Thursday, 12th December 2024

ಸರಣಿಯಲ್ಲಿ ಸತತ ಎರಡನೇ ಶತಕದೊಂದಿಗೆ ಸ್ಮಿತ್‌ ಮಿಂಚು

ಸಿಡ್ನಿ: ಟೀಂ ಇಂಡಿಯಾ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್‌ ತಂಡದ ವನ್‌ಡೌನ್‌ ಆಟಗಾರ ಸ್ಟೀವನ್ ‌ಸ್ಮಿತ್‌ ಶತಕ ದಾಖಲಿಸಿದರು. ಈ ಸರಣಿಯಲ್ಲಿ ಅವರ ಎರಡನೇ ಶತಕವಾಗಿದೆ.

ಇನ್ನಿಂಗ್ಸ್‌ 41ನೇ ಓವರಿನಲ್ಲಿ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಎಸೆದ ಕೊನೆ ಎಸೆತದಲ್ಲಿ ಒಂದು ರನ್‌ ಕದಿ ಯುವ ಮೂಲಕ ಶತಕ ಪೂರೈಸಿದರು. ಆದರೆ, ಮರು ಓವರಿನಲ್ಲಿ ಹಾರ್ದಿಕ್ ಪಾಂಡ್ಯರಿಗೆ ವಿಕೆಟ್ ಒಪ್ಪಿಸಿ ದರು.

ಸ್ಮಿತ್‌ ಅವರ ಶತಕ ಕೇವಲ 64 ಎಸೆತಗಳಲ್ಲಿ ಬಂದಿತ್ತು. ಇದರಲ್ಲಿ ಎರಡು ಸಿಕ್ಸ್‌, 14 ಬೌಂಡರಿ ಒಳಗೊಂಡಿತ್ತು.

ಉಳಿದ ಏಳು ವಿಕೆಟ್ ನೆರವಿನಿಂದ ಆತಿಥೇಯ ತಂಡ ಟೀಂ ಇಂಡಿಯಾಗೆ ಬೃಹತ್‌ ಮೊತ್ತ ಸವಾಲೊಡ್ಡುವ ಸಾಧ್ಯತೆಯಿದೆ.