Sunday, 8th September 2024

ಟಾಸ್​ ಗೆದ್ದ ಅಫ್ಘಾನಿಸ್ತಾನ, ಬ್ಯಾಟಿಂಗ್​ ಆಯ್ಕೆ

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ವಿಶ್ವಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಟಾಸ್​ ಗೆದ್ದ ಅಫ್ಘಾನಿಸ್ತಾನ, ಮೊದಲು ಬ್ಯಾಟಿಂಗ್​ ಆರಿಸಿಕೊಂಡಿದೆ.

ಆಸ್ಟ್ರೇಲಿಯಾದೊಂದಿಗೆ ಮೊದಲು ಗೆಲುವು ಸಾಧಿಸಿರುವ ಭಾರತ, ಅಫ್ಘಾನಿಸ್ತಾನದ ವಿರುದ್ಧದ ಪಂದವನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಬಾಂಗ್ಲಾದೇಶದ ವಿರುದ್ಧ ಸೋಲು ಅನುಭವಿಸಿರುವ ಅಫ್ಘಾನಿಸ್ತಾನ ತಂಡ ಕೂಡ ಟೀಂ ಇಂಡಿಯಾಗೆ ಕಠಿಣ ಸವಾಲನ್ನು ನೀಡುವ ನಿರೀಕ್ಷೆ ಹೊಂದಿದೆ.

ಭಾರತ ಬಳಗ: ರೋಹಿತ್ (ನಾಯಕ), ಇಶಾನ್, ಕೊಹ್ಲಿ, ಶ್ರೇಯಸ್, ರಾಹುಲ್, ಹಾರ್ದಿಕ್, ಜಡೇಜಾ, ಕುಲದೀಪ್, ಶಾರ್ದೂಲ್, ಬುಮ್ರಾ, ಸಿರಾಜ್.

ಅಫ್ಘಾನಿಸ್ತಾನ ಬಳಗ: ಗುರ್ಬಾಜ್, ಇಬ್ರಾಹಿಂ ಝದ್ರಾನ್, ಹಶ್ಮತುಲ್ಲಾ (ನಾಯಕ), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ನಬಿ, ಅಜ್ಮತುಲ್ಲಾ, ರಶೀದ್, ಮುಜೀಬ್, ಫಾರೂಕಿ, ನವೀನಲ್.

Leave a Reply

Your email address will not be published. Required fields are marked *

error: Content is protected !!