Thursday, 12th December 2024

ನಾಥನ್ ಲಿಯಾನ್ 500 ಟೆಸ್ಟ್ ವಿಕೆಟ್ ಕಿತ್ತ ಎಂಟನೇ ಆಟಗಾರ

ಪರ್ತ್‌: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ನಾಥನ್ ಲಿಯಾನ್ 500 ಟೆಸ್ಟ್ ವಿಕೆಟ್ ಪಡೆದ ಎಂಟನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಲಿಯಾನ್‌ಗಿಂತ ಮೊದಲು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಏಳು ಬೌಲರುಗಳು 500 ವಿಕೆಡುಗಳನ್ನು ಪಡೆದಿದ್ದರು. ಮುತ್ತಯ್ಯ ಮುರಳೀಧರನ್ (800 ವಿಕೆಟ್) ಅಗ್ರಸ್ಥಾನದಲ್ಲಿದ್ದರೆ, ಶೇನ್ ವಾರ್ನ್ (708), ಜೇಮ್ಸ್ ಆಂಡರ್ಸನ್ (690), ಅನಿಲ್ ಕುಂಬ್ಳೆ (619), ಸ್ಟುವರ್ಟ್ ಬ್ರಾಡ್ (604), ಗ್ಲೆನ್ ಮೆಗ್ರಾತ್ (563) ಮತ್ತು ಕರ್ಟ್ನಿ ವಾಲ್ಷ್ (519) ನಂತರದ ಸ್ಥಾನಗಳಲ್ಲಿದ್ದಾರೆ.

496 ವಿಕೆಟುಗಳೊಂದಿಗೆ ಟೆಸ್ಟ್ ಪ್ರಾರಂಭಿಸಿದರು. ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ನಲ್ಲಿ 499 ರನ್ನುಗಳಿಗೆ ಸಿಲುಕಿದರು. ಆದರೆ ಅಂತಿಮವಾಗಿ ಅಶ್ರಫ್ ಅವರನ್ನು ಔಟ್ ಮಾಡುವ ಮೂಲಕ 500 ವಿಕೆಟ್ಗಳ ಗಡಿಯನ್ನು ತಲುಪಿದರು.

ಲಿಯಾನ್, 2011 ರಲ್ಲಿ ಪಾದಾರ್ಪಣೆ ಮಾಡಿದರು ಮತ್ತು 8/50 ರ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇಲ್ಲಿಯವರೆಗೆ ನಾಲ್ಕು ಬಾರಿ 23 ಐದು ವಿಕೆಟ್ ಸಾಧನೆ ಮತ್ತು 10 ವಿಕೆಟುಗಳನ್ನು ಪಡೆದಿದ್ದಾರೆ.