ಚೆನ್ನೈ:
ಮುಂದಿನ 2020ರ ಐಪಿಎಲ್ ಆವೃತ್ತಿಿಯ ಜತೆಗೆ, 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್‌ಸ್ ತಂಡದಲ್ಲೇ ಬ್ಯಾಾಟ್ ಬೀಸಲಿದ್ದಾರೆ. 2021ರ ಆವೃತ್ತಿಿಯಲ್ಲೂ ಐಪಿಎಲ್ ಆಡುತ್ತೇನೆ ಎಂದು ಸ್ವತಃ ಧೋನಿಯೇ ತನ್ನ ಸಿಎಸ್ಕೆೆ ಫ್ರಾಾಂಚೈಸಿ ಮಾಲೀಕರ ಬಳಿ ಹೇಳಿದ್ದಾಾರೆ.
2020ರ ಆವೃತ್ತಿಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹರಾಜು ಪ್ರಕ್ರಿಿಯೆ ಮುನ್ನವೇ ಧೋನಿ, 2021ರ ಐಪಿಎಲ್ ಟೂರ್ನಿಯಲ್ಲಿ ಆಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಅವರು ಚುಟುಕು ಕ್ರಿಿಕೆಟ್‌ನಿಂದ ನಿವೃತ್ತಿಿ ಸದ್ಯಕ್ಕೆೆ ಘೋಷಣೆ ಇಲ್ಲ ಎಂಬುದು ಧೋನಿ ಅವರ ಮಾತಿನಿಂದ ತಿಳಿದುಬಂದಿದೆ ಎಂದು ಚೆನ್ನೈ ಫ್ರಾಾಂಚೈಸಿ ತಿಳಿಸಿದೆ.
ತಾವು ಮತ್ತೊೊಮ್ಮೆೆ ಹರಾಜಿಗೆ ಹೋಗುವ ಬಗ್ಗೆೆಯೂ ಫ್ರಾಾಂಚೈಸಿಯ ತೀರ್ಮಾನಕ್ಕೆೆ ಧೋನಿ ಅವರು ಬಿಟ್ಟಿಿದ್ದರು. ಆದರೆ, ಸಿಎಸ್‌ಕೆ ತಂಡದಲ್ಲಿ ಉಳಿಸಿಕೊಂಡಿದೆ. ಇದರಿಂದ ಅವರಿಗೆ ಕಡಿಮೆ ಮೊತ್ತ ಸಿಗಬಹುದು. ಆದರೆ, ಚೆನ್ನೈ ಸೂಪರ್ ಕಿಂಗ್‌ಸ್ ತಂಡದ ಮೇಲಿನ ಅಪಾರ ಗೌರವದಿಂದಾಗಿ ಧೋನಿ ಹಣಗಳಿಕೆಯನ್ನು ತ್ಯಾಾಗ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಧೋನಿ ಏನೆಂಬುದು ನಮಗೆ ಗೊತ್ತು. ಅವರನ್ನು ಮತ್ತೊೊಮ್ಮೆೆ ಹರಾಜಿಗೆ ಬಿಡುಗಡೆ ಮಾಡಲು ನಾವು ತಯಾರಿಲ್ಲ. ಅವರು ತಂಡದಲ್ಲಿ ಹಾಗೆಯೇ ಉಳಿಸಿಕೊಳ್ಳುತ್ತೇವೆ ಎಂದು ಸಿಎಸ್‌ಕೆ ಫ್ರಾಾಂಚೈಸಿ ತಿಳಿಸಿದೆ.
==