. ಮೊದಲನೇ ಅವಧಿಯಲ್ಲಿ ಪವನ್ ರೈಡ್ ನಲ್ಲಿ ಎಡವಿದ್ದರು. ಆದರೆ, ಎರಡನೇ ಅವಧಿಯಲ್ಲಿ ಸುಮಿತ್ ಸಿಂಗ್ ಏಳು ರೈಡ್ ಕಲೆ ಹಾಕುವ ಮೂಲಕ ತಂಡಕ್ಕೆೆ ಆಸರೆಯಾಗಿದ್ದರು.

ಮತ್ತೊೊಂದೆಡೆ ಡೆಲ್ಲಿ ದಬಾಂಗ್ ಡೆಲ್ಲಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಿಯಾಗಿರುವ ನವೀನ್ ಕುಮಾರ್ ಅವರು ತಂಡದ ಪ್ರಮುಖ ಆಧಾರ ಸ್ಥಂಭವಾಗಿದ್ದಾಾರೆ. ಮೊಟ್ಟ ಮೊದಲ ಬಾರಿ ದಬಾಂಗ್ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿಿರುವ ನವೀನ್ ಸೆಮಿಫೈನಲ್‌ಗೆ ತಲುಪಿಸುವಲ್ಲಿ ಸಫಲರಾಗಿದ್ದಾಾರೆ. ಇವರ ಜತೆ, ಚಂದ್ರನ್ ರಂಜಿತ್ ಹಾಗೂ ವಿಜಯ್ ಅವರು ಕೂಡ ತಂಡದ ಪ್ರಮುಖ ಆಟಗಾರರಾಗಿದ್ದಾಾರೆ. ಚಂದ್ರನ್ 110 ಹಾಗೂ ವಿಜಯ್ 43 ರೈಡ್ ಪಾಂಯಿಂಟ್‌ಗಳನ್ನುಇದುವರೆಗೂ ಹಾಕಿದ್ದಾಾರೆ.

ಡಿಫೆಂಡಿಂಗ್‌ನಲ್ಲಿ ಬುಲ್‌ಸ್‌ ವೀಕ್:
ಕಳೆದ ಪಂದ್ಯದಲ್ಲಿ ಬೆಂಗಳೂರು ಬುಲ್‌ಸ್‌ ತಂಡ ಯುಪಿ ಯೋಧಾ ವಿರುದ್ಧ ಕೇವಲ ಒಂಬತ್ತು ಟ್ಯಾಾಕ್ಲಿಿಂಗ್ ಅಂಕ ಕಲೆ ಹಾಕಿತ್ತು. ಮಹೇಂದ್ರ ಸಿಂಗ್ ಮಾತ್ರ ನಾಲ್ಕು ಟ್ಯಾಾಕ್ಲಿಿಂಗ್ ಅಂಕ ಗಳಿಸಿದ್ದರು. ಲೀಗ್‌ನಲ್ಲೇ ಅತಿ ಕಡಿಮೆ ಅಂಕಗಳಿಸಿದ ನಾಲ್ಕನೇ ತಂಡವಾಗಿದೆ. ಕಾರ್ನರ್‌ನಲ್ಲಿ ನಿತೀಶ್ ಕುಮಾರ್ ಸುಮಿತ್ ನಿರ್ವಹಣೆ ತೋರಿದ್ದರು.

ಟ್ಯಾಾಕ್ಲಿಿಂಗ್ ಕಿಂಗ್ ಜೋಗಿಂದರ್:

ದಬಾಂಗ್ ಡೆಲ್ಲಿ ತಂಡ ಡಿಫೆಂಡಿಂಗ್ ವಿಭಾಗ ಅತ್ಯುತ್ತವಾಗಿದೆ. ರವೀಂದ್ರ ಅತ್ಯುತ್ತಮ ಪ್ರದರ್ಶನ ತೋರಿದ್ದಾಾರೆ. ಡೆಲ್ಲಿ ಒಟ್ಟಾಾರೆ, 21 ಪಂದ್ಯಗಳಿಂದ 59 ಟ್ಯಾಾಕ್ಲಿಿಂಗ್ ಅಂಕ ಗಳಿಸಿ ಅಗ್ರ ಸ್ಥಾಾನದಲ್ಲಿದೆ. ಬಲ ಕಾರ್ನರ್‌ನಲ್ಲಿ ಜೋಗಿಂದರ್ ಸಿಂಗ್ ನರ್ವಾಲ್ ಅತ್ಯುತ್ತಮ ನಿರ್ವಹಣೆ ತೋರಿದ್ದಾಾರೆ. ಇವರು ಒಟ್ಟು 46 ಟ್ಯಾಾಕ್ಲಿಿಂಗ್ ಪಾಯಿಂಟ್ ಪಡೆದಿದ್ದಾಾರೆ.

 

 

 

                                      ಸಮಯ: ಇಂದು ಸಂಜೆ 07:30
                                   ಸ್ಥಳ: ಇಕೆಎ ಅರೇನಾ , ಅಹಮದಾಬಾದ್