Friday, 22nd November 2024

ಟೀಂ ಇಂಡಿಯಾದ ಆರು ವಿಕೆಟ್‌ ಪತನ: 344 ರನ್‌ ಮುನ್ನಡೆ

ಚೆನ್ನೈ: ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು 134 ರನ್ ಗೆ ನಿಯಂತ್ರಿಸಿ 195 ರನ್ ಮುನ್ನಡೆ ಪಡೆದಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಆಘಾತಕ್ಕೆ ಒಳಗಾಗಿದೆ.

ಮೂರನೇ ದಿನ ಸೋಮವಾರ ಭಾರತ ಭೋಜನ ವಿರಾಮಕ್ಕೂ ಮುನ್ನ ಆರು ವಿಕೆಟ್ ಕಳೆದುಕೊಂಡು 149 ರನ್‌ ಗಳಿಸಿತ್ತು. ಈ ಮೂಲಕ ಒಟ್ಟು 344 ರನ್‌ ಮುನ್ನಡೆಯಲ್ಲಿದೆ.

25 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಶರ್ಮಾ 1 ರನ್ ಸೇರಿಸಿ ಔಟಾದರು. ಚೇತೇಶ್ವರ ಪೂಜಾರ ನಿನ್ನೆಯ ಸ್ಕೋರ್ ಗೆ ಒಂದೂ ರನ್ ಸೇರಿಸದೇ 7 ರನ್ ಗೆ ಔಟಾದರು. ರಿಷಭ್ ಪಂತ್(8) ಹಾಗೂ ಅಜಿಂಕ್ಯ ರಹಾನೆ(10) ಅಲ್ಪ ಮೊತ್ತಕ್ಕೆ ಔಟಾದರು. ನಾಯಕ ವಿರಾಟ್ ಕೊಹ್ಲಿ(ಔಟಾಗದೆ 22) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸ್ಪಿನ್ನರ್ ಜಾಕ್ ಲೀಚ್ 63 ರನ್ ಗೆ 3 ವಿಕೆಟ್ ಗಳನ್ನು ಕಬಳಿಸಿದರು. 46 ರನ್ ಗೆ 2 ವಿಕೆಟ್ ಪಡೆದ ಮೊಯಿನ್ ಅಲಿ ಅವರು ಲೀಚ್ ಗೆ ಸಾಥ್ ನೀಡಿದರು.