ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ (112) ಹಾಗೂ ರವೀಂದ್ರ ಜಡೇಜ ಅರ್ಧಶತಕದ (57) ಬೆಂಬಲ ದೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 115.1 ಓವರ್‌ಗಳಲ್ಲಿ 326 ರನ್‌ಗಳಿಗೆ ಆಲೌಟಾಗಿದೆ.
ಉತ್ತರವಾಗಿ ದ್ವಿತೀಯ ಇನ್ನಿಂಗ್ ಆಟ ಆರಂಭಿಸಿದ ಆಸೀಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಈ ಬಾರಿ ವೇಗಿ ಉಮೇಶ್ ಯಾದವ್ ಆರಂಭಿಕ ಆಘಾತ ನೀಡಿದರು. ಅವರು ಆರಂಭಿಕ ಆಟಗಾರ ಜೋ ಅವರನ್ನು ನಾಲ್ಕು ರನ್ ಗೆ ಪೆವಿಲಿಯನ್‌ಗೆ ಅಟ್ಟಿದರು. ಪ್ರವಾಸಿಗರನ್ನು ಮರಳಿ ಬ್ಯಾಟಿಂಗಿಗೆ ಇಳಿಸಲು ಆಸೀಸ್ ಇನ್ನು 113 ರನ್ ಗಳಿಸಬೇಕಿದೆ.
ಈ ಮೂಲಕ 131 ರನ್‌ಗಳ ಮಹತ್ವದ ಮುನ್ನಡೆ ಗಳಿಸಿದೆ. ಭಾರತವು ಕೊನೆಯ ಐದು ವಿಕೆಟ್‌ಗಳನ್ನು ಕೇವಲ 32 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತು.
277ಕ್ಕೆ 5 ಎಂಬಲ್ಲಿದ್ದ ಮೂರನೇ ದಿನದಾಟ ಮುಂದುವರಿಸಿದ ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜ ತಂಡದ ಮುನ್ನಡೆಯನ್ನು 100ರ ಗಡಿ ದಾಟಿಸಿದರು. ಆದರೆ ಜಡೇಜ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ರಹಾನೆ ರನೌಟ್‌ಗೆ ಬಲಿಯಾದರು.