Thursday, 19th September 2024

ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ

ಢಾಕಾ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಿದೆ. ಜು.14 ಮತ್ತು 16 ರಂದು ಸಿಲ್ಹೆಟ್‌ ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಗಾಗಿ ಅಫ್ಘಾನಿಸ್ತಾನದ ಟಿ20 ತಂಡವನ್ನು ಪ್ರಕಟಿಸಲಾಗಿದೆ.

ವಿಕೆಟ್-ಕೀಪರ್ ಕಂ ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ತಂಡಕ್ಕೆ ಮರಳಿದ್ದಾರೆ.

ಮೊಹಮ್ಮದ್ ಶಹಜಾದ್ 2015 ರಲ್ಲಿ ಒಂದು ಶತಕ ಮತ್ತು 12 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸ್ವರೂಪದಲ್ಲಿ ಮೊಹಮ್ಮದ್ ಶಹಜಾದ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಅಫ್ಘಾನಿಸ್ತಾನ ತಂಡದಲ್ಲಿ ನವೀನ್-ಉಲ್-ಹಕ್ ಕೂಡ ಸ್ಥಾನ ಪಡೆದಿದ್ದಾರೆ.

ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್, ರಹಮಾನುಲ್ಲಾ ಗುರ್ಬಾಜ್, ಹಜರ ತುಲ್ಲಾ ಝಜೈ, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್ ಮತ್ತು ನೂರ್ ಅಹ್ಮದ್ ಅವರಂತಹ ಇತರ ರೆಗ್ಯುಲರ್‌ ಆಟಗಾರರನ್ನು ಬಾಂಗ್ಲಾದೇಶ ವಿರುದ್ಧದ ಸರಣಿಯ ತಂಡದಲ್ಲಿ ಸೇರಿಸಲಾಗಿದೆ.

ಟಿ20 ಸರಣಿಗೂ ಮುನ್ನ ಮೂರು ಪಂದ್ಯಗಳ ಏಕದಿನ ಸರಣಿ ಜು.5-11ರವರೆಗೆ ಚಿತ್ತಗಾಂಗ್‌ ನಲ್ಲಿ ನಡೆಯಲಿದೆ.

ರಶೀದ್ ಅವರು ಬಾಂಗ್ಲಾದೇಶ ವಿರುದ್ಧದ ODI ಸರಣಿಯಲ್ಲೂ ಆಡಲಿದ್ದಾರೆ. ಎರಡು ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ದಿಂದ ಹೊರಗುಳಿದಿದ್ದರು.

ಅಫ್ಘಾನಿಸ್ತಾನ ತಂಡ:

ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ ಜಜೈ, ಮೊಹಮ್ಮದ್ ಶಹಜಾದ್, ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಸೇದಿಕ್ ಅಟಲ್, ಕರೀಂ ಜನತ್, ಅಜ್ಮತುಲ್ಲಾ ಉಮರ್ಜಾಯ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ವಫ್ರೆ ಹಕ್ಮನ್ ಅಹ್ಮದ್, ಮುಜೀಬ್ ಉರ್ ರೆಹಮಾನ್

Leave a Reply

Your email address will not be published. Required fields are marked *