Abhishek vs Digvesh Fight: ಪಂದ್ಯ ಮುಗಿದರೂ ನಿಲ್ಲದ ಅಭಿಷೇಕ್-ರಾಠಿ ವಾಗ್ಯುದ್ಧ
ಐಪಿಎಲ್‌ನಲ್ಲಿ ಇದೇ ಸೆಲೆಬ್ರೇಷನ್‌ಗಾಗಿ ದಿಗ್ವೇಶ್ ರಾಠಿ ಎರಡು ಬಾರಿ ದಂಡನೆಗೊಳಗಾಗಿದ್ದರು. ಆದರೂ ಕೂಡ ಅವರು ಈ ಸಂಭ್ರಮಾಚರಣೆ ನಿಲ್ಲಿಸುವಂತೆ ಕಾಣುತ್ತಿಲ್ಲ. ಅತಿಯಾದ ಸಂಭ್ರಮಾಚರಣೆ ಕಂಡು ತಾಳ್ಮೆ ಕಳೆದುಕೊಂಡ ಅಭಿಷೇಕ್ ಮೈದಾನದಲ್ಲೇ ನಿನ್ನ ಜುಟ್ಟು ಹಿಡಿದು ನೆಲಕ್ಕೆ ಬಡಿಯುತ್ತೇನೆ ಎಂದು ಸನ್ನೆ ಮಾಡಿ ರಾಠಿಗೆ ಎಚ್ಚರಿಕೆ ನೀಡಿದರು.

ಲಕ್ನೋ: ಸೋಮವಾರ ನಡೆದಿದ್ದ ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್(LSG vs SRH) ನಡುವಣ ಪಂದ್ಯದಲ್ಲಿ ಅಭಿಷೇಕ್ ಶರ್ಮ(Abhishek Sharma) ಮತ್ತು ದಿಗ್ವೇಶ್ ರಾಠಿ ನಡುವೆ ಭಾರೀ ವಾಗ್ಯುದ್ಧ(Abhishek vs Digvesh Fight) ನಡೆಯಿತು. ಅಭಿಷೇಕ್‌ರ ವಿಕೆಟ್ ಕಿತ್ತ ರಾಠಿ(Digvesh Singh Rathi), ನೋಟ್‌ಬುಕ್ ಸಂಭ್ರಮಾಚರಣೆ ನಡೆಸಿದ್ದಲ್ಲದೇ ಕೈ ಸನ್ನೆ ಮೂಲಕ ಮೈದಾನದಿಂದ ಹೊರಹೋಗುವಂತೆ ಸೂಚಿಸಿದರು. ಇದು ಅಭಿಷೇಕ್ ಕೋಪಕ್ಕೆ ಕಾರಣವಾಯಿತು. ಬಳಿಕ ಇಬ್ಬರ ಜಗಳಕ್ಕಿಳಿದರು. ಅಂಪೈರ್‌ಗಳು, ಸಹ ಆಟಗಾರರು ಇಬ್ಬರನ್ನೂ ಸಮಾಧಾನಪಡಿಸಿದರು. ಆದರೆ ಪಂದ್ಯದ ಬಳಿಕವೂ ಕೂಡ ಇಬ್ಬರೂ ಮತ್ತೆ ಕಿತ್ತಾಟ ನಡೆಸಿ ಕೊನೆಗೆ ಪರಸ್ಪರ ಕೈಕುಲುಕಿದರು.
ಐಪಿಎಲ್‌ನಲ್ಲಿ ಇದೇ ಸೆಲೆಬ್ರೇಷನ್‌ಗಾಗಿ ದಿಗ್ವೇಶ್ ರಾಠಿ ಎರಡು ಬಾರಿ ದಂಡನೆಗೊಳಗಾಗಿದ್ದರು. ಆದರೂ ಕೂಡ ಅವರು ಈ ಸಂಭ್ರಮಾಚರಣೆ ನಿಲ್ಲಿಸುವಂತೆ ಕಾಣುತ್ತಿಲ್ಲ. ಅತಿಯಾದ ಸಂಭ್ರಮಾಚರಣೆ ಕಂಡು ತಾಳ್ಮೆ ಕಳೆದುಕೊಂಡ ಅಭಿಷೇಕ್ ಮೈದಾನದಲ್ಲೇ ನಿನ್ನ ಜುಟ್ಟು ಹಿಡಿದು ನೆಲಕ್ಕೆ ಬಡಿಯುತ್ತೇನೆ ಎಂದು ಸನ್ನೆ ಮಾಡಿ ರಾಠಿಗೆ ಎಚ್ಚರಿಕೆ ನೀಡಿದರು.
ದಾಖಲೆ ಬರೆದ ಅಭಿಷೇಕ್
ಚೇಸಿಂಗ್ ವೇಳೆ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತುಕೊಟ್ಟ ಅಭಿಷೇಕ್ ಶರ್ಮ ಅರ್ಧಶತಕ ಬಾರಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 20 ಎಸೆತಗಳಿಂದ 6 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ 59 ರನ್ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಬಾರಿ ಅರ್ಧಶತಕ ಸಿಡಿಸಿದ ನಿಕೋಲಸ್ ಪೂರನ್(4) ದಾಖಲೆ ಸರಿಗಟ್ಟಿದರು.