ಬೆಂಗಳೂರು: ಇದೇ ನವೆಂಬರ್ 30ರಿಂದ ಯುಎಇಯಲ್ಲಿ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್(ACC U-19 Asia Cup) ಪಂದ್ಯಾವಳಿಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಮೂವರು ಕನ್ನಡಿಗರು ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ಬಿಹಾರದ ರಣಜಿ ಆಟಗಾರ, 14 ವರ್ಷದ ವೈಭವ್ ಸೂರ್ಯವಂಶಿ ಕೂಡ ಅವಕಾಶ ಪಡೆದಿದ್ದಾರೆ.
15 ಸದಸ್ಯರ ಭಾರತ ತಂಡಕ್ಕೆ ಮೊಹಮ್ಮದ್ ಅಮಾನ್ ನಾಯಕರಾಗಿದ್ದಾರೆ. ಭಾರತ ನ. 30ರಂದು ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಡಿ. 2ರಂದು ಜಪಾನ್ ಮತ್ತು ಡಿ. 4ರಂದು ಯುಎಇ ವಿರುದ್ಧ ಕಣಕ್ಕಿಳಿಯಲಿದೆ. ತಂಡದಲ್ಲಿ ಸ್ಥಾನ ಪಡೆದ ರಾಜ್ಯದ ಆಟಗಾರರೆಂದರೆ ಹಾರ್ದಿಕ್ ರಾಜ್, ಕೆ.ಪಿ. ಕಾರ್ತಿಕೇಯ ಮತ್ತು ಸಮರ್ಥ್ ನಾಗರಾಜ್.
ಭಾರತ ತಂಡ
ಆಯುಷ್ , ವೈಭವ್ ಸೂರ್ಯವಂಶಿ, ಸಿ.ಆಂಡ್ರೆ ಸಿದ್ಧಾರ್ಥ್, ಎಂ.ಡಿ.ಅಮನ್ (ನಾಯಕ), ಕಿರಣ್ ಚೋರಮಲೆ (ಉಪನಾಯಕ), ಪ್ರಣವ್ ಪಂತ್, ಹರ್ಬನಾಶ್ ಸಿಂಗ್ ಪಾಂಗಾಲಿಯಾ, ಅನುರಾಗ್ ಕೌಡೆ, ಹಾರ್ದಿಕ್ ರಾಜ್, ಎಂ.ಡಿ.ಎನನ್, ಕೆ.ಪಿ.ಕಾರ್ತಿಕೇಯ, ಸಮರ್ಥ್ ನಾಗರಾಜ, ಯುಧಾಜಿತ್ ಗುಹಾ, ಚೇತನ್ ಶರ್ಮಾ, ನಿಖಿಲ್ ಕುಮಾರ್. ಪ್ರಯಾಣಿಸದ ಮೀಸಲು: ಸಾಹಿಲ್ ಪರ್ಖ್, ನಮನ್ ಪುಷ್ಪಕ್, ಅನ್ಮೋಲ್ಜಿತ್ ಸಿಂಗ್, ಪ್ರಣವ್ ರಾಘವೇಂದ್ರ, ಡಿ. ದೀಪೇಶ್.
ಇದನ್ನೂ ಓದಿ IND vs AUS: ಮೊದಲ ಟೆಸ್ಟ್‌ಗೆ ರೋಹಿತ್, ಗಿಲ್, ರಾಹುಲ್ ಅಲಭ್ಯ!
SMAT 2024: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ರಾಜ್ಯ ತಂಡ ಪ್ರಕಟ
ನವೆಂಬರ್ 23ರಿಂದ ಡಿಸೆಂಬರ್ 5ರವರೆಗೆ ಇಂದೋರ್‌ನಲ್ಲಿ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (SMAT 2024) ಕೂಟಕ್ಕೆ 15 ಮಂದಿ ಸದಸ್ಯರ ಕರ್ನಾಟಕ ತಂಡ ಪ್ರಕಟವಾಗಿದೆ. ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ (Mayank Agarwal) ತಂಡದ ನಾಯಕನಾಗಿದ್ದಾರೆ.
ಅನುಭವಿ ಆಟಗಾರ ಮನೀಶ್ ಪಾಂಡೆ ಉಪ ನಾಯಕನಾಗಿದ್ದು, ವಿಕೆಟ್ ಕೀಪರ್ ಗಳಾಗಿ ಶ್ರೀಜಿತ್ ಕೆಎಲ್ ಮತ್ತು ಚೇತನ್ ಎಲ್ ಆರ್ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ವೇಗಿ ವೈಶಾಖ್ ವಿಜಯ್ ಕುಮಾರ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವಿಜಯ್ ಕುಮಾರ್ ಹರಿಣಗಳ ನಾಡಿನಲ್ಲಿ ಪದಾರ್ಪಣೆ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ತಂಡದ ಪರ ಆಡಿದ್ದ ಪಡಿಕ್ಕಲ್ ಮರಳಿ ರಾಜ್ಯ ತಂಡಕ್ಕೆ ಆಗಮಿಸಿದ್ದಾರೆ. ಸಂಭಾವ್ಯ 30 ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅಂತಿಮ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾದರು.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ (ಉಪ ನಾಯಕ), ದೇವದತ್ತ ಪಡಿಕ್ಕಲ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್, ಶ್ರೀಜಿತ್ ಕೆಎಲ್, ವೈಶಾಖ್ ವಿಜಯ್ ಕುಮಾರ್, ಮೆಖೈಲ್ ಎಚ್ ನರೋನ್ಹಾ, ಕೌಶಿಕ್ ವಿ, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಚೇತನ್ ಎಲ್ ಆರ್, ಶುಭಾಂಗ್ ಹೆಗ್ಡೆ ಮತ್ತು ಮನ್ವಂತ್ ಕುಮಾರ್ ಎಲ್.