ಭಾರತ 2-1 ಮುನ್ನಡೆ ಸಾಧಿಸಿದ್ದು, ಇನ್ನೊಂದನ್ನು ಗೆದ್ದರೆ ಸರಣಿ ವಶಪಡಿಸಿ ಕೊಳ್ಳಲಿದೆ. ವಿಂಡೀಸ್ ಮುಂದೆ ಎರಡನ್ನೂ ಗೆಲ್ಲುವ ಒತ್ತಡವಿದೆ.
ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿಯ ಹೊರತಾಗಿಯೂ ಭಾರದ ಸದೃಢ ಬ್ಯಾಟಿಂಗ್ ಸರದಿಯನ್ನು ಹೊಂದಿದೆ. ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಹೂಡಾ ನಡುವೆ ಮಧ್ಯಮ ಕ್ರಮಾಂಕಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಇವರಲ್ಲೊಬ್ಬರಿ ಗಷ್ಟೇ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಸಿಗಲು ಸಾಧ್ಯ.
ಶ್ರೇಯಸ್ ಚುಟುಕು ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಸಂಪಾದಿಸುವಲ್ಲಿ ವಿಫಲರಾಗಿ ದ್ದಾರೆ. 3 ಪಂದ್ಯಗಳಲ್ಲಿ ಗಳಿಸಿದ್ದು 0, 10 ಮತ್ತು 24 ರನ್ ಮಾತ್ರ. ಅಯ್ಯರ್‌ಗೆ 9 ಪಂದ್ಯ ಗಳನ್ನು ಆಡುವ ಅವಕಾಶ ಸಿಕ್ಕಿದೆ. ಕೆಲವೊಮ್ಮೆ 10 ಓವರ್ ಒಳಗೆ ಕ್ರೀಸ್ ಇಳಿದರೂ ಒಂದೂ ಅರ್ಧ ಶತಕ ಹೊಡೆಯಲು ಸಾಧ್ಯವಾಗಿಲ್ಲ.
ದೀಪಕ್ ಹೂಡಾ ಸಿಕ್ಕಿದ ಆವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳುತ್ತಿದ್ದಾರೆ. ಮ್ಯಾಚ್ ವಿನ್ನರ್ ಕೂಡ ಆಗಿದ್ದಾರೆ. ಆಫ್ಬ್ರೇಕ್ ಬೌಲಿಂಗ್ ಕೂಡ ಮಾಡಬಲ್ಲರು. 3ನೇ ಮುಖಾಮುಖೀಯಲ್ಲಿ ಬೌಲಿಂಗ್ ಆರಂಭಿಸಿದ್ದೇ ಹೂಡಾ.
3ನೇ ಪಂದ್ಯದ ವೇಳೆ ಸೊಂಟದ ನೋವಿನಿಂದಾಗಿ ಕ್ರೀಸ್ ತ್ಯಜಿಸಿದ್ದ ನಾಯಕ ರೋಹಿತ್ ಶರ್ಮ ಇವರೊಂದಿಗೆ ಕಳೆದ ಪಂದ್ಯದ ಹೀರೋ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಉಳಿದಂತೆ ಪಂತ್, ಪಾಂಡ್ಯ, ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ ಮುಂದುವರಿಯುವ ಎಲ್ಲ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ ಕೂಡ ರೇಸ್‌ನಲ್ಲಿದ್ದಾರೆ.