ನ್ಯೂಯಾರ್ಕ್: ಜೂನ್ 9 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಜಾಹೀರಾತು ದರ ಗಗನಕ್ಕೇರಿದೆ.
ಅಂದಾಜಿನ ಪ್ರಕಾರ ಜಾಹೀರಾತು ನೀಡಲು ಒಂದು ಸೆಕೆಂಡ್‌ಗೆ 4 ಲಕ್ಷ ರೂ (US$ 4,800) ಪಾವತಿ ಮಾಡಬೇಕಾಗುತ್ತದೆ.
ಆರಂಭದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ನೀರಸವಾಗಿತ್ತು, ಯುಎಸ್‌ಎ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಕ್ರಿಕೆಟ್ ಪ್ರೇಮಿಗಳು ವಿಶ್ವಕಪ್ ಬಗ್ಗೆ ಚರ್ಚೆ ಮಾಡಲು ಆರಂಭಿಸಿದ್ದಾರೆ. ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಈ ಬಾರಿ ಟಿ20 ವಿಶ್ವಕಪ್ ಪಂದ್ಯಾವಳಿ ಯಶಸ್ಸಿಗೆ ನಿರ್ಣಾಯಕವಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ಹಣಾಹಣಿಯನ್ನು ನೋಡಲು ಕೋಟ್ಯಂತರ ಕಾತರರಾಗಿದ್ದಾರೆ.
ಪಂದ್ಯಾವಳಿಯಲ್ಲಿನ ಇತರ ಪಂದ್ಯಗಳಿಗೆ ಹೋಲಿಸಿದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದ ಜಾಹೀರಾತು ದರ ಗಗನಕ್ಕೇರಿದೆ. ಭಾರತ ಪಾಕಿಸ್ತಾನ ಪಂದ್ಯದ ವೇಳೆ 10-ಸೆಕೆಂಡ್ ಜಾಹೀರಾತು ಸ್ಲಾಟ್‌ಗೆ ರೂ 4 ಮಿಲಿಯನ್ (₹40 ಲಕ್ಷಗಳು) ವೆಚ್ಚವಾಗುತ್ತದೆ ಎಂದು ಅಂದಾಜಿಸಿದೆ.
ಎಮಿರೇಟ್ಸ್, ಸೌದಿ ಅರಾಮ್ಕೊ ಮತ್ತು ಕೋಕಾ-ಕೋಲಾಗಳು ಟಿ20 ವಿಶ್ವಕಪ್ ಪಂದ್ಯಾವಳಿಗೆ ಪ್ರಮುಖ ಪ್ರಾಯೋಜಕರಾಗಿದ್ದಾರೆ. ದಕ್ಷಿಣ ಏಷ್ಯಾ ಭಾಗದ ಜನರಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಪಂದ್ಯದ ಸಮಯ ನಿಗದಿ ಮಾಡಲಾಗಿದ್ದು, ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಮಾಡಲಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಈ ಪಂದ್ಯಾವಳಿಯನ್ನು ವಿಶ್ವದಾದ್ಯಂತ ಕ್ರಿಕೆಟ್‌ನ ವ್ಯಾಪ್ತಿಯನ್ನು ವಿಸ್ತರಿಸಲು ಗುರಿಯನ್ನು ಹೊಂದಿದೆ. 2028 ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಿದ್ದು, ಅದಕ್ಕೂ ಮುನ್ನ ಇತರೆ ದೇಶಗಳಲ್ಲಿ ಕ್ರಿಕೆಟ್ ಪರಿಚಯಿಸಲು ವಿವಿಧ ಕ್ರಮಗಳನ್ನು ಅನುಸರಿಸುತ್ತಿದೆ.
ಟೆಕ್ ಸಿಇಒಗಳಾದ ಸುಂದರ್ ಪಿಚೈ (ಆಲ್ಫಾಬೆಟ್), ಸತ್ಯ ನಾಡೆಲ್ಲಾ (ಮೈಕ್ರೋಸಾಫ್ಟ್), ಮತ್ತು ಶಂತನು ನಾರಾಯಣ್ (ಅಡೋಬ್) ಯುಎಸ್ ಮೂಲದ ಟಿ20 ಫ್ರಾಂಚೈಸ್ ಲೀಗ್‌ನ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ.
ಪಾಕಿಸ್ತಾನ ತಂಡ ಈ ಬಾರಿ ತಮ್ಮ ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಸೂಪರ್ ಓವರ್ ನಲ್ಲಿ ಸೋತಿದ್ದಾರೆ. ಭಾರತ ತಮ್ಮ ಮೊದಲ ಪಂದ್ಯವನ್ನು ಕೆನಡಾ ವಿರುದ್ಧ ಗೆದ್ದುಕೊಂಡಿದ್ದಾರೆ. ಪಾಕಿಸ್ತಾನ ಏನಾದರೂ ಭಾರತದ ವಿರುದ್ಧ ಸೋತರೆ ಸೂಪರ್ 8 ಹಂತಕ್ಕೆ ತಲುಪುವುದು ಕಷ್ಟವಾಗಲಿದೆ.