Sunday, 15th December 2024

ಟಾಸ್​ ಗೆದ್ದ ಅಫ್ಘಾನ್ ತಂಡದಿಂದ ಬ್ಯಾಟಿಂಗ್​ ಆಯ್ಕೆ

ಮುಂಬೈ : ಮುಂಬೈನ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ ನಡೆಯುತ್ತಿದೆ.

ಇತ್ತೀಚಿನ ವರದಿಯಂತೆ, ಅಫ್ಘಾನಿಸ್ತಾನ ತಂಡ ಒಂದು ವಿಕೆಟ್ ನಷ್ಟಕ್ಕೆ 120 ರನ್‌ ಗಳಿಸಿದೆ. ಆರಂಭಿಕ ಇಬ್ರಾಹಿಂ ಜದ್ರನ್ ಅರ್ಧಶತಕ ಬಾರಿಸಿ, ಆಡುತ್ತಿದ್ದಾರೆ. ಉಭಯ ತಂಡಗಳಿಗೂ ಸೆಮೀಸ್‌ ತಲುಪಲು ಗೆಲ್ಲುವುದು ಅನಿವಾರ್ಯ. ಈಗಾಗಲೇ ಆಸೀಸ್‌ ತಂಡ ಮೂರನೇ ಸ್ಥಾನದಲ್ಲಿದೆ.

ಸೂಪರ್​ ಫೋರ್​ ತಲುಪಲು ಅಫ್ಘಾನಿಸ್ತಾನಕ್ಕೆ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಆಸೀಸ್​ ಒಂದು ವೇಳೆ ಅಫ್ಘಾನ್​ಅನ್ನು ಮಣಿಸಿದರೆ, ನೇರವಾಗಿ ಸೆಮಿಫೈನಲ್​ಗೆ ತಲುಪಲಿದೆ.

ಅಫ್ಘಾನಿಸ್ತಾನ ತಂಡದ ಪ್ಲೇಯಿಂಗ್ 11​ : ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ಸಿ), ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್(w), ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್​

ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ 11​ : ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ಡಬ್ಲ್ಯೂ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ಸಿ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್