Thursday, 12th December 2024

ನ್ಯೂಜಿಲೆಂಡ್ ಸರಣಿಗೆ ಅಫ್ಘಾನಿಸ್ತಾನ ಆಟಗಾರರ ತಂಡ ಪ್ರಕಟ

ಕಾಬೂಲ್: ಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 9 ರಿಂದ ನಡೆಯಲಿದೆ. ಈ ಪಂದ್ಯಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ 20 ಆಟಗಾರರ ತಂಡವನ್ನು ಪ್ರಕಟಿಸಿದೆ. ಹಷ್ಮತುಲ್ಲಾ ಶಾಹಿದಿ ನೇತೃತ್ವದಲ್ಲಿ ಅಫ್ಘಾನ್ ತಂಡ ಮುನ್ನಡೆಯಲಿದೆ.

ಆಫ್ಘಾನಿಸ್ತಾನ ತಂಡದಿಂದ ಸ್ಟಾರ್ ಸ್ಪಿನ್ನರ್ ಅನ್ನು ಕೈ ಬಿಡಲಾಗಿದೆ.

ಸ್ಪಿನ್ನರ್ ರಶೀದ್ ಅವರನ್ನು ಆಯ್ಕೆ ಮಾಡದಿರುವುದು ಆಶ್ಚರ್ಯಕರ ನಿರ್ಧಾರ. ಅಫ್ಘಾನಿಸ್ತಾನ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ರಶೀದ್ ಐದು ಟೆಸ್ಟ್ ಪಂದ್ಯಗಳಲ್ಲಿ 22.35 ಸರಾಸರಿಯಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರು ನಾಲ್ಕು ಬಾರಿ 5 ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ.

ರಶೀದ್ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 367 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಹೊಂದಿದ್ದಾರೆ. ಐಪಿಎಲ್ ವಿಕೆಟ್‌ಗಳನ್ನು ಸೇರಿಸಿದರೆ ಅವರು ಇದುವರೆಗೆ 518 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಉತ್ತಮವಾಗಿ ಬ್ಯಾಟ್ ಬೀಸುವ ಅವರು ಟೆಸ್ಟ್‌ನಲ್ಲಿ ಅರ್ಧಶತಕವನ್ನು ಹೊಂದಿದ್ದಾರೆ.

2021 ರಲ್ಲಿ ಅಬುಧಾಬಿಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಪರ ರಶೀದ್ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಅವರು 11 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.

ವಿಕೆಟ್ ಕೀಪರ್- ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಅವರನ್ನೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಆರಂಭಿಕ ತಂಡದಲ್ಲಿ ಇಬ್ರಾಹಿಂ ಜದ್ರಾನ್, ರಹಮತ್ ಶಾ, ಗುಲ್ಬದಿನ್ ನೈಬ್ ಮತ್ತು ಅಜ್ಮತುಲ್ಲಾ ಉಮರ್ಜಾಯ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್ 9 ರಿಂದ 13 ರವರೆಗೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್‌ ಪಂದ್ಯ ಭಾರತದ ನೋಯ್ಡಾದಲ್ಲಿ ನಡೆಯಲಿದೆ. ಅಫ್ಘಾನ್ ತಂಡವು ಆಗಸ್ಟ್ 28 ರಂದು ಭಾರತವನ್ನು ತಲುಪಲಿದೆ.

ಅಫ್ಘಾನಿಸ್ತಾನದ ಆರಂಭಿಕ ತಂಡ

ಹಶ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ಅಬ್ದುಲ್ ಮಲಿಕ್, ರಹಮತ್ ಶಾ, ಬಹೀರ್ ಶಾ ಮೆಹಬೂಬ್, ಇಕ್ರಮ್ ಅಲಿಖೇಲ್ (ವಿಕೆಟ್‌ಕಪರ್), ಶಾಹಿದುಲ್ಲಾ ಕಮಾಲ್, ಗುಲ್ಬದಿನ್ ನೈಬ್, ಅಫ್ಸರ್ ಝಜೈ (ವಿಕೆಟ್‌ಕೀಪರ್), ಅಜ್ಮತುಲ್ಲಾ ರಹಮಾನ್ ಅಕ್ಬರ್, ಜಿಯಾವುರ್ ರಹಮಾನ್ ಅಕ್ಬರ್, ಖೈಸ್ ಅಹ್ಮದ್, ಜಹೀರ್ ಖಾನ್, ನಿಜತ್ ಮಸೂದ್, ಫರೀದ್ ಅಹ್ಮದ್ ಮಲಿಕ್, ನವೀದ್ ಜದ್ರಾನ್, ಖಲೀಲ್ ಅಹ್ಮದ್ ಮತ್ತು ಯಾಮ್ ಅರಬ್.