Sunday, 15th December 2024

ಆರ್ಚರಿ ಯೂತ್ ಚಾಂಪಿಯನ್‌ಶಿಪ್: ನಾಲ್ಕನೇ ಚಿನ್ನದ ಪದಕ ಗೆದ್ದ ಅದಿತಿ ಸ್ವಾಮಿ

ಆರ್ಚರಿ ಯೂತ್ ಚಾಂಪಿಯನ್‌ಶಿಪ್  ಈವೆಂಟ್‌ನಲ್ಲಿ ಭಾರತದ ಅದಿತಿ ಸ್ವಾಮಿ ನಾಲ್ಕನೇ ಚಿನ್ನದ ಪದಕವನ್ನು ಗೆದ್ದುಕೊಂಡಿ ದ್ದಾರೆ.

ಭಾರತದ ಯುವ ಬಿಲ್ಲುಗಾರ್ತಿ ಅದಿತಿ ಸ್ವಾಮಿ ಅಂಡರ್ 18 ಕಾಂಪೌಂಡ್ ಆರ್ಚರಿಯಲ್ಲಿ ವಿಶ್ವ ಚಾಂಪಿಯನ್ ಆದರು. ಅದಿತಿ 142-136ರಲ್ಲಿ ಅಮೆರಿಕದ ಲೀನ್ ಡ್ರೇಕ್ ಅವರನ್ನು ಸೋಲಿಸಿ ಚಾಂಪಿಯನ್ ಆದರು.

ಆರಂಭದಿಂದಲೇ ಮೇಲುಗೈ ಸಾಧಿಸಿದ ಅದಿತಿ ಐದು ಪಾಯಿಂಟ್‌ಗಳ ಮುನ್ನಡೆ ಸಾಧಿಸಿ ಭಾರತಕ್ಕೆ ಚಿನ್ನದ ಪದಕವನ್ನು ಖಚಿತ ಪಡಿಸಿದರು. ಹಿರಿಯರ ವಿಭಾಗದಲ್ಲಿ, ಅದಿತಿ ಕಳೆದ ತಿಂಗಳು ಕೊಲಂಬಿಯಾದಲ್ಲಿ ಭಾಗವಹಿಸಿದ್ದರು ಮತ್ತು ಟೀಮ್ ಈವೆಂಟ್‌ ನಲ್ಲಿ ಕಂಚಿನ ಪದಕ ಗೆದ್ದರು.